ಕೊಚ್ಚಿ:ದೃಷ್ಟಿಹೀನ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಯೂಟ್ಯೂಬರ್​ನನ್ನು ಕೇರಳದ ಮುನಂಬಾಮ್​ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯೂಟ್ಯೂಬರ್​ನನ್ನು ಜೀಮೊನ್​ (42) ಎಂದು ಗುರುತಿಸಲಾಗಿದೆ. ಈತ ಕೊಟ್ಟಾಯಂ ನಿವಾಸಿ. ಅಪ್ರಾಪ್ತೆ ಹಾಡಿದ ಹಾಡನ್ನು ವೈರಲ್​ ಮಾಡುವುದಾಗಿ ಭರವಸೆ ನೀಡಿ, ಈ ನೀಚ ಕೃತ್ಯವನ್ನು ಎಸಗಿದ್ದಾನೆ.
ಇದನ್ನೂ ಓದಿ:ಸ್ಮಶಾನದ ಬೇಲಿಗೆ ಹಾನಿ ಮಾಡಿದ ಗಜಪಡೆ ತುಂಬೇನಹಳ್ಳಿ ನಾಲ್ಕು ಆನೆಗಳ ದಾಳಿ
ಹಾಡಿನ ಚಿತ್ರೀಕರಣ ಮಾಡಬೇಕಿದೆ ಎಂಬ ನಂಬಿಸಿ, ಅಪ್ರಾಪ್ತೆಯನ್ನು ಕೊಟ್ಟಾಯಂ ಚೆರೈನಲ್ಲಿರುವ ಲಾಡ್ಜ್​ ಒಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಲಾಡ್ಜ್​ಗೆ ಹೋದಾಗ ಆಕೆಯ ಜತೆ ತಾಯಿ ಮತ್ತು ಸಹೋದರ ಸಹ ಇದ್ದರು. ಆದರೆ, ಅವರಿಬ್ಬರು ಹತ್ತಿರದಲ್ಲಿ ಇಲ್ಲದ ಸಮಯದಲ್ಲಿ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತ ಬಾಲಕಿಯ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಜೀಮೊನ್​ನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಪೊಕ್ಸೊ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಆರಂಭವಾಗಿದೆ.(ಏಜೆನ್ಸೀಸ್​)
ಸೈಕಲ್‌ನಲ್ಲಿ ಏಡ್ಸ್ ಕುರಿತು ವಿಶ್ವದೆಲ್ಲೆಡೆ ಜಾಗೃತಿ: ಜೀವನಕ್ಕಾಗಿ ದೇವರ ಆಭರಣ ಕದ್ದು ಜೈಲು ಸೇರಿದ

ಸಲಿಂಗ ಸಂಗಾತಿಗಾಗಿ ಹೇಬಿಯಸ್​ ಕಾರ್ಪಸ್​ ಹಿಡಿದು ಕೋರ್ಟ್​ ಮೆಟ್ಟಿಲೇರಿದ್ದ ಯುವತಿಗೆ ಸಿಕ್ತು ಗುಡ್​ ನ್ಯೂಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − twelve =
Remember me
