ಬೆಂಗಳೂರು:ಆ್ಯಪ್​ ಆಧಾರಿತ ಫುಡ್ ಡೆಲಿವರಿ ವ್ಯವಸ್ಥೆಗಳಾದ ಸ್ವಿಗ್ಗಿ-ಜೊಮ್ಯಾಟೊ ಸಂಸ್ಥೆಗಳು ಆಗಾಗ ಸುದ್ದಿ ಆಗುತ್ತಿರುತ್ತವೆ. ಹೀಗೆ ಇವರು ನಕಾರಾತ್ಮಕವಾಗಿ ಇಲ್ಲವೇ ವಿಚಿತ್ರ ಕಾರಣಗಳಿಗಾಗಿ ಸುದ್ದಿ ಆಗಿದ್ದೇ ಹೆಚ್ಚು. ಇದೀಗ ಅಂಥದ್ದೇ ಒಂದು ಕಾರಣಕ್ಕಾಗಿ ಜೊಮ್ಯಾಟೊ ಸುದ್ದಿಯಲ್ಲಿದೆ.
ಫುಡ್ ಡೆಲಿವರಿ ಮಾಡಿದಾಗ ಸ್ಟೈಲಿಶ್ ಬೈಕ್​ನಲ್ಲಿ ಚಂದದ ಯುವತಿಯೊಬ್ಬಳು ಅದನ್ನು ತಂದುಕೊಟ್ಟರೆ ಹೇಗಿರಬಹುದು? ಎಂದು ಕನಸು ಕಂಡವರಿದ್ದರೆ, ಅವರು ಈ ವಿಡಿಯೋ ನೋಡಿದರೆ ಅದು ನನಸಾದಂತೆಯೇ ಎಂದನಿಸಬಹುದು.
ಹೌದು.. ಇಲ್ಲೊಂದು ಕಡೆ ಜೊಮ್ಯಾಟೊ ಫುಡ್​ ಡೆಲಿವರಿ ಬ್ಯಾಗ್ ಹಾಕಿಕೊಂಡು ಸ್ಟೈಲಿಶ್ ಬೈಕ್​ನಲ್ಲಿ ಚಂದದ ಯುವತಿ ರಸ್ತೆಗಿಳಿಯುತ್ತಿರುವುದೇನೋ ನಿಜ. ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಜೊಮ್ಯಾಟೊ ಯುವತಿ ರಸ್ತೆಯಲ್ಲಿ ಕಾಣಸಿಗುತ್ತಾಳೆ. ಹಾಗಂತ ಫುಡ್ ಆರ್ಡರ್ ಮಾಡಿದರೆ ಈಕೆಯಿಂದ ಡೆಲಿವರಿಯಂತೂ ಖಂಡಿತ ಸಿಗುವುದಿಲ್ಲ.

ಏಕೆಂದರೆ ಇದರ ಹಿಂದಿನ ಅಸಲಿ ಸಂಗತಿಯೇ ಬೇರೆ ಇದೆ. ತನ್ನ ಸಂಸ್ಥೆಯ ಪ್ರಚಾರಾರ್ಥವಾಗಿ ಜೊಮ್ಯಾಟೊ ಇಂಥದ್ದೊಂದು ತಂತ್ರ ಅನುಸರಿಸುತ್ತಿರುವುದನ್ನು ಎಕ್ಸ್ ಬಳಕೆದಾರರೊಬ್ಬರು ಬಹಿರಂಗಪಡಿಸಿದ್ದಾರೆ.
ಜೊಮ್ಯಾಟೊದ ಮಾರ್ಕೆಟಿಂಗ್ ಮುಖ್ಯಸ್ಥರೊಬ್ಬರು ರೂಪದರ್ಶಿಯೊಬ್ಬರನ್ನು ಸ್ಟೈಲಿಶ್​ ಬೈಕ್​ ಹಾಗೂ ಜೊಮ್ಯಾಟೊ ಖಾಲಿ ಬ್ಯಾಗ್​ನೊಂದಿಗೆ ರಸ್ತೆಗಿಳಿಸಿ, ನಿತ್ಯ ಬೆಳಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ಸಂಚರಿಸುವಂತೆ ಮಾಡಿದ್ದಾರೆ ಎಂಬುದಾಗಿ ರಾಜೀವ್ ಮೆಹ್ತ ಎನ್ನುವವರು ಎಕ್ಸ್​ನಲ್ಲಿ ವಿಡಿಯೋ ಸಮೇತ ತಿಳಿಸಿದ್ದಾರೆ.
Indore#Zomatomarketing head had this idea. He hired a model to drive around with an empty zomato bag for one hour in the morning and one hour in the evening.@zomatois on a roll… 😁😁pic.twitter.com/kuwVpNzewu
— Rajiv Mehta (@rajivmehta19)October 16, 2023

ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × four =
Remember me
