ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್​ಸಿಬಿ ಡ್ರಗ್​ ಪೆಡ್ಲರ್​ ಜೈದ್​ ವಿಲಾತ್ರನನ್ನು ಎನ್​ಸಿಬಿ ಮಂಗಳವಾರ ಬಂಧಿಸಿದೆ.
ರಿಯಾ ಚಕ್ರವರ್ತಿ ಸಹೋದರ ಶೋವಿಕ್​​ನೊಂದಿಗೆ ಸಂಪರ್ಕದಲ್ಲಿದ್ದ ಮಾದಕ ವಸ್ತುಗಳ ಮಾರಾಟಗಾರರಾದ ಬಸಿತ್​ ಪರಿಹಾರ್​ ಮತ್ತು ಸೂರ್ಯದೀಪ್​ ಮಲಹೋತ್ರಾ ಜತೆ ಜೈದ್​ ವಿಲಾತ್ರ್​ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಈತನನ್ನೂ ಬಂಧಿಸಲಾಗಿದೆ.
ಡ್ರಗ್​​ ಜಾಲದಲ್ಲಿ ಜೈದ್​ ಕೈವಾಡವಿದೆ ಎಂಬುದು ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಹಿಂದಿ ನ್ಯೂಸ್​ ಚಾನಲ್​ವೊಂದರ ರಿಪೋರ್ಟರ್​ ಜೈದ್​ ಮನೆಗೆ ಹೋಗಿದ್ದಾನೆ. ಆತನ ಬಂಧನದ ಬಗ್ಗೆ ತಂದೆಯ ಅಭಿಪ್ರಾಯ ಕೇಳುವುದಕ್ಕೋಸ್ಕರ ಬಾಗಿಲು ಬಡಿದು, ಕ್ಯಾಮರಾ ಎದುರು ಬಂದು ಮಾತನಾಡುವಂತೆ ಮನವಿ ಮಾಡಿದ್ದಾನೆ.ಇದನ್ನೂ ಓದಿ:ದೇಶದಲ್ಲಿ ಒಂದೇ ದಿನದಲ್ಲಿ 83,883 ಹೊಸ ಕರೊನಾ ಪ್ರಕರಣ; ಚೇತರಿಕೆ ಪ್ರಮಾಣದಲ್ಲೂ ಏರಿಕೆ
ಆದರೆ ಜೈದ್​ ತಂದೆ ಆ ಪತ್ರಕರ್ತನನ್ನು ಕೆಟ್ಟದಾಗಿ ನಿಂದಿಸಿದ್ದಾನೆ. ಕ್ಯಾಮರಾ ಎದುರಿಗೇ ಆತನಿಗೆ ಬೆದರಿಕೆಯನ್ನೂ ಹಾಕಿದ್ದು ಲೈವ್​ ಪ್ರಸಾರವಾಗಿದೆ.  ಅಂಗಿಯನ್ನೂ ಹಾಕಿಕೊಳ್ಳದೆ ಹೊರಬಂದ ಜೈದ್​ ತಂದೆ ಮೊದಲು ರಿಪೋರ್ಟರ್​ಗೆ ಅಶ್ಲೀಲ ಶಬ್ದಗಳಿಂದ ಬೈದಿದ್ದಾನೆ. ಗೆಟ್​ ಔಟ್​ ಎಂದು ತಳ್ಳಿದ್ದಾನೆ. ಆತನ ಬಳಿಯಿದ್ದ ಲೋಗೋ ಕಿತ್ತುಕೊಂಡಿದ್ದಲ್ಲದೆ, ಹಲ್ಲೆಯನ್ನೂ ಮಾಡಿದ್ದಾನೆ. ಇದೆಲ್ಲವನ್ನೂ ಆ ಹಿಂದಿ ನ್ಯೂಸ್​ ಚಾನಲ್​ ಲೈವ್​ ಪ್ರಸಾರ ಮಾಡಿದೆ. (ಏಜೆನ್ಸೀಸ್​)
https://www.vijayavani.net/140k-raised-for-two-girls-who-faced-eviction/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − two =
Remember me
