ನವದೆಹಲಿ:ಅಹಮದಾಬಾದ್​ ಮೂಲದ ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಸಂಸ್ಥೆ ಕೋವಿಡ್​-19 ಚಿಕಿತ್ಸೆಗಾಗಿ ಡೆಸಿಡ್ಯುಸ್ಟ್ಯಾಟ್​ ಎಂಬ ಮಾತ್ರೆಯನ್ನು ಅಭಿವೃದ್ಧಿಪಡಿಸಿದೆ. ಈ ಮಾತ್ರೆಯ Phase III ಟ್ರಯಲ್ಸ್​ಗಾಗಿ ಮೆಕ್ಸಿಕೋ ಸರ್ಕಾರ ಅನುಮತಿ ನೀಡಿದೆ.
ಮೆಕ್ಸಿಕೋದ ಅವಾಂತ್​ ಸಾಂಟೆ ರಿಸರ್ಚ್​ ಸೆಂಟರ್​ನಲ್ಲಿ ಡೆಸಿಡ್ಯುಸ್ಟ್ಯಾಟ್​ ಗುಳಿಗೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಝೈಡಸ್​ ಕ್ಯಾಡಿಲಾ ತಿಳಿಸಿದೆ.ಕರೊನಾ ಸೋಂಕಿಗೆ ತುತ್ತಾಗಿರುವವರಿಗೆ 100 ಎಂಜಿ ಡೆಸಿಡ್ಯುಸ್ಟ್ಯಾಟ್​ ಮಾತ್ರೆಗಳನ್ನು 14 ದಿನ ಕೊಟ್ಟು, ಅದರ ಪರಿಣಾಮ ಮತ್ತು ಸುರಕ್ಷತೆಯ ಕುರಿತು ಅಧ್ಯಯನ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ:ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡಲ್ಲಿ 100ಕ್ಕೆ ಕರೆ ಮಾಡಿ
ಈ ಬಗ್ಗೆ ಮಾಹಿತಿ ನೀಡಿರುವ ಝೈಡಸ್​ ಕ್ಯಾಡಿಲಾದ ಚೇರ್ಮನ್​ ಪಂಕಜ್​ ಆರ್​ ಪಟೇಲ್​, ಝೈಡಸ್​ನಲ್ಲಿ ನಾವು ಕೋವಿಡ್​-19 ಪಿಡುಗಿನ ವಿರುದ್ಧದ ಹೋರಾಟವನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದಿದ್ದೇವೆ. ಇದಕ್ಕಾಗಿ ನಾವು ಔಷಧಗಳು, ಡಯಾಗ್ನಾಸ್ಟಿಕ್ಸ್​ ಮತ್ತು ರೋಗನಿರೋಧಕ ಚುಚ್ಚುಮದ್ದುಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮಿಸುತ್ತಿದ್ದೇವೆ. ಈ ಶ್ರಮದ ಭಾಗವಾಗಿ ಸಿದ್ಧವಾಗಿರುವುದು ಡೆಸಿಡ್ಯುಸ್ಟ್ಯಾಟ್​ ಮಾತ್ರೆಗಳು. ಇದನ್ನು ಈಗ ನಾವು ಮೂರನೇ ಹಂತದ ಪ್ರಯೋಗಕ್ಕೆ ಒಳಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಝೈಡಸ್​ ಕ್ಯಾಡಿಲಾ ಸಂಸ್ಥೆ ಕಳೆದ ವಾರ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್​-19 ಲಸಿಕೆ ಝೈಕೋವ್​-ಡಿ ಅನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡಿರುವುದಾಗಿ ಹೇಳಿತ್ತು. ಈ ಪರೀಕ್ಷೆಗಳು ಇನ್ನಷ್ಟೇ ಆರಂಭವಾಗಬೇಕಿದೆ.
ಇಲ್ಲಿ ಪ್ಲೇಟು ಚಿನ್ನ, ಖುರ್ಚಿ ಚಿನ್ನ, ಇಡೀ ಹೋಟೆಲ್ಲೇ 24 ಕ್ಯಾರೆಟ್‌ ‌ ಚಿನ್ನ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + one =
Remember me
