ಹೈದರಾಬಾದ್: ಯೂಟ್ಯೂಬರ್ ಅರ್ಮಾನ್ ಮಲಿಕ್ ಎಂಬಾತ, ಪಾಯಲ್  ಮತ್ತು ಕೃತಿಕಾ ಎಂಬ ಇಬ್ಬರು ಮಹಿಳೆಯರನ್ನು ವಿವಾಹವಾಗಿದ್ದ. ಇದೀಗ ಇವರಿಬ್ಬರು ಒಟ್ಟೊಟ್ಟಿಗೆ ಗರ್ಭಿಣಿಯಾಗಿದ್ದಾರೆ ಎಂದು ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ಸಂತಸವನ್ನು ಹಂಚಿಕೊಂಡಿದ್ದಾನೆ. ಫೋಟೋ ಪೋಸ್ಟ್​ ಮಾಡಿ ‘ಇದು ನನ್ನ ಕುಟುಂಬ’ ಎಂಬ ಬರೆದುಕೊಂಡಿರುವುದು ವೈರಲ್ ಆಗಿದೆ.
ಇದರ ಬೆನ್ನಲ್ಲೇ ಅರ್ಮಾನ್ ಮಲಿಕ್‌ನ ಬಗ್ಗೆ ಹಲವಾರು ವಿಷಯಗಳು ಹೊರಗೆ ಬರತೊಡಗಿವೆ. ಆತ ಎರಡಲ್ಲ, ಮೂರು ಮದುವೆಯಾಗಿದ್ದಾನೆ ಎಂಬ ಸಂಗತಿಯೂ ಅದರಲ್ಲೊಂದು. ಪಾಯಲ್ ಜತೆ ಸೇರುವುದಕ್ಕಿಂತ ಮೊದಕೇ ಈತ ಮದುವೆಯಾಗಿದ್ದ. ಮನೆಯವರು ತೋರಿಸಿದ ಹುಡುಗಿಯನ್ನು ಅರ್ಮಾನ್ ಮಲಿಕ್ ವಿವಾಹವಾಗಿದ್ದ. ಆಕೆಯೊಂದಿಗೆ ಕೆಲ ಸಮಯ ಸಂಸಾರ ನಡೆಸಿದ್ದ. ಈ ದಂಪತಿಗೆ ಎರಡು ಮಕ್ಕಳಿದ್ದರು ಎಂದು ವರದಿಯೊಂದು ಉಲ್ಲೇಖಿಸಿದೆ.
ಸದ್ಯ ಅರ್ಮಾನ್ ಮಲಿಕ್, ಪಾಯಲ್ ಎಂಬಾಕೆಯ ಜತೆಗೆ ಎರಡನೇ ವಿವಾಹವಾಗಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಪಾಯಲ್ ಜತೆಗೆ ಅರ್ಮಾನ್ ಮದುವೆಯಾಗಿಲ್ಲ, ಇವರಿಬ್ಬರು 2011ರಿಂದ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದಾರೆ. ಇವರಿಬ್ಬರಿಗೆ ಒಬ್ಬ ಮಗನಿದ್ದಾನೆ. ಈತ ಮೂರನೇ ಪತ್ನಿ ಕೃತಿಕಾ ಜತೆಗೆ ಮಾತ್ರ ಕಾನೂನುಬದ್ಧವಾಗಿ ಮದುವೆಯಾಗಿದ್ದಾನೆ ಎನ್ನಲಾಗಿದೆ.
A post shared by Armaan Malik (@armaan__malik9)

ಅರ್ಮಾನ್ ಮಲಿಕ್ ಎಂಬ ಹೆಸರು ನೋಡಿ ಎಲ್ಲರೂ ಈತ ಇಸ್ಲಾಂ ಧರ್ಮಕ್ಕೆ ಸೇರಿದವನು ಎಂದು ತಿಳಿದುಕೊಂಡಿದ್ದರು. ಆದರೆ ಅರ್ಮಾನ್ ಮಲಿಕ್​ನ ನಿಜ ಹೆಸರು ಸಂದೀಪ್. ಹಿಂದೂ ಧರ್ಮದಲ್ಲಿ ಬಹುಪತ್ನಿತ್ವ ಹೊಂದಲು ಅವಕಾಶವಿಲ್ಲ. ಆದರೆ ಇಸ್ಲಾಂ ಧರ್ಮದಲ್ಲಿ ಕಾನೂನುಬದ್ಧವಾಗಿ ನಾಲ್ಕು ಮದುವೆ (ಶರಿಯಾ ಪ್ರಕಾರ) ಆಗಬಹುದು. ಹೀಗಾಗಿ ಸಂದೀಪ್ ತನ್ನ ಹೆಸರನ್ನು ಅರ್ಮಾನ್ ಎಂದು ಬದಲಾಯಿಸಿಕೊಂಡಿದ್ದಾನೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಅರ್ಮಾನ್ ಮಲಿಕ್ ವಿಡಿಯೋವೊಂದರಲ್ಲಿ ನಾನು ಹಿಂದೂ ಧರ್ಮದಲ್ಲೇ ಇದ್ದೇನೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಲ್ಲ ಎಂದು ಹೇಳಿಕೊಂಡಿದ್ದಾನೆ ಎಂದಿದ್ದಾರೆ ಕೆಲವು ನೆಟ್ಟಿಗರು.(ಏಜೆನ್ಸೀಸ್)
ಒಂದೇ ಬಾರಿಗೆ ನನ್ನ ಇಬ್ಬರು ಪತ್ನಿಯರು ಗರ್ಭಿಣಿಯರಾಗಿದ್ದಾರೆ… ಸಂತಸ ಹಂಚಿಕೊಂಡ ಯೂಟ್ಯೂಬರ್; ಕಾಲೆಳೆದ ನೆಟ್ಟಿಗರು!


VIDEO | ತನ್ನ ಪತ್ನಿಗೆ ಇಷ್ಟವೆಂದು ಮದುವೆ ದಿನವೇ ಕತ್ತೆಯನ್ನು ಉಡುಗೊರೆಯಾಗಿ ನೀಡಿದ ಪಾಕಿಸ್ತಾನಿ ಯೂಟ್ಯೂಬರ್!



VIDEO | ಇಪ್ಪತ್ತು ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾದ 42 ವರ್ಷದ ಶಿಕ್ಷಕ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
