: ಪ್ರಸಿದ್ಧ ವಿಕ್ಟೋರಿಯಾ ಸ್ಮಾರಕವು ಭಾರತದ ಯಾವ ನಗರದಲ್ಲಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಕೇಂದ್ರಾಡಳಿತ ಪ್ರದೇಶಗಳ ಕಾರ್ಯನಿರ್ವಾಹಕ ಮುಖ್ಯಸ್ಥರು ಯಾರು? ಉತ್ತರ: ರಾಷ್ಟ್ರಪತಿ ಪ್ರಶ್ನೆ 2:ಯಾವ ದಿನವನ್ನು ಪರಿಸರ ದಿನ ಎಂದು ಆಚರಿಸಲಾಗುತ್ತದೆ? ಉತ್ತರ: ಜೂನ್ 5 ಪ್ರಶ್ನೆ 3:ಐಜ್ವಾಲ್ ಭಾರತದ ಯಾವ ರಾಜ್ಯದ ರಾಜಧಾನಿಯಾಗಿದೆ? ಉತ್ತರ: ಮಿಜೋರಾಂ ಪ್ರಶ್ನೆ 4:ಭೂಮಿಯ ಮೇಲಿನ ಆಳವಾದ ಸಾಗರದ ಕಂದಕ ಯಾವುದು? ಉತ್ತರ: ಮರಿಯಾನಾ ಕಂದಕ ಪ್ರಶ್ನೆ 5:ಭಾರತದಲ್ಲಿ ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ? ಉತ್ತರ: 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಇದನ್ನೂ ಓದಿ: ಪ್ರಶ್ನೆ 6:ಯಾವ ಎರಡು ನದಿಗಳು ದೇವಪ್ರಯಾಗದಲ್ಲಿ ವಿಲೀನಗೊಂಡು ಗಂಗಾ ನದಿಯನ್ನು ರೂಪಿಸುತ್ತವೆ? ಉತ್ತರ: ಅಲಕಾನಂದ ಮತ್ತು ಭಾಗೀರಥಿ ನದಿಗಳು ಪ್ರಶ್ನೆ 7:ವಿಶ್ವ ಆಮೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಮೇ 23 ಪ್ರಶ್ನೆ 8:ಪ್ರಸಿದ್ಧ ಗಿರ್ ರಾಷ್ಟ್ರೀಯ ಅರಣ್ಯ ಎಲ್ಲಿದೆ? ಉತ್ತರ: ಗುಜರಾತ್ ಪ್ರಶ್ನೆ 9:ವಿಕ್ಟೋರಿಯಾ ಸ್ಮಾರಕವು ಭಾರತದ ಯಾವ ನಗರದಲ್ಲಿದೆ? ಉತ್ತರ: ಕೋಲ್ಕತ್ತಾ ಪ್ರಶ್ನೆ 10:ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು..? ಉತ್ತರ: ತೆಹ್ರಿ ಅಣೆಕಟ್ಟು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...