ವಿಚಾರವಾಗಿ ಸಂಸತ್‌ನಲ್ಲಿ ಪ್ರಧಾನಿ ಮೋದಿ ವಿರುದ್ಧ ಗುಡುಗಿದ ರಾಹುಲ್‌ ಗಾಂಧಿ! ನೀಟ್ ಅಕ್ರಮದ ಬಗ್ಗೆ 1 ದಿನ ಪ್ರತ್ಯೇಕ ಚರ್ಚೆಗೆ ನಾವು ಅವಕಾಶ ಕೇಳುತ್ತಿದ್ದೇವೆ. ಇದು ಅತ್ಯಂತ ಪ್ರಮುಖ ವಿಷಯ. 2 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ಇದರಿಂದ ಅನಾನುಕೂಲವಾಗಿದೆ. 70 ಕಡೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ ನಮಗೆ ಸಂತಸವಾಗುತ್ತದೆ' ಎಂದು ರಾಹುಲ್ ಮನವಿ ಮಾಡಿಕೊಂಡಿದ್ದಾರೆ. :ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದ್ದು, ಸಂಪುಟ ರಚನೆಯನ್ನೂ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಬಾರಿಯ ಕೇಂದ್ರ ಬಜೆಟ್‌ ಮಂಡನೆಗೆ ಸಿದ್ಧತೆಯೂ ನಡೆಯುತ್ತಿದೆ. ಇದಕ್ಕೂ ಮುನ್ನ ಲೋಕಸಭಾ ಮತ್ತು ರಾಜ್ಯಸಭೆಗಳಲ್ಲಿ ಸದನ ನಡೆಸಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಲ್ಲದೇ ಹೊಸ ಸರ್ಕಾರವು ಕೆಲವು ಹೊಸ ಕಾನೂನು ಬಿಲ್‌ಗಳನ್ನು ಮಂಡಿಸಿದೆ... ಸೋಮವಾರಯಲ್ಲಿ ಭಾರಿ ಗದ್ದಲ-ಗಲಾಟೆ ನಡುವೆ ಚರ್ಚೆ ಆರಂಭವಾಗಿತ್ತು.. ಸದನದಲ್ಲಿ ನೀಟ್‌ ಅಕ್ರಮ ಭಾರೀ ಸದ್ದು ಮಾಡಿತ್ತು.. ಅಲ್ಲದೇ ಫಾರ್ಮರ್ಸ್‌ ಲಾ ಬಗ್ಗೆ ಕೂಡ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಧ್ವನಿ ಎತ್ತಿದರು. ಸದನದಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭಾಷಣ ಮಾಡುತ್ತಿರುವಾಗ ಆಡಳಿತ ಪಕ್ಷದವರು ಭಾರೀ ಗದ್ದಲ ನಡೆಸಿದರು. ಈ ವೇಳೆ ರಾಹುಲ್‌ ಗಾಂಧಿ ʼಜೈ ಸಂವಿಧಾನʼ ಎನ್ನುವ ಮೂಲಕ ಆಡಳಿತ ಪಕ್ಷಕ್ಕೆ ನಯವಾಗಿ ತಿವಿದರು. ಇದನ್ನೂ ಓದಿ: ಇದಲ್ಲದೇ ಶಿವನ ಫೋಟೊ ತೋರಿಸುತ್ತಾ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಕಿಡಿಕಾರಿದರು. ಸದನದಲ್ಲಿ ಫೋಟೋ ತೋರಿಸುತ್ತಿರುವಾಗ ಕ್ಯಾಮೆರಾದಲ್ಲಿ ತೋರಿಸಲ್ಲವೆಂದು ರಾಹುಲ್‌ ವಾಗ್ದಾಳಿ ನಡೆಸಿದರು. ಇನ್ನು ರಾಹುಲ್‌ಗೆ ಅಮಿತ್‌ ಶಾ ಕೂಡ ಕೌಂಟರ್‌ ಕೊಡುವ ಪ್ರಯತ್ನ ಮಾಡಿದರು. ಇದಕ್ಕೆ ತಿರುಗೇಟು ನೀಡಿದ ರಾಹುಲ್‌, ನೀಟ್‌ ಪರೀಕ್ಷೆಯನ್ನು ಕಮರ್ಷಿಯಲ್‌ ಪರೀಕ್ಷೆಯಾಗಿ ಮಾರ್ಪಡಿಸಿದ್ದೀರಿ ಅಂತಾ ಕಿಡಿಕಾರಿದರು. ಸೆಷನ್‌ ಆರಂಭದಿಂದಲೂ ಈ ಅಕ್ರಮದ ಬಗ್ಗೆ ಯಾವುದೇ ಮಾತುಕತೆಗೆ ಅವಕಾಶ ನೀಡಿಲ್ಲ. ನಾವು ಮೊದಲಿನಿಂದ ಚರ್ಚೆಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದರೂ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ದಿನ ಚರ್ಚೆಗೆ ಒತ್ತಾಯ, ಸಭಾತ್ಯಾಗ! . ’ . … — (@) ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ 1 ದಿನ ಚರ್ಚೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಒತ್ತಾಯಿಸಿದವು. ಇದಕ್ಕೆ ಸ್ಪೀಕರ್ ಅನುಮತಿ ನೀಡದ ಕಾರಣ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಲಾಯಿತು. ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ ನೀಟ್ ಅಕ್ರಮದ ಕುರಿತ ಚರ್ಚೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದರು. ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಮುಗಿಯುವವರೆಗೂ ಪ್ರತ್ಯೇಕ ಚರ್ಚೆ ಸಾಧ್ಯವಿಲ್ಲವೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಇದನ್ನೂ ಓದಿ: ʼನೀಟ್ ಅಕ್ರಮದ ಬಗ್ಗೆ 1 ದಿನ ಪ್ರತ್ಯೇಕ ಚರ್ಚೆಗೆ ನಾವು ಅವಕಾಶ ಕೇಳುತ್ತಿದ್ದೇವೆ. ಇದು ಅತ್ಯಂತ ಪ್ರಮುಖ ವಿಷಯ. 2 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ಇದರಿಂದ ಅನಾನುಕೂಲವಾಗಿದೆ. 70 ಕಡೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ ನಮಗೆ ಸಂತಸವಾಗುತ್ತದೆ' ಎಂದು ರಾಹುಲ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಸಭಾ ಉಪನಾಯಕ, ‌ʼಸದನದಲ್ಲಿ ಚರ್ಚೆಗೆ ಕೆಲವು ನೀತಿ ನಿಯಮಗಳಿವೆ. ಅವುಗಳೇ ಸದನವನ್ನು ಗಟ್ಟಿಗೊಳಿಸಿವೆ. ನನ್ನ ದಶಕಗಳ ಅನುಭವದಲ್ಲಿ ವಂದನಾ ನಿರ್ಣಯದ ಚರ್ಚೆ ವೇಳೆ ಬೇರೆ ಯಾವುದೇ ವಿಷಯವನ್ನು ಚರ್ಚೆಗೆ ತೆಗೆದುಕೊಂಡಿಲ್ಲ. ಈ ಚರ್ಚೆ ಮುಗಿದ ಬಳಿಕವೇ ಉಳಿದ ವಿಷಯಗಳ ಚರ್ಚೆ ನಡೆಯುತ್ತದೆ' ಎಂದು ಅಂತಾ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...