ನವದೆಹಲಿ:ದೇಶದಲ್ಲಿ ಅನೇಕರಿಗೆ ಉದ್ಯೋಗ ನೀಡಿರುವ ಯೂಟ್ಯೂಬ್, ಕೆಲವರ ಜೀವನವನ್ನೇ ಬದಲಾಯಿಸಿದೆ. ಕೆಲವರು ಇದೇ ಯೂಟ್ಯೂಬ್​ನಿಂದ ಕೋಟ್ಯಧಿಪತಿಗಳಾಗಿದ್ದಾರೆ. ಅವರಲ್ಲಿ ಅಭಿಷೇಕ್​ ಮಲ್ಹಾನ್​ ಕೂಡ ಒಬ್ಬರು. ಯೂಟ್ಯೂಬ್​ನಲ್ಲಿ ಫುಕ್ರಾ ಇನ್ಸಾನ್​ ಎಂದೇ ಪ್ರಖ್ಯಾತಿಯಾಗಿರುವ ಮಲ್ಹಾನ್​​, ತಮ್ಮ ಒಟ್ಟು ಆದಾಯವನ್ನು ಬಹಿರಂಗಪಡಿಸಿದ್ದಾರೆ.
ಎನ್​ಡಿಟಿವಿ ಮಾಧ್ಯಮದೊಂದಿಗೆ ಮಾತನಾಡಿರುವ ಮಲ್ಹಾನ್​, 25 ಕೋಟಿ ರೂ. ಮೌಲ್ಯದ ಮನೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. 1997ರಲ್ಲಿ ಜನಿಸಿದ ಮಲ್ಹಾನ್​, ಭಾರತದ ಖ್ಯಾತ ಯೂಟ್ಯೂಬರ್​ ಕ್ಯಾರಿ ಮಿನಾತಿ, ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ದಿ ಗ್ರೇಟ್​ ಖಲಿ ಮತ್ತು ಪುನೀತ್​ ಸೂಪರ್​ಸ್ಟಾರ್​ ಅವರೊದಿಗಿನ ಸಹಯೋಗದ ಬಳಿಕ ಭಾರಿ ಜನಪ್ರಿಯತೆ ಗಳಿಸಿದರು. ಮಿಸ್ಟರ್​ ಬೀಸ್ಟ್​ ಮತ್ತು ಕೆಎಸ್​ಐನಂತಹ ಕ್ರಿಯೆಟರ್​ಗಳಿಂದ ಸ್ಫೂರ್ತಿ ಪಡೆದು ತನ್ನ ಯೂಟ್ಯೂಬರ್​ ಜರ್ನಿಯನ್ನು ಆರಂಭಿಸಿದರು.
ಸಾಮಾಜಿಕ ಜಾಲತಾಣದ ಬುದ್ಧಿವಂತ ಪ್ರೇಕ್ಷಕರಲ್ಲಿ ವಿಶೇಷವಾಗಿ ಯುವಜನರಲ್ಲಿ ಯೂಟ್ಯೂಬರ್‌ಗಳು ಮತ್ತು ಇತರೆ ಕಂಟೆಂಟ್​ ಕ್ರಿಯೆಟರ್​ಗಳ ಮೇಲೆ ಹೆಚ್ಚಿನ ಆಸಕ್ತಿಯಿದೆ. ಮಾಮೂಲಿ ಸೆಲೆಬ್ರಿಟಿಗಳಿಗಿಂತ ಯೂಟ್ಯೂಬರ್‌ಗಳು ವಿಭಿನ್ನವಾಗಿ ತಮ್ಮ ವೀಕ್ಷಕರೊಂದಿಗೆ ಅನನ್ಯವಾದ ಸಂಪರ್ಕವನ್ನು ಹೊಂದಿರುತ್ತಾರೆ. ವೈಯಕ್ತಿಕ ಅನುಭವಗಳು, ಟ್ಯುಟೋರಿಯಲ್‌ಗಳು ಅಥವಾ ಮನರಂಜನೆ ಸೇರಿದಂತೆ ವೀಕ್ಷಕರಿಗೆ ವಿಭಿನ್ನ ವಿಷಯಗಳನ್ನು ತಿಳಿಸುವ ಕ್ರಿಯೆಟರ್​ಗಳು ಇಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಶಾಲಿ ವ್ಯಕ್ತಿಗಳಾಗಿ ಮಾರ್ಪಟ್ಟಿದ್ದಾರೆ.
ಹೀಗಾಗಿಯೇ ಮಲ್ಹಾನ್ ಅವರಂತಹ ಕ್ರಿಯೆಟರ್​ಗಳ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಜನರಲ್ಲಿದೆ. ಮಲ್ಹಾನ್​ ಅವರು ಎಷ್ಟು ಸಂಪಾದಿಸುತ್ತಾರೆ? ಅವರ ಆದಾಯದ ಮೂಲವೇನು? ಮತ್ತು ನಿವ್ವಳ ಮೌಲ್ಯ ಎಷ್ಟು? ಎಂಬುದನ್ನು ತಿಳಿದುಕೊಳ್ಳಲು ವೀಕ್ಷಕರು ಬಯಸುತ್ತಾರೆ. ಅಂದಹಾಗೆ ಮಲ್ಹಾನ್​ ಅವರು ತಮ್ಮ YouTube ನಲ್ಲಿ 9.3 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಅವರಿಗೆ ಎನ್​ಡಿಟಿವಿ ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರನ್ನು ನೀಡಿದ್ದಾರೆ.
ತಿಂಗಳ ಆದಾಯ ಎಷ್ಟು ಎಂದು ಪ್ರಶ್ನೆ ಮಾಡಿದಾಗ, ಅದನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ, ನನ್ನ ತಂದೆ ನನ್ನನ್ನು ಕೊಂದು ಬಿಡುತ್ತಾರೆ ಎಂದು ಉತ್ತರಿಸಿದರು. ನಿವ್ವಳ ಆದಾಯದ ಬಗ್ಗೆ ಒತ್ತಿ ಕೇಳಿದಾಗ, ನನಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ನಾನು ನನ್ನ ನಿವ್ವಳ ಆದಾಯದ ಬಗ್ಗೆ ಲೆಕ್ಕ ಹಾಕಿಲ್ಲ. ನಾನು ಒಮ್ಮೆ ಸಂದರ್ಶನವೊಂದರಲ್ಲಿ ಆದಾಯವನ್ನು ಬಹಿರಂಗಪಡಿಸಿದ್ದೆ. ಅದಕ್ಕೆ ಹೋಲಿಕೆ ಮಾಡಿದರೆ ಇಂದು ಮೂರು ಪಟ್ಟು ಇದೆ ಎನ್ನುವ ಮೂಲಕ ಮಲ್ಹಾನ್​ ಎಲ್ಲರ ಹುಬ್ಬೇರಿಸಿದ್ದಾರೆ.
ಇದಿಷ್ಟೇ ಅಲ್ಲದೆ, ರ್ಯಾಪಿಡ್​ ಫೈರ್​ನಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿ ಮಲ್ಹಾನ್​, ತಮ್ಮ ಬಳಿ ಜಾಗ್ವಾರ್​ ಎಫ್​-ಪೇಸ್​ ಮತ್ತು 25 ಕೋಟಿ ರೂ. ಮೌಲ್ಯದ ಒಂದು ಮನೆ ಇರುವುದಾಗಿ ಬಹಿರಂಗಪಡಿಸಿದರು. ಈ ವರ್ಷದ ಆರಂಭದಲ್ಲಿ, ಮಲ್ಹಾನ್ ಅವರು ರಿಯಾಲಿಟಿ ಶೋ ಬಿಗ್ ಬಾಸ್ OTT ಸೀಸನ್ 2 ರಲ್ಲಿ ಭಾಗವಹಿಸಿದರು. ಅಲ್ಲಿ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದರು.(ಏಜೆನ್ಸೀಸ್​)
ಹೌದು ಇದು ಮೊಬೈಲ್​ ಚಾರ್ಜರ್ರೇ ಆದ್ರೆ… ಸತ್ಯ ಒಪ್ಕೊಂಡ ಮೈಕಲ್​, ಯಾರಪ್ಪ ಆ ಭಗವಂತ ಅಂದ್ರು ವಿನಯ್!​

ರೋಹಿತ್​ಗೆ ಮತ್ತೆ ಮುಂಬೈ ಇಂಡಿಯನ್ಸ್​ ನಾಯಕನ ಪಟ್ಟ; ಕಾರಣ ಹೀಗಿದೆ

ಗುಜರಾತ್​ ಕರಾವಳಿಯಲ್ಲಿ 20 ಭಾರತೀಯರಿದ್ದ ಹಡಗಿನ ಮೇಲೆ ಡ್ರೋನ್​ ದಾಳಿ: ನೌಕಾಪಡೆ ಹೈ ಅಲರ್ಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + three =
Remember me
