ಈ ವಿಡಿಯೋ ನೋಡಿದ ನಂತರ ಮಳೆಯಲ್ಲಿ ನೀವು ರೀಲ್ಸ್‌ ಮಾಡೋಕೆ ಹೋಗಲ್ಲ..! : ಮಳೆಯಾಗುತ್ತಿದ್ದಂತೆ, ಯುವತಿಯೊಬ್ಬಳು ರೀಲ್ಸ್‌ ಮಾಡಲು ಮುಂದಾಗಿದ್ದಳು, ಮಳೆಯಲ್ಲಿ ನೆನೆಯುತ್ತಾ ಹಾಡೋಂದನ್ನು ಹಾಕಿ ಅದಕ್ಕೆ ಹೆಜ್ಜೆ ಹಾಕಬೇಕು ಎನ್ನುವಷ್ಟರಲ್ಲಿ, ಒಂದು ಅನಿರೀಕ್ಷಿತ ಘಟನೆ ನಡೆಯಿತು.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.. :ಕೆಲವು ಯುವಕ ಯುವತಿಯರು ರಾತ್ರೋರಾತ್ರಿ ಸ್ಟಾರ್‌ ಆಗಲು ಓಡಾಗುತ್ತಿದ್ದಾರೆ. ಅದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ರೀಲ್ಸ್‌ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಈ ಪೈಕಿ ಕೆಲವು ವೀಡಿಯೊಗಳು ಆಘಾತಕಾರಿಯಾಗಿರುತ್ತವೆ, ಇನ್ನೂ ಕೆಲವು ಆಶ್ಚರ್ಯಕರವಾಗಿರುತ್ತವೆ... ಅದೇ ರೀತಿ.. ಇತ್ತೀಚೆಗೆ ಯುವತಿಯೊಬ್ಬಳು, ರೀಲ್‌ ಹುಚ್ಚಿಗೆ ಬಿದ್ದು ಪ್ರಾಣವನ್ನೇ ಅಪಾಯಕ್ಕಿಡುತ್ತಿದ್ದಳು. ಆದ್ರೆ ಜಸ್ಟ್‌ ಮಿಸ್‌ ಅಗಿದ್ದಾರೆ. ಹೌದು.. ಹೇಗಾದರೂ ಮಾಡಿ ಫೇಮಸ್ ಆಗಬೇಕು ಎಂಬಂತೆ ಕೆಲ ರೀಲ್ಸ್‌ ಸ್ಟಾರ್‌ಗಳು ವರ್ತಿಸುತ್ತಿದ್ದಾರೆ. ಸಧ್ಯ ಮಳೆಗಾಲ, ಹನಿಯೊಡದರೆ ಸಾಕು, ಓ ಮೇಘರಾಜನೇ ಅಂತ ಹಾಡು ಹಾಕಿಕೊಂಡು ಯುವತಿಯರು ಮಳೆಯಲ್ಲಿ ಹೆಜ್ಜೆ ಹಾಕಿ ನೆನೆಯಲು ಓಡುತ್ತಾರೆ.. ಹಿರಿಯರು ಮಳೆಗೆ ಹೋಗಬೇಡಿ ಅಂತ ಎಷ್ಟು ಹೇಳಿದ್ರೂ ಕೇಳುವುದಿಲ್ಲ.. ಇಲ್ಲೊಬ್ಬ ಯುವತಿ ಮಳೆಯಲ್ಲಿ ರೀಲ್ ಮಾಡಬೇಕೆಂದು, ಟೆರೇಸ್ ಮೇಲೆ ಹತ್ತಿದ್ದಳು, ಆಗ ಅವಳ ಪಕ್ಕದಲ್ಲೇ ಸಿಡುಲು ಬಡಿದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: .💃🙂📍, ⚡🌩️ — (@Nitesh805181) ಬಿಹಾರದ ಸೀತಾಮಧಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಯುವತಿಯೊಬ್ಬಳು ಮಳೆಗಾಲದಲ್ಲಿ ಏನಾದರೂ ವಿಭಿನ್ನವಾಗಿ ರೀಲ್ಸ್‌ ಮಾಡಬೇಕೆಂದು ಪ್ಲ್ಯಾನ್‌ ಹಾಕಿಕೊಂಡು, ಟೆರೇಸ್ ಮೇಲೆ ಹತ್ತಿದಳು. ಫೋನ್‌ ಕ್ಯಾಮರೆ ಆನ್‌ ಮಾಡಿ ಡಾನ್ಸ್‌ ಮಾಡ್ಬೇಕು ಅಂತ ಹೆಜ್ಜೆ ಹಾಕುತ್ತಲೇ, ಆಕೆಯ ಪಕ್ಕದಲ್ಲಿ ಸಿಡುಲು ಬಡಿದಿದೆ.. ಇದರಿಂದ ಯುವತಿ ಸತ್ನೋ.. ಯಪ್ಪಾ ಅಂತ ಅಲ್ಲಿಂದ ಓಡಿ ಹೋಗಿದ್ದಾಳೆ ಸಧ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...