ತ್ರಿಸ್ಸೂರು:ಕಡಿಮೆ ಬೆಲೆಗೆ ಮದ್ಯ ಪೂರೈಕೆ ಮಾಡಲಿಲ್ಲ ಅಂತ ಆಕ್ರೋಶಗೊಂಡ ಯುವಕರಿಬ್ಬರು ಇಡೀ ಬಾರ್​ ಅನ್ನು ಧ್ವಂಸಗೊಳಿಸಿರುವ ಘಟನೆ ಕೇರಳದ ಕೊಟ್ಟಪಾಡಿಯಲ್ಲಿ ನಡೆದಿದೆ.
ಇರಿಂಗಪುರಂ ಮೂಲದ ಅಭಿಷೇಕ್​ ಅಲಿಯಾಸ್​ ಕುರುಡಿ ಮತ್ತು ಕನ್ನರಾಥ್​ ಶ್ರೀಹರಿ ಎಂಬುವರನ್ನು ಗುರುವಾಯೂರು ಪೊಲೀಸರು ಬಂಧಿಸಿದ್ದಾರೆ. ಬಾರ್​ ಅನ್ನು ಧ್ವಂಸ ಮಾಡಿದ್ದಲ್ಲದೆ, ಬಾರ್​ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಈ ಘಟನೆ ಕಳೆದ ರಾತ್ರಿ 1.30ರ ಸುಮಾರಿಗೆ ಕೊಟ್ಟಪಾಡಿಯಲ್ಲಿರುವ ಫೋರ್ಟ್​ ಗೇಟ್​ ಬಾರ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಅವಘಡ, ಕಾರ್ವಿುಕ ಸಾವು ಕುಟುಂಬಸ್ಥರಿಂದ ಪ್ರತಿಭಟನೆ
ಬಂಧಿತ ಇಬ್ಬರು ಸೇರಿ ನಾಲ್ವರು ಬಾರ್​ಗೆ ಆಗಮಿಸಿ, 140 ರೂಪಾಯಿ ಮೌಲ್ಯದ ಒಂದು ಪೆಗ್ ಮದ್ಯವನ್ನು 100 ರೂಪಾಯಿಗೆ ಕೊಡುವಂತೆ ಬೇಡಿಕೆ ಇಟ್ಟರು. ಆದರೆ, ಬಾರ್​ ಸಿಬ್ಬಂದಿ ಇದನ್ನು ನಿರಾಕರಿಸಿದರು. ಬಳಿಕ ಅಲ್ಲಿಂದು ಹೊರಟು ಹೋದ ಅವರು ಕೆಲ ಸಮಯದ ಬಳಿಕ ಪೈಪ್​ಗಳು ಮತ್ತು ಮರದ ದೊಣ್ಣೆಯನ್ನು ಹಿಡಿದು ಮತ್ತೆ ಬಾರ್​ಗೆ ಆಗಮಿಸಿದರು. ಬಳಿಕ ಬಾರ್ ಮುಂದೆ ಇದ್ದ ಕಿಟಕಿ ಗಾಜುಗಳನ್ನು ಹೊಡೆದು ಹಾಕಲು ಆರಂಭಿಸಿದರು. ಈ ವೇಳೆ ಅವರನ್ನು ತಡೆಯಲು ಹೋದ​ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿಡಿಗೇಡಿಗಳು ಧ್ವಂಸ ಮಾಡಿದ್ದರಿಂದ 2 ಲಕ್ಷ ರೂ. ಮೌಲ್ಯದ ಹಾನಿಯಾಗಿದೆ ಎಂದು ಬಾರ್​ ಮಾಲೀಕ ದೂರು ನೀಡಿದ್ದಾರೆ. ಘಟನೆ ಬಳಿಕ ಎಸ್ಕೇಪ್​ ಆಗಿದ್ದ ಆರೋಪಿಗಳನ್ನು ಚಟ್ಟುಕಲಂನಲ್ಲಿ ಬಂಧಿಸಲಾಗಿದ್ದು, ಇಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.(ಏಜೆನ್ಸೀಸ್​)
ಶೋಯಿಬ್​ ಇನ್​ಸ್ಟಾಗ್ರಾಂ ಬಯೋ ಸುಳಿವು: ಸಾನಿಯಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಖಚಿತ?

ಕೇಂದ್ರ ಸಾರಿಗೆ ಸಚಿವರನ್ನು ಭೇಟಿಯಾಗಿ ಬೆಂ-ಮೈ ಹೆದ್ದಾರಿ ಸಮಸ್ಯೆ ಸೇರಿ ಹಲವು ಬೇಡಿಕೆ ಮುಂದಿಟ್ಟ ಸಿಎಂ ಸಿದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
