ಯಶವಂತಪುರ - ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲು ಸೇವೆ : ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲನ್ನು ಓಡಿಸಲು ರೈಲ್ವೆ ಮಂಡಳಿಯು ಅನುಮೋದಿಸಿದೆ. ಬೆಂಗಳೂರು:ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲನ್ನು ಓಡಿಸಲು ರೈಲ್ವೆ ಮಂಡಳಿಯು ಅನುಮೋದಿಸಿದೆ. ರೈಲು ಸಂಖ್ಯೆ 06519 ಯಶವಂತಪುರ - ಹಜರತ್ ನಿಜಾಮುದ್ದೀನ್ ಏಕಮುಖ ವಿಶೇಷ ರೈಲು ಜೂನ್ 23 ರಂದು ಭಾನುವಾರ ರಾತ್ರಿ 23:40 ಘಂಟೆಗೆ ಯಶವಂತಪುರದಿಂದ ಹೊರಟು, ಜೂನ್ 26 ರಂದು ಬುಧವಾರ ಬೆಳಗ್ಗೆ 06:30 ಘಂಟೆಗೆ ತನ್ನ ಗಮ್ಯಸ್ಥಾನ ಹಜರತ್ ನಿಜಾಮುದ್ದೀನ್ ತಲುಪಲಿದೆ. ಇದನ್ನೂ ಓದಿ: ಈ ವಿಶೇಷ ರೈಲು ತುಮಕೂರು, ಬಾಣಸಂದ್ರ, ಅರಸಿಕೆರೆ, ದಾವಣಗೆರೆ, ಹರಿಹರ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಪುಣೆ, ಕೋಪರಗಾಂ, ಮನ್ಮಾಡ್, ಭುಸಾವಲ್, ಇಟಾರ್ಸಿ, ಭೋಪಾಲ್, ಬೀನಾ, ವೀರಾಂಗಣ ಲಕ್ಷ್ಮೀಬಾಯಿ ಝಾನ್ಸಿ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ. ಈ ವಿಶೇಷ ರೈಲು 9 ಸ್ಲೀಪರ್ ಕ್ಲಾಸ್, 11 ಸಾಮಾನ್ಯ 2ನೇ ದರ್ಜೆಮತ್ತು 2 ಎಸ್ಎಲ್ಆರ್ / ಡಿ ಕ್ಲಾಸ್ ಸೇರಿದಂತೆ ಒಟ್ಟು 22 ಬೋಗಿಗಳು ಹೊಂದಿರುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...