ನವದೆಹಲಿ:ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ದೇಶದ 2ನೇ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಹೆಸರು ಇದೀಗ ಬಹಿರಂಗಗೊಂಡಿದೆ. ಅಹಮದಾಬಾದ್​ ಮೂಲದ ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಕಂಪನಿ ಇದನ್ನು ಸಿದ್ಧಪಡಿಸಿದ್ದು ಇದಕ್ಕೆ ಝೈಕೋವ್​-ಡಿ (ZyCoV-D) ಎಂದು ನಾಮಕರಣ ಮಾಡಿದೆ.
ಇದರ ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​ ಮುಗಿದಿದ್ದು, ಝೈಕೋವ್​-ಡಿಯನ್ನು ಮಾನವರ ಮೇಲಿನ ಪ್ರಯೋಗಿಸಲು ಅಗತ್ಯ ಅನುಮತಿ ದೊರೆತಿರುವುದಾಗಿ ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಶುಕ್ರವಾರ ತಿಳಿಸಿತ್ತು.
ಝೈಕೋವ್​-ಡಿ ಚುಚ್ಚುಮದ್ದನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿದಾಗ ಅದರಿಂದ ಭಾರಿ ರೋಗನಿರೋಧಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಎಲ್ಲ ರೀತಿಯ ಬಲಿಷ್ಠವಾದ ವೈರಾಣುವನ್ನೂ ನಿಷ್ಕ್ರಿಯಗೊಳಿಸಬಲ್ಲದ್ದಾಗಿದೆ. ತನ್ಮೂಲಕ ಈ ಚುಚ್ಚುಮದ್ದಿನ ರಕ್ಷಣಾತ್ಮಕ ಸಾಮರ್ಥ್ಯ ಸಂಪೂರ್ಣವಾಗಿ ಸಾಬೀತಾಗಿದೆ ಎಂದು ಝೈಡಸ್​ ಸಂಸ್ಥೆ ಹೇಳಿದೆ.
ಇದನ್ನೂ ಓದಿ:ಮಂಗಳ ಗ್ರಹದ ಬಹುದೊಡ್ಡ ಚಂದ್ರನ ಚಿತ್ರ ರವಾನಿಸಿದ ಮಾಮ್​
ದೇಶದ ವಿವಿಧೆಡೆಗಳಿಂದ 1 ಸಾವಿರ ಕರೊನಾ ಸೋಂಕಿತರನ್ನು ಬಳಸಿಕೊಂಡು ಝೈಕೋವ್​-ಡಿ ಚುಚ್ಚಮದ್ದನ್ನು ಮಾನವರ ಮೇಲೆ ಪ್ರಯೋಗಿಸಲಾಗುವುದು. ಭಾರತ ಮತ್ತು ಜಾಗತಿಕ ಬೇಡಿಕೆಗಳನ್ನು ಪೂರೈಸಲು ಅಗತ್ಯವಾದ ಸಾಮರ್ಥ್ಯ ಹೆಚ್ಚಳಕ್ಕೂ ನಿರ್ಧರಿಸಲಾಗಿದೆ ಎಂದು ಹೇಳಿದೆ.
ಮನುಷ್ಯರಿಗೆ ಕೊಡಬೇಕಿರುವ ಡೊಸೇಜ್​ನ ಮೂರು ಪಟ್ಟು ಡೋಸ್​ ಇಂಜೆಕ್ಷನ್​ ಅನ್ನು ಮೊಲಗಳಿಗೆ ಕೊಡಲಾಗಿತ್ತು. ಆದರೂ, ಅವುಗಳ ಪ್ರಾಣಕ್ಕೆ ಏನೊಂದು ಸಮಸ್ಯೆ ಆಗಲಿಲ್ಲ. ಇದನ್ನು ಗಮನಿಸಿದಾಗ, ಪುನರಾವರ್ತಿತ ಡೋಸ್​ ವಿಷಕಾರಿಯಾಗಿ ಪರಿಣಮಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದೆ.
VIDEO: ಕರೊನಾ ಶಂಕಿತನ ಐಡಿಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + thirteen =
Remember me
