ನವದೆಹಲಿ:ಸದ್ಯ ದೇಶದೆಲ್ಲೆಡೆ ಶೈಕ್ಷಣಿಕ ಚಟುವಟಿಕೆಗಳು ಸ್ತಬ್ಧಗೊಂಡಿವೆ. ವಿದ್ಯಾರ್ಥಿಗಳಿಗೆ ಆನ್​ಲೈನ್​ ಮೂಲಕ ಪಾಠ ಮಾಡಲು ಬೋಧಕರಿಗೆ ಸೂಚಿಸಲಾಗುತ್ತಿದೆ. ಇದಲ್ಲದೇ, ಹಲವು ಸಂಘ-ಸಂಸ್ಥೆಗಳು ಸಿಬ್ಬಂದಿಗೆ ವರ್ಕ್​ ಫ್ರಾಮ್​ ಹೋಮ್​ ನೀಡಿವೆ. ಅವರೊಂದಿಗೆ ಸಂಪರ್ಕದಲ್ಲಿರಲು ಹೆಚ್ಚಾಗಿ ವಿಡಿಯೋ ಕಾನ್ಫ್​​ರೆನ್ಸಿಂಗ್​ ಆ್ಯಪ್​ಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಹೆಚ್ಚು ಬಳಕೆಯಲ್ಲಿರುವುದು ಚೀನಾ ನಿರ್ಮಿತ ಝೂಮ್​ ಆ್ಯಪ್​.
ಇದೀಗ ಝೂಮ್ ಬಳಕೆದಾರರಿಗೆ ಸರ್ಕಾರ ಶಾಕಿಂಗ್​ ನ್ಯೂಸ್​ ನೀಡಿದೆ. ಜೂಮ್​ ಆ್ಯಪ್​ ಸುರಕ್ಷಿತವಲ್ಲ, ಅದರಲ್ಲೂ ಸರ್ಕಾರಿ ಉದ್ದೇಶ ಅಥವಾ ಕರ್ತವ್ಯಗಳಿಗೆ ಇದನ್ನು ಬಳಸುವಂತೆಯೇ ಇಲ್ಲ ಎಂದು ಸರ್ಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದೆ.ಹೌದು, ಝೂಮ್​ ಆ್ಯಪ್​ನಲ್ಲಿದ್ದ ಪಾಸ್​ವರ್ಡ್​ಗಳು ಸೋರಿಕೆಯಾಗಿವೆ, ಕಾನ್ಫ್​ರೆನ್ಸಿಂಗ್​ ನಡೆಸುತ್ತಿರುವಾಗಲೇ ಹ್ಯಾಕ್​ ಮಾಡಲಾಗುತ್ತಿದೆ ಎಂಬ ವರದಿಗಳು ಬಂದ ಬಳಿಕವಂತೂ ಇದರ ಬಗ್ಗೆ ಹೆಚ್ಚು ಜಾಗೃತೆ ವಹಿಸುವಂತೆ ಸೂಚಿಸಿದೆ.
ಇನ್ನು, ಅನಿವಾರ್ಯ ಕಾರಣಗಳಿಗಾಗಿ ಇದನ್ನೇ ಬಳಸಲೇಬೇಕಾದವರು ಮುಂಜಾಗರೂಕತೆ ವಹಿಸುವುದು ಒಳ್ಳೆಯದು ಎಂದು ಕೆಲ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಸರ್ಕಾರದ ಅಧೀನದ ಸೈಬರ್​ ಸೆಕ್ಯುರಿಟಿ ಏಜೆನ್ಸಿಯಾಗಿರುವ ಇಂಡಿಯನ್​ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​ (CERT-IN​) ಬಿಡುಗಡೆ ಮಾಡಿದೆ.
ಕಾನ್ಫರೆನ್ಸ್​ ರೂಮ್​ನಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶ ನೀಡಬೇಡಿ. ಬೇರೆಯವರ ಟರ್ಮಿನಲ್​ಗಳಲ್ಲೂ ಇತರರಿಗೆ ಅನುದ್ದೇಶಿತ ಚಟುವಟಿಕೆಗಳನ್ನು ನಡೆಸಲು ಬಿಡಬೇಡಿ, ಬಳಕೆದಾರರಿಗೆ ಭಾಗವಹಿಸಲು ಪಾಸ್​ವರ್ಡ್​ ಹಾಗೂ ಲಾಗಿನ್​ಗಳನ್ನು ಒದಗಿಸಿ. ಈ ಎಲ್ಲ ಕಾರ್ಯಗಳನ್ನು ಲಾಗಿನ್​ ಆದ ಬಳಿಕ ಅವರವರ ಸೆಟಿಂಗ್ಸ್​ನಲ್ಲಿಯೇ ನಿರ್ವಹಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಸದ್ಯ ಕಾರ್ಪೋರೇಟ್​ ಹಾಗೂ ಇತರ ಸಂಸ್ಥೆಗಳಲ್ಲಿ ವೆಬಿನಾರ್​ ಹಾಗೂ ವಿಡಿಯೋ ಕಾನ್ಫರೆನ್ಸ್​, ಆನ್​ಲೈನ್​ ಪಾಠಗಳಿಗೆ ಝೂಮ್​ ಆ್ಯಪ್​ ಬಳಸಲಾಗುತ್ತದೆ. ಲಾಕ್​ಡೌನ್​ ಸಮಯದಲ್ಲಿ ಇದರ ಬಳಕೆಯಲ್ಲಿ ಭಾರಿ ಹೆಚ್ಚಳ ಉಂಟಾಗಿದೆ. ಡಿಸೆಂಬರ್​ನಲ್ಲಿ 1 ಕೋಟಿ ಇದ್ದ ಬಳಕೆದಾರರ ಸಂಖ್ಯೆ ಮಾರ್ಚ್​ ವೇಳೆಗೆ 20 ಕೋಟಿಗೆ ತಲುಪಿದೆ.
ಲಾಕ್​ಡೌನ್​ ಉಲ್ಲಂಘಿಸಿದವರ ವಿರುದ್ಧ ಕೇಸ್​ ದಾಖಲಿಸಿದ್ದಕ್ಕೆ ಸಿಟ್ಟಾದ ನಿವೃತ್ತ ಪೊಲೀಸ್​ ಮಹಾ ನಿರ್ದೇಶಕ ಮಾಡಿದ್ದೇನು?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:ten + five =
Remember me
