: ಭೂಮಿಯ ಅತಿ ಎತ್ತರದ ಪ್ರದೇಶ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸರ್ಚ್ ಎಂಜಿನ್ "ಗೂಗಲ್" ಅನ್ನು ಯಾರು ಸ್ಥಾಪಿಸಿದರು? ಉತ್ತರ:ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ (1998 ರಲ್ಲಿ) ಪ್ರಶ್ನೆ 2:ಕೌಲಾಲಂಪುರ್ ಯಾವ ದೇಶದ ರಾಜಧಾನಿ? ಉತ್ತರ: ಮಲೇಷ್ಯಾ ಪ್ರಶ್ನೆ 3:ಕ್ಯಾಮೆರಾವನ್ನು ಯಾವಾಗ ಕಂಡುಹಿಡಿಯಲಾಯಿತು? ಉತ್ತರ:1816ರಲ್ಲಿ ಜೋಸೆಫ್ ನೈಸೆಫೋರ್ ನಿಪ್ಸೆ ಕಂಡು ಹಿಡಿದರು ಪ್ರಶ್ನೆ 4:ತಾಪಿ ನದಿಯ ಮೂಲ ಯಾವುದು? ಉತ್ತರ: ಸಾತ್ಪುರ ಶ್ರೇಣಿಗಳು ಪ್ರಶ್ನೆ 5:ಭೂಮಿಯ ಅತಿ ಎತ್ತರದ ಪ್ರದೇಶ ಯಾವುದು? ಉತ್ತರ: ಟಿಬೆಟ್ (ಸಮುದ್ರ ಮಟ್ಟದಿಂದ 14,370 ಅಡಿ ಎತ್ತರ) ಇದನ್ನೂ ಓದಿ: ಪ್ರಶ್ನೆ 6:ಭಾರತದಲ್ಲಿ ಯಾವ ಸಾರ್ವಜನಿಕ ವಲಯದ ಬ್ಯಾಂಕ್ ದೊಡ್ಡದಾಗಿದೆ? ಉತ್ತರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಶ್ನೆ 7:ರಜಿಯಾ ಸುಲ್ತಾನ ಆಳ್ವಿಕೆಯ ಅವಧಿ ಯಾವುದು? ಉತ್ತರ: 1236AD - 1240AD ಪ್ರಶ್ನೆ 8:ಸಲೀಂ ಅಲಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಉತ್ತರ: ಜಮ್ಮು ಮತ್ತು ಕಾಶ್ಮೀರ ಪ್ರಶ್ನೆ 9:ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿದೆ? ಉತ್ತರ: ಜಿನೀವಾ, ಸ್ವಿಟ್ಜರ್ಲೆಂಡ್ ಪ್ರಶ್ನೆ 10:ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಫೆಬ್ರವರಿ 28 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...