: ನೇಣು ಬಿಗಿದುಕೊಂಡು ಕಾಂಗ್ರೆಸ್‌ ಶಾಸಕನ ಪತ್ನಿ ಆತ್ಮಹತ್ಯೆ..! : ರೂಪಾದೇವಿಯವರು ಶಾಸಕ ಸತ್ಯಂಗೆ ವಿಡಿಯೋ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದರಿಂದ ಹೆದರಿದ ಸತ್ಯಂ ಕೂಡಲೇ ಪತ್ನಿ ವಾಸಿಸುತ್ತಿದ್ದ ಮನೆ ಬಳಿ ಹೋಗಿದ್ದಾರೆ. ಆದರೆ ಮನೆ ತಲುಪಿದಾಗ ರೂಪಾದೇವಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು. :ನೇಣು ಬಿಗಿದುಕೊಂಡು ಕಾಂಗ್ರೆಸ್​ ಶಾಸಕನ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕರೀಮ್​ನಗರ ಜಿಲ್ಲೆಯ ಚೊಪ್ಪದಂಡಿಯ ಹೊರವಲಯದಲ್ಲಿರುವ ಕೊಂಪಲ್ಲಿಯಲ್ಲಿ ನಡೆದಿದೆ. ಚೊಪ್ಪದಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಮೆಡಿಪಲ್ಲಿ ಸತ್ಯಂ ಅವರ ಪತ್ನಿ ರೂಪಾದೇವಿ ಆತ್ಮಹತ್ಯೆಗೆ ಶರಣಾದವರು. ಪಂಚಶೀಲಾ ಕಾಲೋನಿಯ ನಿವಾಸದಲ್ಲಿ ರಾತ್ರಿ ವೇಳೆ ನೇಣು ಬಿಗಿದುಕೊಂಡು ರೂಪಾದೇವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಂಗ್ರೆಸ್​ ಶಾಸಕರ ಪತ್ನಿ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 12 ವರ್ಷಗಳ ಹಿಂದೆ ಮೆಡಿಪಲ್ಲಿ ಸತ್ಯಂ ಅವರು ರೂಪಾದೇವಿಯವರನ್ನು ಪ್ರೀತಿಸಿ ಮದುವೆಯಾಗಿದ್ದರು. ರೂಪಾದೇವಿಯವರು ಮೇಡ್ಚಲ್ ಮುನಿರಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ದಂಪತಿಗೆ ಯೋಜಿತ್ (11) ಮತ್ತು ಮಗಳು ರಿಷಿಕಾ ಶ್ರೀ (9) ಎಂಬ ಮಕ್ಕಳಿದ್ದಾರೆ. ರೂಪಾದೇವಿಯವರು ಶಾಸಕ ಸತ್ಯಂಗೆ ವಿಡಿಯೋ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದರಿಂದ ಹೆದರಿದ ಸತ್ಯಂ ಕೂಡಲೇ ಪತ್ನಿ ವಾಸಿಸುತ್ತಿದ್ದ ಮನೆ ಬಳಿ ಹೋಗಿದ್ದಾರೆ. ಆದರೆ ಮನೆ ತಲುಪಿದಾಗ ರೂಪಾದೇವಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಇದನ್ನೂ ಓದಿ: ಪತ್ನಿ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸತ್ಯಂ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ರೂಪಾದೇವಿಯವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ರೂಪಾದೇವಿ ಜೊತೆ ಶಾಸಕ ಸತ್ಯಂರಿಗೆ ವೈಮನಸ್ಯ ಇರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮೇಡ್ಚಲ್​ತನಿಖೆ ನಡೆಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...