ಅಮರಾವತಿ​:ಆಂಧ್ರಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ವೈಎಸ್​ಆರ್​ ಸಿಪಿ ಗೆಲ್ಲಲಿದೆ ಎಂದು 30 ಕೋಟಿ ರೂ. ಬೆಟ್ಟಿಂಗ್ ಕಟ್ಟಿದ ವ್ಯಕ್ತಿ ಕಡೆಗೆ ಆ ಪಕ್ಷ ಸೋತಿದ್ದರಿಝಂದ ಪಂದ್ಯದ ಹಣ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ಉಪಮುಖ್ಯಮಂತ್ರಿಯಾಗಲು ಪವನ್ ಕಲ್ಯಾಣ್ ಆಸಕ್ತಿ
ಆಂಧ್ರದ ಎಲೂರು ಜಿಲ್ಲೆಯ ನೂಜಿವೀಡು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಘಟನೆ ನಡೆದಿದೆ. ಪೊಲೀಸರು ಹಾಗೂ ಸ್ಥಳೀಯರು ಹೇಳುವ ಪ್ರಕಾರ ಗ್ರಾಮದ ಜಗ್ಗವರಪು ವೇಣುಗೋಪಾಲರೆಡ್ಡಿ (52) ವೈಎಸ್​ಆರ್​ಸಿಪಿ ಬೆಂಬಲಿಗರು. ಇತ್ತೀಚೆಗಿನ ಚುನಾವಣೆಯಲ್ಲಿ ವೈಎಸ್​ಆರ್​ಸಿಪಿ ಗೆಲ್ಲಲಿದೆ ಎಂದು ವೇಣುಗೋಪಾಲರೆಡ್ಡಿ ವಿವಿಧ ಗ್ರಾಮಗಳ ಜನರೊಂದಿಗೆ ಸುಮಾರು 30 ಕೋಟಿ ರೂ.ಬೆಟ್​ ಕಟ್ಟಿದ್ದರು.
ಆದರೆ, ವೈಎಸ್​ಆರ್​ಸಿಪಿ ಪಕ್ಷ ಹೀನಾಯವಾಗಿ ಸೋಲುತ್ತಿದ್ದಂತೆ ಈತ ಮತ ಎಣಿಕೆ ದಿನ ಊರು ಬಿಟ್ಟಿದ್ದು, ಮತ್ತೆ ಮನೆಗೆ ಮರಳಲಿಲ್ಲ. ಬೆಟ್ಟಿಂಗ್​ ಕಟ್ಟಿದವರು ಕರೆ ಮಾಡಿದರೂ ಸ್ಪಂದಿಸಲಿಲ್ಲ. ಈತ ಗ್ರಾಮದಲ್ಲಿ ಇಲ್ಲದ ಕಾರಣ ಇದೇ ತಿಂಗಳ 7ರಂದು ಬೆಟ್ಟಿಂಗ್ ಕಟ್ಟಿದವರು ಇವರ ಮನೆಗೆ ತೆರಳಿ ಬಾಗಿಲು ಒಡೆದು ಎಸಿ, ಸೋಫಾ, ಬೆಡ್ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರು.
ಇದಾದ ಬಳಿಕ ಮರುದಿನವೇ ಗ್ರಾಮಕ್ಕೆ ಬಂದು ವಿಷಯ ತಿಳಿದು ವೇಣುಗೋಪಾಲರೆಡ್ಡಿ ಮನನೊಂದಿದ್ದರು. ಇದೇ ಹಿನ್ನೆಲೆಯಲ್ಲಿ ಭಾನುವಾರ ಜಮೀನಿನಲ್ಲಿಯೇ ಕೀಟನಾಶಕ ಸೇವಿಸಿದ್ದಾರೆ. ಪೊಲೀಸರು ಮೃತದೇಹದಿಂದ ಪತ್ರವನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಪತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಸ್ಥಳೀಯರಿಂದ ತಿಳಿದು ಬಂದಿದ್ದು, ಆತ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ವಿಜಯಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದಾರೆ.
‘ಕಲ್ಕಿ’ ಅದ್ದೂರಿ ಬಿಡುಗಡೆಗೆ ಸಿದ್ಧತೆ..ಚಿತ್ರಮಂದಿರಗಳಲ್ಲಿ ಟ್ರೈಲರ್ ಪ್ರದರ್ಶನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 11 =
Remember me
