ಮುಂಬೈ:ಟೀಂ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಶೀಘ್ರದಲ್ಲೇ ತಂದೆಯಾಗಿ ಬಡ್ತಿ ಪಡೆಯಲಿದ್ದಾರೆ. ಅವರ ಪತ್ನಿ ಧನ ಶ್ರೀ ವರ್ಮಾ ಈಗ ಗರ್ಭಿಣಿ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚಿಗೆ ಧನ ಶ್ರೀ ವರ್ಮ ಧರಿಸಿದ್ದ ಡ್ರೆಸ್. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಚಹಾಲ್ ದಂಪತಿ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಧನಶ್ರೀ ವರ್ಮಾ ಹೆರಿಗೆ ಉಡುಗೆಯಂತೆಯೇ ಸಡಿಲವಾದ ಉಡುಪನ್ನು ಧರಿಸಿದ್ದಾರೆ. ಯುಜುವೇಂದ್ರ ಚಹಾಲ್ ಬಿಳಿ ಡ್ರೀಮ್ 11 ಟಿ-ಶರ್ಟ್ ಧರಿಸಿದ್ದಾರೆ. ಆದರೆ ಧನಶ್ರೀ ತೊಟ್ಟಿರುವ ಡ್ರೆಸ್ ಜನ ಆಶ್ಚರ್ಯ ಪಡುವಂತೆ ಮಾಡಿದ್ದು, ಆಕೆ ಗರ್ಭಿಣಿ ಎಂದು ಜನ ಹೇಳುತ್ತಿದ್ದಾರೆ. ಯುಜ್ವೇಂದ್ರ ಚಹಾಲ್ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಫೋಟೋ ವೈರಲ್​​ ಆಗುತ್ತಿದ್ದಂತೆ ಗರ್ಭಧಾರಣೆಯ ವದಂತಿಗಳು ಹುಟ್ಟಿಕೊಂಡವು. ಚಾಹಲ್ ಅಥವಾ ಧನಶ್ರೀ ವರ್ಮಾ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಧನಶ್ರೀ ವರ್ಮಾ ಗರ್ಭಿಣಿಯಾಗಿರುವ ಸುದ್ದಿ ನೆಟ್‌ನಲ್ಲಿ ಹರಿದಾಡುತ್ತಿದೆ.
2020ರಲ್ಲಿ, ಯುಜ್ವೇಂದ್ರ ಚಹಾಲ್ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರನ್ನು ವಿವಾಹವಾದರು. ಯುಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಕುರಿತಂತೆ ಕೆಲವು ಸಮಯದಿಂದ ಇಬ್ಬರೂ ಬೇರೆಯಾಗಲಿದ್ದಾರೆ. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಕುರಿತಾಗಿ ದಂಪತಿ ಮಾತ್ರ ಎಲ್ಲೂ ಮಾತನಾಡಿರಲಿಲ್ಲ. ಈ ಸುದ್ದಿ ಹರಿದಾಡುತ್ತಿದ್ದ ಬೆನ್ನಲ್ಲೇ ಈ ಜೋಡಿ ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಯು ಮುನ್ನೆಲೆಗೆ ಬಂದಿದೆ.
ಧನಶ್ರೀ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈ ಬಗ್ಗೆ ತಮ್ಮ ಡ್ರೆಸ್ ಮೂಲಕವೇ ಸುಳಿವು ನೀಡಿದ್ದಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಸದ್ಯ ಯುಜುವೇಂದ್ರ ಚಹಾಲ್ ಟಿ20 ವಿಶ್ವಕಪ್‌ಗಾಗಿ ಅಮೆರಿಕಕ್ಕೆ ತೆರಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
