ಜೈಪುರ:ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ಗೀಳಿಗೆ ಅಪಾಯಕಾರಿ ಹಾಗೂ ವಿಲಕ್ಷಣಕಾರಿ ಪ್ರಯೋಗಗಳಿಗೆ ಕೈಹಾಕಿ ಪೇಚಿಗೆ ಸಿಲುಕಿರುವ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಮೆಟ್ರೋ ಮತ್ತು ರೈಲುಗಳಲ್ಲಿ ರೀಲಿಗರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನೆಟ್ಟಿಗರು ಈ ಬಗ್ಗೆ ರೋಸಿಹೋಗಿದ್ದಾರೆ.
ಇದೀಗ ಅದೇ ರೀತಿಯ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ರೈಲಿನ ಹಳಿ ಮೇಲೆ ಪಟಾಕಿ ಸಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆಯು ಫುಲೇರಾ-ಅಜ್ಮೀರ್​ ವಿಭಾಗದ ದಾಂತ್ರಾ ನಿಲ್ದಾಣದ ಬಳಿ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರೈಲಿನ ಹಳಿಗಳ ಮೇಲೆ ಪಟಾಕಿಯನ್ನು ಸಿಡಿಸುತ್ತಾನೆ. ಬಳಿಕ ಪಟಾಕಿಗಳು ಹೇಗೆ ಮಾಲಿನ್ಯವನ್ನುಂಟು ಮಾಡುತ್ತವೆ ಎನ್ನುವುದನ್ನು ತೋರಿಸುತ್ತಾನೆ. ನೋಡಿ ಪಟಾಕಿ ಹೇಗೆ ಲಾವಾದಂತೆ ತೋರುತ್ತಿವೆ ಎಂದೂ ಯೂಟ್ಯೂಬರ್​ ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
YouTuber bursting crackers on Railway Tracks!!Such acts may lead to serious accidents in form of fire, Please take necessary action against such miscreants.Location: 227/32 Near Dantra Station on Phulera-Ajmer Section.@NWRailways@rpfnwraii@RpfNwr@DrmAjmer@GMNWRailwaypic.twitter.com/mjdNmX9TzQ
ಇದನ್ನೂ ಓದಿ:ನಿಂತಿದ್ದ ಕ್ರೂಸರ್​ಗೆ ಟೆಂಪೋ ಡಿಕ್ಕಿ; ಪ್ರತಿಭಟನೆಗೆ ಬರುತ್ತಿದ್ದ ಇಬ್ಬರು ಸಾವು
ಇತ್ತ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ನೇಕರು ಕೂಡಲೇ ಈ ಯೂಟ್ಯೂಬರ್​ನನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ರೀತಿಯ ಹುಚ್ಚಾಟಗಳೇ ದೊಡ್ಡ ಅವಘಡಗಳಿಗೆ ಪ್ರಮುಖ ಕಾರಣವಾಗುತ್ತವೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ
ಈ ಕುರಿತು ಪ್ರತಿಕ್ರಿಯಿಸಿರುವ ಜೈಪುರದ ವಾಯುವ್ಯ ರೈಲ್ವೆ ಮತ್ತು ವಿಭಾಗೀಯ ವ್ಯವಸ್ಥಾಪಕರು, ನಿಮ್ಮ ಕಾಳಜಿಯನ್ನು ನಾವು ಪ್ರಶಂಸಿಸುತ್ತೇವೆ. ಪ್ರಕರಣ ಸಂಖ್ಯೆ 716/23  ಅಡಿಯಲ್ಲಿ (ಸೆಕ್ಷನ್ 145-147 ಭಾರತೀಯ ರೈಲ್ವೆ ಕಾಯ್ದೆ-1989 ಅಡಿಯಲ್ಲಿ) ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 18 =
Remember me
