ನವದೆಹಲಿ:ಗುರುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಜಾಗತಿಕ ನಾಯಕರು ಪ್ರಧಾನಿಗೆ ಶುಭಕೋರಿ ಹಾರೈಸಿದರು. ಅಲ್ಲದೆ, ದೇಶಾದ್ಯಂತ ಅನೇಕ ಜನರು ವಿಭಿನ್ನವಾಗಿ ನೆಚ್ಚಿನ ನಾಯಕ ಬರ್ತಡೇಯನ್ನು ಆಚರಿಸಿದ್ದಾರೆ.
ಇಲ್ಲೊಬ್ಬ ಮೋದಿ ಅಭಿಮಾನಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ಹುಟ್ಟುಹಬ್ಬವನ್ನು ಬಹಳ ವಿನೂತನವಾಗಿಯೇ ಆಚರಿಸಿದ್ದಾರೆ. ದಿನದ 24 ಗಂಟೆಗಳ ಕಾಲ ಮೋದಿಜೀ ಹೆಸರನ್ನು ಪಠಿಸುತ್ತಾ ಬರ್ತಡೇ ಆಚರಿಸಿ ಸುದ್ದಿಯಾಗಿದ್ದಾರೆ. ಅಭಿಮಾನಿಯ ಹೆಸರು ಅನ್ಮೋಲ್​ ಬಕಾಯ. ಈತ ಯೂಟ್ಯೂಬರ್​ ಆಗಿದ್ದು, ಲೈವ್​ ಸ್ಟ್ರೀಮ್​ನಲ್ಲಿ 24 ಗಂಟೆ ಕಾಲ ಪ್ರಧಾನಿ ಹೆಸರನ್ನು ಜಪಿಸಿದ್ದಾರೆ.
ಕಳೆದ ವರ್ಷಗಳಲ್ಲಿ ಪ್ರಧಾನಿ ಮೋದಿ ಕುರಿತು ಪರ-ವಿರೋಧದ ಮಾತಗಳನ್ನು ಕೇಳಿದ್ದೇನೆ. ಆದರೆ, ವೈಯಕ್ತಿಕವಾಗಿ ನನಗೆ ಪ್ರಧಾನಿ ಬಗ್ಗೆ ತುಂಬಾ ಗೌರವವಿದೆ. ದೇಶಕ್ಕಾಗಿ ಅವರು ಮಾಡಿದ ಕೆಲಸದ ಬಗ್ಗೆಯೂ ಹೆಮ್ಮೆ ಇದೆ. ಕೊನೆ ಉಸಿರು ಇರೋವರೆಗೂ ನಾನು ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತೇನೆ. ಇದು ಕೂಡ ನನ್ನದೊಂದು ಗೌರವದ ಸಂಕೇತವೆಂದು ಲೈವ್​ ವಿಡಿಯೋ ಕುರಿತು ಬಕಾಯ ಬರೆದುಕೊಂಡಿದ್ದಾರೆ.
ಸ್ಫೂರ್ತಿದಾಯಕ ಕೋಟ್ಸ್ ಹಾಗೂ ಪೌರಾಣಿಕ ಚಿತ್ರಗಳಿರುವ ಪರದೆ ಮುಂದೆ ಕುಳಿತು 24 ಗಂಟೆ ಬಕಾಯ ಅವರು ಪ್ರಧಾನಿ ಮೋದಿ ಹೆಸರನ್ನು ಪಠಿಸಿದ್ದಾರೆ. ನೀವೇನಾದರೂ ಈ ವಿಡಿಯೋವನ್ನು ಮೊದಲ ಬಾರಿ ನೋಡುತ್ತಿದ್ದರೆ, ಹೆಚ್ಚು ಹೊತ್ತು ವಿಡಿಯೋದಲ್ಲೇ ಉಳಿಯುವ ಮೂಲಕ ವಿಡಿಯೋವನ್ನು ಪ್ರಮೋಟ್​ ಮಾಡಿ ಪ್ರಧಾನಿ ಮೋದಿ ಅವರಿಗೆ ತಲುಪಿಸಿ ಎಂದು ಬಕಾಯ ಮನವಿ ಸಹ ಮಾಡಿಕೊಂಡಿದ್ದಾರೆ.
ಈಗಾಗಲೇ ವಿಡಿಯೋ ವೈರಲ್​ ಆಗಿದ್ದು, 2.9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದ, 15 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಹರಿದುಬಂದಿವೆ.(ಏಜೆನ್ಸೀಸ್​)
ಸಮಸ್ಯೆ ಇದ್ದಿದ್ದು ಇನ್​ಸ್ಟಾದಲ್ಲಿ, ದೂರು ಹೇಳಿದ್ದು ಟ್ವಿಟರ್​ನಲ್ಲಿ..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 18 =
Remember me
