ಕೃಷಿಕರ 31 ಸಾವಿರ ಕೋಟಿ ರೂ. ಬೆಳೆಸಾಲ ಮನ್ನಾ; ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ 2 : ಸಂಪುಟ ಸಭೆಯ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಿಎಂ ರೇವಂತ್ ರೆಡ್ಡಿಯವರು, ಎಲ್ಲಾ ಬೆಳೆ ಸಾಲ ಮನ್ನಾ ಮಾಡಲು ಅಂದಾಜು 31,000 ಕೋಟಿ ರೂ. ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ. 2 :2018ರ ಡಿಸೆಂಬರ್ 12ರಿಂದ 2023ರ ಡಿಸೆಂಬರ್ 9ರವರೆಗೆ ಪಡೆದಿರುವ 2 ಲಕ್ಷ ರೂ.ವರೆಗಿನ ಎಲ್ಲಾ ಕೃಷಿಕರ ಬೆಳೆ ಸಾಲವನ್ನು ಮನ್ನಾ ಮಾಡಲು ತೆಲಂಗಾಣದ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಶುಕ್ರವಾರ(ಜೂನ್‌ 21) ಮಧ್ಯಾಹ್ನ ಡಾ.ಬಿ.ಆರ್.ಅಂಬೇಡ್ಕರ್ ತೆಲಂಗಾಣ ರಾಜ್ಯ ಸಚಿವಾಲಯದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಯ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಿಎಂ ರೇವಂತ್ ರೆಡ್ಡಿಯವರು, ಎಲ್ಲಾ ಬೆಳೆ ಸಾಲ ಮನ್ನಾ ಮಾಡಲು ಅಂದಾಜು 31,000 ಕೋಟಿ ರೂ. ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: నా జీవితంలో…ఈ రోజు చరిత్రాత్మకం. మే 6, 2022 నాడు వరంగల్ వేదికగా…లక్షలాది మంది తెలంగాణ రైతులకు…శ్రీ రాహుల్ గాంధీ గారు ఇచ్చిన మాట…ఏకకాలంలో రూ.2 లక్షల రుణమాఫీ. నా సారథ్యంలో మంత్రివర్గం…ఆ మాటను నిలబెట్టుకుంది.తెలంగాణ రైతులకు ఏకకాలంలో…రూ.2 లక్షల రుణమాఫీ చేయాలని కేబినెట్… — (@revanth_anumula) ಸಚಿವ ಸಂಪುಟದ ಎಲ್ಲಾ ಸದಸ್ಯರು ಬೆಳೆ ಸಾಲವನ್ನು ಮನ್ನಾ ಮಾಡಲು ಅರ್ಹತಾ ಮಾನದಂಡಗಳು ಮತ್ತು ಇತರ ನಿಯಮಾವಳಿಗಳನ್ನು ಅನುಮೋದಿಸಿದ್ದಾರೆ. ಶೀಘ್ರವೇ ಈ ಬಗ್ಗೆ ಸರ್ಕಾರದ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಹಿಂದಿನ ಸರ್ಕಾರವು ತನ್ನ ಮೊದಲ ಅವಧಿಯಲ್ಲಿ 16,000 ಕೋಟಿ ರೂ. ಮತ್ತು 2ನೇ ಅವಧಿಯಲ್ಲಿ 12,000 ಕೋಟಿ ರೂ.ಗಳನ್ನು ಬೆಳೆ ಸಾಲ ಮನ್ನಾ ಭರವಸೆಯ ಭಾಗವಾಗಿ ಮನ್ನಾ ಮಾಡಿದೆ. ಅದರಂತೆ ಇದೀಗ ಕಾಂಗ್ರೆಸ್ ಸರ್ಕಾರವು ಸಹ ಎಲ್ಲಾ ಬೆಳೆ ಸಾಲಗಳನ್ನು ಮನ್ನಾ ಮಾಡುತ್ತಿದೆ. ಪ್ರತಿ ಕೃಷಿಕರ 2 ಲಕ್ಷ ರೂ.ಯಂತೆ 31,000 ಕೋಟಿ ರೂ. ಸಾಲವನ್ನು ಏಕಕಾಲದಲ್ಲಿ ಮನ್ನಾ ಮಾಡಲಾಗುವುದು ಎಂದುಯವರು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...