ಭೋಪಾಲ್‌: ಗೆಳೆಯನಿಂದ ದೂರವಾದ ಯುವತಿಯೊಬ್ಬಳು, ಪ್ರಿಯಕರನ ಕುರಿತಾಗಿ ಕೋಪಗೊಂಡಿದ್ದಳು. ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಜೊಮ್ಯಾಟೋ ಮೊರೆ ಹೋಗಿದ್ದಾಳೆ. ಇದೇನು ವಿಚಿತ್ರವಾಗಿದೆ ಅಂತೀರಾ? ಬನ್ನಿ ನಾವು ನಿಮಗೆ ಇಂದು ಜೊಮ್ಯಾಟೋ ಜೋಡಿ ಕಥೆ ಹೇಳುತ್ತೇವೆ.
ಭೋಪಾಲ್​ನ ಅಂಕಿತಾ, ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾಳೆ. ಅಂಕಿತಾ ಮತ್ತು ಅವನ ಗೆಳೆಯ ಸ್ವಲ್ಪ ಸಮಯದ ಹಿಂದೆ ಬೇರ್ಪಟ್ಟರು. ಅಂಕಿತಾ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ್ದಳು. ಆಗ ಆಕೆಯ ಕಣ್ಣೀಗೆ ಬಿದ್ದಿದ್ದೇ ಜೊಮ್ಯಾಟೋ…
Ankita from Bhopal please stop sending food to your ex on cash on delivery. This is the 3rd time – he is refusing to pay!
— zomato (@zomato)August 2, 2023

ಜೊಮ್ಯಾಟೋ ಮೂಲಕವಾಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾಳೆ. ಗೆಳೆಯನ ಮನೆಗೆ Zomato ಮೂಲಕ ಆರ್ಡರ್‌ಗಳನ್ನು ಮಾಡಿ ಕಳುಹಿಸಿದ್ದಾಳೆ. ಆರ್ಡರ್‌ಗಳನ್ನು ತೆಗೆದುಕೊಂಡ ಜೊಮ್ಯಾಟೋ ಬಾಯ್‌ಗೆ ನಾನು ಆರ್ಡರ್ ಮಾಡಿಲ್ಲ, ಹಣ ನೀಡುವುದಿಲ್ಲ ಎಂದು ಅಂಕಿತಾ ಮಾಜಿ ಗೆಳೆಯ ಹೇಳಿದ್ದಾನೆ. ಇದು ಒಂದಲ್ಲ ಮೂರು ಬಾರಿ ನಡೆದಿದೆ.
ಈ ಜೋಡಿಯ ಕಥೆಯಿಂದ ಬೇಸರಗೊಂಡ ಜೊಮ್ಯಾಟೋ ನೇರವಾಗಿ ಟ್ವಿಟರ್‌ನಲ್ಲಿಯೇ ಅಂಕಿತಾಗೆ ಶಾಕ್ ನೀಡಿದೆ. ಕ್ಯಾಶ್ ಆನ್ ಡೆಲಿವರಿ ಹೆಸರಿನಲ್ಲಿ ಆರ್ಡರ್ ಬುಕ್ ಮಾಡಿ ಮಾಜಿ ಬಾಯ್ ಫ್ರೆಂಡ್ ಗೆ ತೊಂದರೆ ಕೊಡಲು ಯತ್ನಿಸಿದ್ದು, ಮೂರು ಬಾರಿ ಇದೇ ರೀತಿ ನಡೆದಿದೆ. ನಾನು ಆರ್ಡರ್ ಮಾಡಿಲ್ಲ, ಹಣ ನೀಡುವುದಿಲ್ಲ ಎಂದು ಅಂಕಿತಾ ಮಾಜಿ ಗೆಳೆಯ ವಾದಿಸುತ್ತಿದ್ದಾನೆಂದು Zomato ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಈ ಟ್ವೀಟ್​ಗೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.
ಒಡಿಶಾ ರೈಲು ಅಪಘಾತ: 2 ತಿಂಗಳು ಕಳೆದರೂ ಪತ್ತೆಯಾಗಿಲ್ಲ 29 ಶವಗಳ ಗುರುತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
