ಚೆನ್ನೈ:ತಮಿಳುನಾಡಿನ ಜನಪ್ರಿಯ ಯೂಟ್ಯೂಬರ್, ಹೈ-ಸ್ಪೀಡ್ ಮೋಟಾರ್‌ಸೈಕಲ್ ಸವಾರಿ ಮತ್ತು ಸಾಹಸಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದ ಟಿಟಿಎಫ್ ವಾಸನ್, ಸಾಹಸಮಯ ರೀತಿಯಲ್ಲಿ ವೀಲಿ ಮಾಡಲು ಹೋಗಿ ಬೈಕ್​ನ ನಿಯಂತ್ರಣ ಕಳೆದುಕೊಂಡ ಪರಿಣಾಮ 100 ಮೀ. ಸ್ಕಿಡ್​ ಆಗಿ ಬಿದ್ದ ಘಟನೆ ಭಾನುವಾರ (ಸೆ.17) ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ಸಂಭವಿಸಿದೆ.
ಇದನ್ನೂ ಓದಿ:Gini & Jony embarks on transformation journey, targets five-fold growth to Rs. 1,000 cr
ಪ್ರತಿಬಾರಿ ಒಂದಲ್ಲ ಒಂದು ರೀತಿಯ ವೀಲಿ ಮೂಲಕ ಅನೇಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ ಯೂಟ್ಯೂಬರ್​ ವಾಸನ್​, ಭಾನುವಾರ ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ಸಾಗುವಾಗ ಬಹಳ ವೇಗದಲ್ಲಿ ಬೈಕ್​ನ ಚಲಾಯಿಸಿದ್ದಾರೆ. ಈ ವೇಳೆ ವೀಲಿ ಮಾಡಲು ಹೋದಾಗ ಬೈಕ್​ನ ನಿಯಂತ್ರಣ ತಪ್ಪಿ, 100 ಮೀ. ಉದ್ದ ಸ್ಕಿಡ್​ ಆಗಿ ಬಿದ್ದಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಾಸನ್​ ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ:ಸ್ಯಾಂಡಲ್‌ವುಡ್ ಗಣೇಶೋತ್ಸವ; ನಟಿಯರ ಮನೆಯಲ್ಲಿ ಹಬ್ಬದ ಸಡಗರ
ವರದಿಗಳ ಪ್ರಕಾರ, ಯೂಟ್ಯೂಬರ್ ಟಿಟಿಎಫ್ ವಾಸನ್ ಈ ಹಿಂದೆ ಹಲವು ಬಾರಿ ಟ್ರಾಫಿಕ್ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ದಂಡ ಕಟ್ಟಿದ್ದಾರೆ. ಸ್ಟಂಟ್​ ವೇಳೆ ವಾಸನ್ ಹೆಲ್ಮೆಟ್​ ಧರಿಸಿದ್ದರಿಂದ ಅಪಘಾತದಿಂದ ಪಾರಾಗಿದ್ದಾರೆ. ತುರ್ತು ಚಿಕಿತ್ಸೆಗಾಗಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).
ನ್ಯೂಯಾರ್ಕ್​ನಲ್ಲೂ ಗೌರಿ ಪೂಜೆ; ಕನ್ನಡ ಸಂಘದಿಂದ ಆಯೋಜನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + ten =
Remember me
