ಗುರುಗ್ರಾಮ:ಮೆನು ಕಾರ್ಡಿನಲ್ಲಿ ಇರುವ ಬೆಲೆಗಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದೀಯ ಎಂದು ಆರೋಪಿಸಿ ಯುವಕರ ಗುಂಪೊಂದು ಟೀ ಅಂಗಡಿಯನ್ನು ಧ್ವಂಸ ಮಾಡಿ ವಿಕೃತಿ ಮೆರೆದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್​ ಸೂಚಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ಗ್ರಾಹಕರು ಇರುವ ಟೀ ಅಂಗಡಿಇ ಒಳಗೆ ಏಕಾಏಕಿ ನುಗ್ಗಿ ಕ್ಯಾಶಿಯರ್​ ಬಳಿ ವಾಗ್ವಾದ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಇದಾದ ಕೆಲವೇ ಕ್ಷಣಕ್ಕೆ ಅಂಗಡಿಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ ಗುಂಪು ಬಳಿಕ ಕ್ಯಾಶಿಯರ್​ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗುವುದನ್ನು ನೋಡಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೂವರು ಯುವಕರು ಚಹಾ ಸೇವಿಸಲೆಂದು ಪಾಲಂ ವಿಹಾರ್ ಪೋಲೀಸ್ ಠಾಣೆ ವ್ಯಾಪ್ತಿ ಅಲ್ಲಿರುವ ಪ್ರಖ್ಯಾತ ಟೀ ಅಂಗಡಿ ಒಂದಕ್ಕೆ ಹೋಗಿದ್ದಾರೆ. ಚಹಾ ಸೇವಿಸಿದ ಬಳಿಕ ಬಿಲ್​ ಪಾವತಿಸಲು ಮುಂದಾದಾಗ ಕ್ಯಾಶಿಯರ್​ 45 ರೂಪಾಯಿ ಪಾವತಿಸುವಂತೆ ಹೇಳುತ್ತಾರೆ.
#गुरुग्राममें ओल्ड#दिल्लीरोड पर मारुति कंपनी के सामने एक चाय दुकानदार को तीन युवकों की तरफ से नौ रुपये कम देने पर ऐतराज जताना महंगा पड़ गया !!इन युवकों ने अपने साथियों के साथ मिलकर दुकान में जमकर तोड़फोड़ की !!घटना सीसीटीवी में कैद !!#CCTVviralvideo#Gurugrampic.twitter.com/YUhPedTgD1
ಇದನ್ನೂ ಓದಿ:ದುಬೈನಲ್ಲಿ 50 ಕೋಟಿ ರೂ. ಬೆಲೆಯ ಪ್ರಾಪರ್ಟಿ ಗಿಫ್ಟ್​; ಕೊನೆಗೂ ಮೌನ ಮುರಿದ ನಿವೇತಾ
ಇದರಿಂದ ಕುಪಿತಗೊಂಡ ಯುವಕರು ತೆಗೆದುಕೊಂಡಿರುವ ಮೂರು ಚಹಾದ ಬೆಲೆ 36 ರೂಪಾಯಿ ಆಗಿದ್ದು, ಯಾಕೆ 45 ರೂ. ಕೊಡಬೇಕೆಂದು ಪ್ರಶ್ನಿಸಿದ್ದಾರೆ. ಇಲ್ಲ ಎಂದು ಕ್ಯಾಶಿಯರ್​ ಮೆನು ಕಾರ್ಡ್​ ತೋರಿಸಿದಾಗ ಸಿಟ್ಟಿಗೆದ್ದು ಯುವಕರು ತಮ್ಮ ಸ್ನೇಹಿತರು ಕರೆಸಿಕೊಂಡು ದಾಂಧಲೆ ನಡೆಸಿ ಅಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಇತ್ತ ಈ ಘಟನೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಕೇವಲ 9 ರೂಪಾಯಿಗಾಗಿ ಈ ರೀತಿಯ ಕೆಲಸ ಮಾಡುವುದು ಸರಿಯಲ್ಲ ಎಂದು ಹಲವರು ಕಿಡಿಕಾರಿದ್ದಾರೆ. ಇತ್ತ ವೈರಲ್​ ಆಗಿರುವ ವಿಡಿಯೋ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಮನೋಹರ್ ಲಾಲ್​ ಖಟ್ಟರ್​ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nine =
Remember me
