ತಿರುವನಂತಪುರಂ:ಯುವಕನೊಬ್ಬ ಬಸ್​ ನಿಲ್ದಾಣದಲ್ಲಿ ನಿಂತಿದ್ದ ಯುವತಿಯ ಕಪಾಳಕ್ಕೆ ಬಾರಿಸಿ ಎಸ್ಕೇಪ್​ ಆಗುವಾಗ ಸರಣಿ ಅಪಘಾತ ಸಂಭವಿಸಿರುವ ಘಟನೆ ಸೋಮವಾರ ಸಂಜೆ ನೆಯ್ಯಟ್ಟಿಂಕರದ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ನಡೆದಿದೆ.
ಯುವತಿಯ ಕೆನ್ನೆಗೆ ಬಾರಿಸಿದ ಯುವಕನನ್ನು ಅನವೂರ್​ ಮೂಲದ ಶಿನೋಜ್ ಎಂದು ಗುರುತಿಸಲಾಗಿದೆ. ಕಪಾಳಕ್ಕೆ ಬಾರಿಸಿ ಓಡಿ ಹೋಗುವಾಗ ಶಿನೋಜ್​ನನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಶಿನೋಜ್​ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಎಸ್ಕೇಪ್​ ಆಗುವ ಭರದಲ್ಲಿ ಸರಣಿ ಅಪಘಾತ ಮಾಡಿದ್ದಾರೆ. ಎರಡು ಆಟೋ ಮತ್ತು ನಾಲ್ಕು ಬೈಕ್​ಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಓರ್ವ ಬೈಕ್​ ಸವಾರನಿಗೆ ಗಾಯವಾಗಿದೆ.
ಇದನ್ನೂ ಓದಿ:ಸರ್ಕಾರಿ ನೌಕರರಿಗೆ 17 ಶೇಕಡಾ ವೇತನ ಹೆಚ್ಚಳ; ಸಿಎಂ ಬೊಮ್ಮಾಯಿ ಘೋಷಣೆ
ಸರಣಿ ಅಪಘಾತದ ಬಳಿಕ ಕಾರು ರಸ್ತೆಯಲ್ಲಿ ಎದುರಿಗೆ ಸಿಕ್ಕ ಪೊಲೀಸ್​ ಜೀಪ್​ಗೂ ಡಿಕ್ಕಿ ಹೊಡೆದಿದೆ. ಕಪಾಳಕ್ಕೆ ಹೊಡೆತ ತಿಂದ ಯುವತಿ ಶಿನೋಜ್​ನ ಗರ್ಲ್​ಫ್ರೆಂಡ್​ ಎಂದು ಹೇಳಲಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವ ದೃಶ್ಯ ಬಸ್​ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಯುವತಿಯ ಫೋನ್​ ಕಸಿದುಕೊಂಡು ಆಕೆಯ ಕಪಾಳಕ್ಕೆ ಬಾರಿಸಿ ಶಿನೋಜ್​ ಎಸ್ಕೇಪ್​ ಆಗುವಾಗ ಸರಣಿ ಅಪಘಾತ ನಡೆದಿದೆ.
ಶಿನೋಜ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ರಾಜ್ಯದಲ್ಲಿ ಉದ್ಯೋಗಯೋಗ: ತಗ್ಗಿದ ನಿರುದ್ಯೋಗ ದರ, ಉಪಕಸುಬು, ಸ್ವಯಂ ಉದ್ಯೋಗ ಹೆಚ್ಚಳ

ಬೇರೊಬ್ಬಳೊಂದಿಗೆ ಓಡಿ ಹೋದ ಪತಿ; ಗಂಡನ ಜತೆಗೆ ಹೋದವಳ ಪತಿಯನ್ನೇ ವಿವಾಹವಾದ ಮಹಿಳೆ

ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಯುವತಿ ದುರ್ಮರಣ: ವಿದ್ಯಾರ್ಥಿನಿಯ ಪ್ರಾಣ ಕಸಿದ ಮೊಬೈಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
