ಮುಂದಿನ ಮೂರು ದಿನಗಳ ಕಾಲ ಕೇರಳದಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ ಮುನ್ಸೂಚನೆ : ಕೇರಳದ ಕರಾವಳಿಯಲ್ಲಿ ಬಿರುಸಿನ ಗಾಳಿ ಹಾಗೂ ಪ್ರತಿಫಲ ಹವಾಮಾನದ ಕಾರಣದಿಂದಾಗಿ ಅಲೆಗಳ ಎಚ್ಚರಿಕೆ ಹೆಚ್ಚಾಗಿದೆ. ಮುಂದಿನ ಮೂರು ದಿನಗಳ ಕಾಲ ಅತಿ ಹೆಚ್ಚು ಹಾಗೂ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ. ಕೇರಳದ ಕರಾವಳಿಯಲ್ಲಿ ಬಿರುಸಿನ ಗಾಳಿ ಬೀಸುತ್ತಿದ್ದು, ತೀವ್ರ ಮಳೆ ಆಗುವ ಸಾಧ್ಯತೆ ಇದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ವಾಯ್ನಾಡ್, ಇಡುಕ್ಕಿ, ಎರ್ನಾಕುಲಂ, ಪತ್ತನಂತಿಟ್ಟ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಇದನ್ನು ಓದಿ : ಕೇರಳದ ಮಧ್ಯ ಕರಾವಳಿಯಿಂದ, ಮಹಾರಾಷ್ಟ್ರ ಕರಾವಳಿಯವರೆಗೆ ಒತ್ತಡ ಹೆಚ್ಚಾಗಿರುವ ಕಾರಣ ಕೇರಳದಲ್ಲಿ ಭಾರಿ ಮಳೆ ಮುಂದುವರೆಯಲಿದೆ. ಜೂನ್ 27ರಂದು ಕಣ್ಣೂರು ಮತ್ತು ವಾಯ್ ನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮಾನ್ಸೂನ್ ಮಾರುತಗಳು ಗಂಟೆಗೆ ಗರಿಷ್ಠ 45 ರಿಂದ 55 ವೇಗದಲ್ಲಿ ಬೀಸಲಿವೆ ಎಂದು ತಿಳಿಸಲಾಗಿದೆ. ಈ ಋತುವಿನಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು ರಾಜ್ಯಾದ್ಯಂತ ಸರಾಸರಿ 69 ಮಿಲಿ ಮೀಟರ್ ನಿಂದ 103 ಮಿಲಿ ಮೀಟರ್ ಮಳೆಯಾಗಿದೆ. ಇದನ್ನು ಓದಿ : ಕರಾವಳಿಯಲ್ಲಿ ಹೆಚ್ಚಿನ ಅಲೆಗಳ ಎಚ್ಚರಿಕೆ ನೀಡಲಾಗಿದ್ದು, ಕೆಟ್ಟ ಹವಮಾನ ನಿರೀಕ್ಷೆ ಇದೆ ಮತ್ತು ಕೇರಳದ ಕರಾವಳಿಯ ಜನರಿಗೆ ಸಮುದ್ರದಲ್ಲಿ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...