ಹಾಪುರ್​ (ಉತ್ತರ ಪ್ರದೇಶ):ಕೋವಿಡ್​ 19 ನಿಯಂತ್ರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮಾಸ್ಕ್​ ಧರಿಸದವರಿಂದ 1 ಸಾವಿರ ರೂ.ವರೆಗೂ ಜುಲ್ಮಾನೆ ವಸೂಲಿ ಮಾಡಲಾಗುತ್ತಿದೆ. ಹೀಗಿದ್ದರೂ ಉತ್ತರ ಪ್ರದೇಶ ಪೊಲೀಸರು ಮಾತ್ರ ಮಾಸ್ಕ್​ ಧರಿಸದೇ ಇರುವುದಕ್ಕೆ ವಿಭಿನ್ನವಾದ ಶಿಕ್ಷೆ ನೀಡಿ ಕುಖ್ಯಾತರಾಗಿದ್ದಾರೆ!
ಉತ್ತರ ಪ್ರದೇಶದಲ್ಲಿ ಮಧ್ಯಾಹ್ನ ನೆತ್ತಿಯ ಮೇಲೆ ಬಿಸಿಲು ಸುಡುತ್ತಿತ್ತು. ಈ ಸಂದರ್ಭದಲ್ಲಿ ರೈಲ್ವೆ ಕ್ರಾಸಿಂಗ್​ನ ಗೇಟ್​ ಹಾಕಿದ್ದರಿಂದ, ಇಬ್ಬರು ಯುವಕರು ಅಲ್ಲಿ ನಿಂತಿದ್ದರು. ಆದರೆ ಅವರು ಮಾಸ್ಕ್​ ಧರಿಸಿರಲಿಲ್ಲ. ರೈಲ್ವೆ ಕ್ರಾಸಿಂಗ್​ನಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಉತ್ತರ ಪ್ರದೇಶ ಪೊಲೀಸ್​ ಸಿಬ್ಬಂದಿ ಇದನ್ನು ಗಮನಿಸಿ, ಯುವಕರನ್ನು ತಮ್ಮ ಬಳಿ ಕರೆದರು.
ಇದನ್ನೂ ಓದಿ:Video: ಫುಟ್​ಬಾಲ್​ನ ಪ್ರಸಿದ್ಧ ಗೋಲ್​ಕೀಪರ್​ ಹೆಸರಿಟ್ಟಿದ್ದಕ್ಕೆ ಅವರಂತೆ ಗೋಲ್​ಕೀಪಿಂಗ್​ ಮಾಡೋದಾ…?
ಬಳಿಕ ಮಾಸ್ಕ್​ ಧರಿಸದೇ ಇರುವುದಕ್ಕಾಗಿ, ರೈಲ್ವೆ ಹಳಿಯ ಸಮೀಪದಲ್ಲೇ ಉರುಳು ಸೇವೆ ಮಾಡಲು ಹೇಳಿದರು. ಸರಿಯಾಗಿ ಉರುಳು ಸೇವೆ ಮಾಡುತ್ತಿಲ್ಲ ಎಂದು ಒಬ್ಬನ ಮೇಲೆ ಬೆತ್ತ ಪ್ರಹಾರ ಮಾಡಿದ್ದಲ್ಲದೆ, ಅತ್ತಿಂದಿತ್ತ, ಇತ್ತಿಂದತ್ತ ಐದಾರು ಬಾರಿ ಉರುಳು ಸೇವೆ ಮಾಡಿಸಿದರು.
ರೈಲ್ವೆ ಕ್ರಾಸಿಂಗ್​ನಲ್ಲಿ ಗೇಟ್​ ತೆರೆಯುವ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರೊಬ್ಬರು ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ಉತ್ತರ ಪ್ರದೇಶ ಪೊಲೀಸ್​ ಟ್ವಿಟರ್​ ಖಾತೆಗೆ ಟ್ಯಾಗ್​ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಒಬ್ಬ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿದ್ದ ಹೋಂಗಾರ್ಡ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
In UP's Hapur district, cops ask two men to roll on the road in the scorching heat near a railway crossing, dangerously close to railway tracks. This was the punishment for not wearing mask.@Uppolicepic.twitter.com/4fbGA4Q0b8
— Piyush Rai (@Benarasiyaa)May 19, 2020

ಬಾಲಿವುಡ್​ ನಟನಿಗೆ ವಾಟ್ಸ್​ಆ್ಯಪ್​ನಲ್ಲಿ ಬಂತು ಡಿವೋರ್ಸ್​ ನೋಟಿಸ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 9 =
Remember me
