ಮುಂಬೈ:ಯೂಟ್ಯೂಬ್‌ನಲ್ಲಿ ತಾಯಂದಿರು ಮತ್ತು ಮಕ್ಕಳನ್ನು ಒಳಗೊಂಡಿರುವ “ಅಸಭ್ಯ ವಿಷಯ”ದ ಬಗ್ಗೆ ಮಕ್ಕಳ ಹಕ್ಕುಗಳ ಸಂಸ್ಥೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು (NCPCR) ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಗುರುವಾರ (ಜ.11) ಯೂಟ್ಯೂಬ್ ಇಂಡಿಯಾ ವಿರುದ್ಧ ವೀಡಿಯೊಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಕುರಿತಂತೆ ಜನವರಿ 15ರಂದು ವೈಯಕ್ತಿಕವಾಗಿ ತಮ್ಮ ಮುಂದೆ ಹಾಜರಾಗುವಂತೆ ಎನ್‌ಸಿಪಿಸಿಆರ್ ತಿಳಿಸಿತ್ತು. ವಿಚಾರಣೆಗೆ ಹಾಜರಾದ ಯೂಟ್ಯೂಬ್​ ಮುಖ್ಯಸ್ಥರು ತಿಳಿಸಿದ ವಿಷಯ ಹೀಗಿದೆ.
ಇದನ್ನು ಓದಿ:BBKS10: ನಮ್ರತಾಗೆ ಕೈಮುಗಿದ ಸ್ನೇಹಿತ್​! ಬದಲಾಗಲಿವೆ ಅಭಿಪ್ರಾಯಗಳು?
ತಾಯಿ-ಮಗನ “ಚಾಲೆಂಜ್ ವೀಡಿಯೊಗಳನ್ನು” ಪೋಸ್ಟ್ ಮಾಡಿದ್ದಕ್ಕಾಗಿ ನಿರ್ದಿಷ್ಟ ಯೂಟ್ಯೂಬ್ ಚಾನೆಲ್‌ನ ನಿರ್ವಾಹಕರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇಂತಹ ಚಾನಲ್‌ಗಳ ಪಟ್ಟಿಯೊಂದಿಗೆ ಜನವರಿ 15ರಂದು ವೈಯಕ್ತಿಕವಾಗಿ ತಮ್ಮ ಮುಂದೆ ಹಾಜರಾಗುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಯೂಟ್ಯೂಬ್​ನ ಭಾರತದ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ಮುಖ್ಯಸ್ಥರಿಗೆ ಸೂಚಿಸಿತ್ತು.
ಇದನ್ನು ಓದಿ:ಮಾಳವಿಕಾ ಅವಿನಾಶ್​ ಜತೆ ಫೇಸ್​ ಟು ಫೇಸ್ | ವಿಜಯವಾಣಿ ಡಿಜಿಟಲ್​ನಲ್ಲಿ ಇಂದು ರಾತ್ರಿ 7 ಗಂಟೆಗೆ!
ಆದೇಶದಂತೆ ವಿಚಾರಣೆ ಹಾಜರಾದ ಯೂಟ್ಯೂಬ್​ ಅಧಿಕಾರಿಯೊಬ್ಬರು, ಸುದೀರ್ಘ ಚರ್ಚೆಗಳ ಬಳಿಕ ವಿಡಿಯೋ ತೆಗೆದುಹಾಕಲು ಕಾಲಾವಕಾಶ ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎನ್‌ಸಿಪಿಸಿಆರ್, ನೀಡಿರುವ ನಿರ್ದೇಶನಗಳನ್ನು ಅನುಸರಿಸಲು ಯೂಟ್ಯೂಬ್‌ಗೆ ತಿಳಿಸಿದ್ದು, ಜನವರಿ 29 ರವರೆಗೆ ಹೆಚ್ಚುವರಿ ಸಮಯ ನೀಡಿದೆ,(ಏಜೆನ್ಸೀಸ್).
BBKS10: ನಮ್ರತಾಗೆ ಕೈಮುಗಿದ ಸ್ನೇಹಿತ್​! ಬದಲಾಗಲಿವೆ ಅಭಿಪ್ರಾಯಗಳು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
