ತಮಿಳುನಾಡು:ತಮಿಳುನಾಡಿನ ಖ್ಯಾತ ಯೂಟ್ಯೂಬರ್ ಟಿಟಿಎಫ್ ವಾಸನ್ ಅವರ ಚಾಲನಾ ಪರವಾನಗಿಯನ್ನು ಬರೋಬ್ಬರಿ 10 ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ:ಸರಳತೆ ಮೆರೆದ ಜನಾನುರಾಗಿ ಮಹಾರಾಜ
ಯೂಟ್ಯೂಬರ್ ಮತ್ತು ಬೈಕರ್ ಆಗಿರುವ ಟಿಟಿಎಫ್ ವಾಸನ್ ಅವರ ಚಾಲನಾ ಪರವಾನಗಿಯನ್ನು 10 ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಅಕ್ಟೋಬರ್ 5, 2033 ರವರೆಗೆ ವಾಸನ್ ಅವರ ಪರವಾನಗಿಯನ್ನು ಅಮಾನತುಗೊಳಿಸಲಾಗುವುದು ಎಂದು ಕಾಂಚೀಪುರಂ ಪ್ರಾದೇಶಿಕ ಸಾರಿಗೆ ಕಚೇರಿ ತಿಳಿಸಿದೆ.
ಕಾಂಚೀಪುರಂನಲ್ಲಿರುವ ಪರವಾನಗಿ ಪ್ರಾಧಿಕಾರ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯ ಕಚೇರಿ ತನ್ನ ಆದೇಶದಲ್ಲಿ, ಟಿಟಿಎಫ್ ವಾಸನ್ ಅಪರಾಧಿ ಮತ್ತು ಆತನ ವಿರುದ್ಧ ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಅತಿರೇಕ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ವಿವಿಧ ಪ್ರಕರಣಗಳು ದಾಖಲಾಗಿವೆ. ಇದರೊಟ್ಟಿಗೆ ಹಲವಾರು ಕೇಸ್​ಗಳು ಬಾಕಿ ಉಳಿದಿವೆ ಎಂದು ಉಲ್ಲೇಖಿಸಿದೆ.
ಇದನ್ನೂ ಓದಿ:ವಿಶ್ವಕಪ್​ನಲ್ಲಿ ಆಟಗಾರ, ನಾಯಕನಾಗಿ ಸಾಧ್ಯವಾಗದ್ದನ್ನು ತರಬೇತುದಾರನಾಗಿ ಸಾಧಿಸುವರೇ ದ್ರಾವಿಡ್​?
ಟಿಟಿಎಫ್ ವಾಸನ್ ಅವರು ಸೆಪ್ಟೆಂಬರ್ 17 ರಂದು ಕಾಂಚೀಪುರಂ ಬಳಿ ತಮ್ಮ ದುಬಾರಿ ಮೋಟಾರ್‌ಬೈಕ್​ನಲ್ಲಿ ವ್ಹೀಲಿ ಮಾಡುವ ವೇಳೆ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾದರು. ಈ ಘಟನೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು.
ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ವಾಸನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಬಂಧನದಲ್ಲಿದ್ದು ಪಾಠ ಕಲಿಯಬೇಕು ಎಂದು ಹೇಳಿದೆ. ತಮ್ಮ ಸೋಷಿಯಲ್​ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ, ಅದರಲ್ಲೂ ವಿಶೇಷವಾಗಿ ಯೂಟ್ಯೂಬ್‌ನಲ್ಲಿ ಹೆಚ್ಚಿನ ಅನುಯಾಯಿಗಳನ್ನು ವಾಸನ್​ ಹೊಂದಿದ್ದು, ಬೈಕ್​ ಸ್ಟಂಟ್ಸ್​ ಸೇರಿದಂತೆ ಹಲವಾರು ವಿಡಿಯೋಗಳನ್ನು ಪೋಸ್ಟ್​ ಮಾಡಿ, ನೆಟ್ಟಿಗರ ಗಮನ ಸೆಳೆಯುತ್ತಿದ್ದರು,(ಏಜೆನ್ಸೀಸ್).
Andaman & Nicobar: ಅಂಡಮಾನ್ ಸಮುದ್ರದಲ್ಲಿ 4.3 ತೀವ್ರತೆಯ ಭೂಕಂಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + seventeen =
Remember me
