ನವದೆಹಲಿ:ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದ ಜೋಡಿಯೊಂದು ಬಹುಮಹಡಿ ಕಟ್ಟಡದಿಂದ ಜಿಗಿದು ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ಹರಿಯಾಣದ ಬಹದ್ದೂರ್​ಗಢದಲ್ಲಿ ನಡೆದಿದೆ.
ಮೃತರನ್ನು ಗರ್ವಿತ್​ (25), ನಂದಿನಿ (22) ಎಂದು ಗುರುತಿಸಲಾಗಿದ್ದು, ಇವರಿಬ್ಬರು ಕಂಟೆಂಟ್​ ಕ್ರಿಯೇಟರ್ಸ್​ ಆಗಿದ್ದು ಯೂಟ್ಯೂಬ್​ನಲ್ಲಿ ತಮ್ಮದೇ ಚಾನೆಲ್​ ಹೊಂದಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ:ಹಳ್ಳಿ ಮೇಷ್ಟ್ರು ಚಿತ್ರದ ಪರಿಮಳ ಈಗ ಹೇಗಿದ್ದಾರೆ ನೋಡಿ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೃತರಿಬ್ಬರು ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದರು ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಇವರಿಬ್ಬರು ತಮ್ಮ ತಂಡದೊಂದಿಗೆ ಡೆಹ್ರಾಡೂನ್‌ನಿಂದ ಬಹದ್ದೂರ್‌ಗಢಕ್ಕೆ ಶಿಫ್ಟ್​​ ಆಗಿದ್ದರು. ರುಹೀಲಾ ರೆಸಿಡೆನ್ಸಿಯ ಏಳನೇ ಮಹಡಿಯಲ್ಲಿ ಫ್ಲ್ಯಾಟ್​ ಒಂದನ್ನು ಬಾಡಿಗೆಗೆ ಪಡೆದು ತಮ್ಮ ತಂಡದೊಂದಿಗೆ ವಾಸವಿದ್ದರು.
ಶನಿವಾರ ತಡರಾತ್ರಿ ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್​ ಆದ ಬಳಿಕ ಇವರಿಬ್ಬರ ನಡುವೆ ಕಂಟೆಂಟ್​ ವಿಚಾರವಾಗಿ ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಮನೆಯ ಬಾಲ್ಕನಿಯಿಂದ ಬೆಳಗ್ಗೆ 6 ಗಂಟೆ ಸುಮಾರಿಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಫೋರೆನ್ಸಿಕ್​ ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿದ್ದು, ಅವರು ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen + two =
Remember me
