ಮುಂಬೈ:ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾಗಿ ರಿವ್ಯೂ ನೀಡುವ ಮೂಲಕ ಜನಪ್ರಿಯ ಯೂಟ್ಯೂಬರ್​ ಆಗಿ ಗುರುತಿಸಿಕೊಂಡಿದ್ದ ಅಭ್ರದೀಪ್ ಸಹಾ (ಆ್ಯಂಗ್ರಿ ರಾಂಟ್‌ಮ್ಯಾನ್) ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ 27 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ನಿಯಾನ್​ ಮ್ಯಾನ್ ಶಾರ್ಟ್ಸ್​​ ಎಂಬುವವರು ಶೀಘ್ರದಲ್ಲೇ ಅಭ್ರದೀಪ್ ಸಹಾ ಓಪನ್​ ಹಾರ್ಟ್​ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದರು. ಬಳಿಕ ಏಪ್ರಿಲ್​ 15ರಂದು ನಿಯಾನ್​ ಅಭ್ರದೀಪ್​ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಹೇಳಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜ್​ ಎಂಬುವವರು ಟ್ವೀಟ್​ ಮಾಡಿದ್ದು, ಭಾರವಾದ ಹೃದಯದಿಂದ ನಾನು ಆಭ್ರದೀಪ್​ (ಆ್ಯಂಗ್ರಿ ರಾಂಟ್‌ಮ್ಯಾನ್) ನಿನ್ನೆ (ಏಪ್ರಿಲ್ 16) ರಾತ್ರಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇನೆ. ಪ್ರತಿಯೊಬ್ಬರ ಮುಖದಲ್ಲೂ ಅವರು ನಗು ತರಿಸುತ್ತಿದ್ದ ರೀತಿ ಇನ್ನು ಮುಂದೆ ನೆನಪಾಗಿ ಉಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
#SelfMusing#AngryRantmanWith a heavy heart I have to say Abhradeep Saha or Angry Rantman as you all know him, passed away last night.Loss of words at the moment ……The memories of joy which he was able to bring on everyone's faces will surely be missed now.pic.twitter.com/BoVb69O7Fb
ಅಭ್ರದೀಪ್​ ಸಾವಿನ ಕುರಿತಂತೆ ಅವರ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಏಪ್ರಿಲ್​ 16ರಂದು ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ ಆ್ಯಂಗ್ರಿ ರಾಂಟ್​ಮ್ಯಾನ್​ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
ಯೂಟ್ಯೂಬ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ, ಕ್ರೀಡೆ ಕುರಿತಾಗಿ ರಿವ್ಯೂ ಕೊಡುವ ಮೂಲಕ ಫೇಮಸ್​ ಆಗಿರುವ ಅಭ್ರದೀಪ್​ (ಆ್ಯಂಗ್ರಿ ರಾಂಟ್​ಮ್ಯಾನ್​) ವಿಮರ್ಶೆ ಮಾಡುತ್ತಿದ್ದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದವು. ಅವರ ಯೂಟ್ಯೂಬ್​ ಚಾನೆಲ್​ನಲ್ಲಿ 4.81 ಲಕ್ಷ ಚಂದಾದಾರರನ್ನು ಹೊಂದಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
