ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !! : ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಜನ್ ಅವರ ಮದುವೆ ಇದೇ ತಿಂಗಳ 12ನೇ ತಾರೀಖು ಮುಂಬೈನಲ್ಲಿ ನಡೆಯಲಿದೆ. ಅನಂತ ಹಾಗೂ ರಾಧಿಕಾ ಮದುವೆಯಲ್ಲಿ ಅತಿಥಿಗಳಿಗೆ ಸಂತೋಷಪಡಿಸಲು ವಿಶೇಷ ವಿಭಿನ್ನ ರೀತಿಯ ಭಕ್ಷವನ್ನ ಸಿದ್ಧಪಡಿಸಲಾಗಿದೆ. ಅದರಲ್ಲಿಯೂ ವಾರಣಾಸಿಯ ಚಾಟ್ ಗಳನ್ನು ಸಿದ್ದಪಡಿಸಲಾಗುವುದು ಎಂದು ಮಾಹಿತಿ ತಿಳಿದಿದೆ. ತರ್ವಿನ್ ಕೌರ್ ಹಾಗೂ ಅದಿತಿ ದೀಕ್ಷಿತ್ ಇಬ್ಬರು ಬಾಣಸಿಗರು ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಸಂಭ್ರಮದಲ್ಲಿ ವಾರಣಾಸಿ ಸ್ಪೆಷಲ್ ಚಾಟ್ಸ್ ಅನ್ನು ತಯಾರಿಸಲಿದ್ದಾರೆ. ಇದನ್ನು ಓದಿ : ಹೈ ಪ್ರೊಫೈಲ್ ಇವೆಂಟ್ ನಲ್ಲಿ ಅತಿಥಿಗಳಿಗೆ ವಾರಣಾಸಿಯ ಪ್ರಸಿದ್ಧ ಚಾಟ್ ಗಳನ್ನು ಕಾಶಿ ಚಾಟ್ ಬಂಡಾರ ಬಡಿಸಲಿದೆ. ಈ ಮೂಲಕ ಭಾರತದ ಶ್ರೀಮಂತ ಪಾಕಶಾಲೆಯ ಪರಂಪರೆಯನ್ನು ಎತ್ತಿ ಹಿಡಿಯುವ ದೃಷ್ಟಿಕೋನವನ್ನು ಹೊಂದಿದೆ. ಬಾಣಸಿಗ ತರ್ವಿನ್ ಕೌರ ಅವರು ಹೇಳಿದಂತೆ ಮೊಗಲ್ ಯುಗದಲ್ಲಿ ಶಹಜಹಾನ್ ಆಡಳಿತದಲ್ಲಿರುವಾಗ ಕಾಲರಾದಿಂದ ತುಂಬಾ ವಿನಾಶ ಉಂಟಾಯಿತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿನ ಹಕಿಮ್ ಅಲಿ ಅಡುಗೆಯಲ್ಲಿ ಸಕ್ಕರೆ ಉಪ್ಪು ಮತ್ತು ಮಸಾಲೆಗಳು ಹೆಚ್ಚಾಗಿರಲಿ ಎಂದು ಹೇಳಿದಾಗ ಈ ಚಾಟ್ಸ್ ತಯಾರಾಗಿದೆ ಎಂದು ತಿಳಿಸಿದರು. ಇದನ್ನು ಓದಿ : ಕಾಶಿ ಚಾಟ್ ಭಂಡಾರ್ ನಿಂದ 50 ವರ್ಷಗಳಿಂದ ವಿಭಿನ್ನ ರೀತಿಯ ಪಾಕ ವಿಧಾನಗಳು, ಸಾಂಪ್ರದಾಯಿಕ ಪಾಕ ವಿಧಾನಗಳು, ಹೀಗೆ ಪರಂಪರೆಯಿಂದ ಸಾಗಿ ಬರುತ್ತಿದೆ. ಸದ್ಯ ಅಂಬಾನಿ ಮದುವೆಯಲ್ಲಿ ಜನಪ್ರಿಯ ವಾರಣಾಸಿ ಚಾಟ್ಸ್ ಗಳನ್ನು ಪ್ರಮುಖ ಪದಾರ್ಥಗಳೊಂದಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...