ನವದೆಹಲಿ:ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕರ್ ಕಂಪನಿ “ಝೆರೊಧಾ” ಸಂಸ್ಥಾಪಕ ನಿತಿನ್​ ಕಾಮತ್​ ಅವರು​ ಆರು ವಾರಗಳ ಹಿಂದಷ್ಟೇ “ಲಘು ಸ್ಟ್ರೋಕ್”​ನಿಂದ ಬಳಲಿದ್ದಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಸೋಮವಾರ (ಫೆ.26) ಬಹಿರಂಗಪಡಿಸಿದ್ದಾರೆ. ಸ್ಟ್ರೋಕ್​ಗೆ ಕಾರಣ ಏನೆಂಬುದನ್ನು ನಿತಿನ್​ ಕಾಮತ್​ ಸ್ಪಷ್ಟವಾಗಿ ದೃಢೀಕರಿಸದಿದ್ದರೂ, ಅನೇಕ ಅಂಶಗಳು ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಸುಮಾರು 6 ವಾರಗಳ ಹಿಂದೆ ನಾನು ಸೌಮ್ಯ ಸ್ವಭಾವದ ಸ್ಟ್ರೋಕ್​ನಿಂದ ಬಳಲಿದೆ. ತಂದೆಯ ನಿಧನದ ಚಿಂತೆ, ಕಳಪೆ ನಿದ್ರೆ, ನಿಶ್ಯಕ್ತಿ, ನಿರ್ಜಲೀಕರಣ ಮತ್ತು ಅತಿಯಾದ ಕೆಲಸ, ಇವುಗಳಲ್ಲಿ ಯಾವುದಾದರೂ ಸಂಭವನೀಯ ಕಾರಣಗಳಾಗಿರಬಹುದು ಎಂದು ಕಾಮತ್​ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.
A post shared by Nithin Kamath (@nithinkamath)

ತಮ್ಮ ಮುಖ ಇಳಿಬೀಳುತ್ತಿರುವುದನ್ನು ಕಾಮತ್ ಮೊದಲು​ ಗಮನಿಸಿದರು ಮತ್ತು ಅಂದಿನಿಂದ ಓದಲು ಮತ್ತು ಬರೆಯಲು ತುಂಬಾ ಕಷ್ಟಪಡಬೇಕಾಯಿತು. 3 ರಿಂದ 6 ತಿಂಗಳೊಳಗೆ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಾಮತ್​ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಕಾಮತ್ ಅವರು ಫಿಟ್ನೆಸ್ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ. ಆದಾಗ್ಯೂ, ಸ್ಟ್ರೋಕ್​ ಅನುಭವಿಸಿದ ಅವರು ತಮ್ಮ ಅಭ್ಯಾಸಗಳನ್ನು ಮರುಪರಿಶೀಲಿಸಬೇಕಿದೆ ಒಪ್ಪಿಕೊಂಡರು. ಫಿಟ್ ಆಗಿರುವ ಮತ್ತು ತನ್ನು ಬಗ್ಗೆ ಆರೋಗ್ಯ ಕಾಳಜಿ ವಹಿಸುವ ವ್ಯಕ್ತಿಯ ಮೇಲೆ ಸ್ಟ್ರೋಕ್​ ಏಕೆ ಪರಿಣಾಮ ಬೀರಿತು ಎಂಬುದನ್ನು ಚಿಂತಿಸಿದಾಗ ನನಗೆ ಆಶ್ಚರ್ಯವಾಗುತ್ತದೆ ಎಂದಿದ್ದಾರೆ.
ಸದ್ಯ ಕಾಮತ್​ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಮತ್ತೆ ಕೆಲಸ ಕಡೆ ಗಮನ ಹರಿಸಲಿದ್ದಾರೆ.(ಏಜೆನ್ಸೀಸ್​)
ಪದ್ಮಶ್ರೀ ಪುರಸ್ಕೃತ ಪ್ರಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್ ನಿಧನ

ಪ್ರಾಣಿ ಸಂಕುಲಕ್ಕೆ ಜೀವನಾಡಿ ವಂತಾರಾ ಯೋಜನೆ: ಅನಂತ್​ ಅಂಬಾನಿ ಘೋಷಣೆ, ಭಾರತದಲ್ಲಿ ಇದೇ ಮೊದಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
