ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್‌ ಬುಕ್ ಮಾಡಿದ್ರೆ ಜೈಲು ಫಿಕ್ಸ್!‌ : ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಅದು ಬಿಟ್ಟು ನಿಮಗೆ ಗೊತ್ತಿಲ್ಲದ ಅಪರಿಚಿತರಿಗೆ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್‌ ಮಾಡಿದರೆ ಖಂಡಿತ ನಿಮಗೆ ಸಂಕಷ್ಟ ಎದುರಾಗುತ್ತದೆ. :ನಿಮ್ಮ ಸ್ನೇಹಿತರು ಅಥವಾ ಅಪರಿಚಿತರಿಗೆ ನಿಮ್ಮ ವೈಯಕ್ತಿಕ ಐಡಿಯ ಮೂಲಕ ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್‌ ಮಾಡ್ತೀರಾ? ಹಾಗಿದ್ರೆ ನೀವು ಎಚ್ಚರವಾಗಿರಬೇಕು.. ನೀವು ಹೀಗೆ ಯಾರ್ಯಾರಿಗೋ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್ ಮಾಡಿದರೆ ಜೈಲು ಶಿಕ್ಷೆ ಮತ್ತು ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತದೆ. ಹೌದು,ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕೆಲವು ಹೊಸ ನಿಯಮಗಳನ್ನು ತಂದಿದೆ. ರೈಲ್ವೆ ಕಾಯ್ದೆಯ ಸೆಕ್ಷನ್ 143ರ ಪ್ರಕಾರ, ಇನ್ಮುಂದೆ ಅಧಿಕೃತ ಏಜೆಂಟರು ಮಾತ್ರ 3ನೇ ವ್ಯಕ್ತಿಯ ಹೆಸರಿನಲ್ಲಿ ಕಾಯ್ದಿರಿಸುವ ಟಿಕೆಟ್ ಬುಕ್‌ ಮಾಡಬಹುದು. ಇದನ್ನೂ ಓದಿ: ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು. ಅದು ಬಿಟ್ಟು ನಿಮಗೆ ಗೊತ್ತಿಲ್ಲದ ಅಪರಿಚಿತರಿಗೆ ನಿಮ್ಮ ಐಡಿಯಲ್ಲಿ ಟಿಕೆಟ್‌ ಬುಕ್‌ ಮಾಡಿದರೆ ಖಂಡಿತ ನಿಮಗೆ ಸಂಕಷ್ಟ ಎದುರಾಗುತ್ತದೆ. ಜಾರಿಗೆ ತಂದಿರುವ ಹೊಸ ನಿಯಮಗಳನ್ನು ಉಲ್ಲಂಘಿಸುವವರಿಗೆ 10,000 ರೂ.ಗಳ ದಂಡ ಮತ್ತು ೩ ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಇನ್ಮುಂದೆ ತಮ್ಮ ಐಡಿಗಳನ್ನು ಬೇರೆ ಯಾರಿಗೂ ನೀಡದಂತೆ ರೈಲ್ವೆ ನಾಗರಿಕರಿಗೆ ಮನವಿ ಮಾಡಿದೆ. ಐಡಿಯೊಂದಿಗೆ ಆಧಾರ್ ಲಿಂಕ್ ಮಾಡಿದವರಿಗೆ ತಿಂಗಳಿಗೆ 24ಮತ್ತು ಲಿಂಕ್ ಮಾಡದವರಿಗೆ 12 ಟಿಕೆಟ್‌ಗಳನ್ನು ಬುಕ್‌ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...