ಬೆಂಗಳೂರು:ಸಚಿವ ಜಮೀರ್​​ ಅಹಮ್ಮದ್ ತಮ್ಮ ಆಪ್ತರೊಂದಿಗೆ ಹಿಂದಿ ಹಾಡಿಗೆ ರೀಲ್ಸ್​​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ  ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ.
Now that the Health Minister has finally dried off from his pool party 🏊‍♂️, here's another Congress Minister striking poses for Instagram reels! 📸 Karnataka is going through a tough phase, facing both a health and financial emergency 🚨. A dengue and Zika outbreak have claimed…pic.twitter.com/DMn9z4xxJF
— BJP Karnataka (@BJP4Karnataka)July 9, 2024

ರಾಜ್ಯ ಬಿಜೆಪಿ, ರಾಜ್ಯದಲ್ಲಿ ಡೆಂಘೀ ಮತ್ತು ಝೀಕಾ ವೈರಸ್​​​​ ಸಂಖ್ಯೆ ಹೆಚ್ಚಾಗುತ್ತಿದೆ.  ಆರೋಗ್ಯ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯನ್ನು  ಕರ್ನಾಟಕ ಎದುರಿಸುತ್ತಿದೆ. ಡೆಂಘೀ, ಝೀಕಾಗೆ ಸುಮಾರು 7 ರಿಂದ 8 ಮಕ್ಕಳು ಸಾವನ್ನಪ್ಪಿರುವ ವರದಿ ಇದೆ. ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ತರಕಾರಿ ಇಲ್ಲದೇ ಊಟ ನೀಡಲಾಗುತ್ತಿದೆ. ಅದರೆ ಸಚಿವರೊಬ್ಬರು ರೀಲ್ಸ್​​ ಮಾಡುತ್ತಾ ಮಜಾ ಮಾಡುತ್ತಿದ್ದಾರೆ.
ರೈತರು ಪೂರೈಸಿದ ಡೈರಿ ಹಾಲಿನ ಹಣವನ್ನು ಇನ್ನೂ ಪಾವತಿಸಿಲ್ಲ. ಇತರೆ ಪ್ರಮುಖ ನಾಯಕರು ವಾಲ್ಮಿಕಿ ಮತ್ತು ದಲಿತರ ಮೀಸಲು ಹಣವನ್ನು ಲೂಟಿ ಮಾಡುತ್ತಿದ್ದರೆ, ಇತರರು ಈಜುಕೊಳದಲ್ಲಿ ಆನಂದಿಸುತ್ತಿದ್ದಾರೆ. ಇಂದು ಮತ್ತೊಬ್ಬ ಸಚಿವರು ಇನ್​ಸ್ಟಾಗ್ರಾಮ್​​ ರೀಲ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿ ಟ್ವೀಟ್​​ ಮಾಡಿದೆ. ಈ ಕುರಿತಾದ ವಿಡಿಯೋ ಸೋಶಿಯಲ್​​  ಮೀಡಿಯಾದಲ್ಲಿ ಸಖತ್​ ವೈರಲ್​​ ಆಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + ten =
Remember me
