ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಭಾರತ...! : ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದ್ದು, ಬೆಳವಣಿಗೆ ದರವು ಅಗ್ರ ಐದು ದೇಶಗಳಲ್ಲಿ ಅತ್ಯಧಿಕವಾಗಿದೆ ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದ್ದು, ಬೆಳವಣಿಗೆ ದರವು ಅಗ್ರ ಐದು ದೇಶಗಳಲ್ಲಿ ಅತ್ಯಧಿಕವಾಗಿದೆ ಭಾರತದ ಏರ್‌ಲೈನ್ ಸೀಟ್ ಬೆಳವಣಿಗೆ ದರವು ಅಗ್ರ ಐದು ದೇಶಗಳಲ್ಲಿ ಅತ್ಯಧಿಕವಾಗಿದೆ, 10 ವರ್ಷಗಳ ಸರಾಸರಿಯಲ್ಲಿ ವಾರ್ಷಿಕವಾಗಿ 6.9 ಪ್ರತಿಶತದಷ್ಟು ಬೆಳೆಯುತ್ತಿದೆ. ಇತರೆ ದೇಶಗಳ ಸಾಧನೆ ನೋಡಿದರೆ ಚೀನಾ ಶೇ.6.3, ಅಮೆರಿಕ ಶೇ.2.4, ಇಂಡೋನೇಷ್ಯಾ ಶೇ.1.1 ಇದೆ. ಇದನ್ನು ಓದಿ : ವಿಮಾನಯಾನ ಕ್ಷೇತ್ರದಲ್ಲಿ ಭಾರತ ಹೊಸ ಹೆಜ್ಜೆಯನ್ನಿಡುತ್ತಿದ್ದು, ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ. ದಶಕದ ಹಿಂದೆ ಐದನೇ ಸ್ಥಾನದಲ್ಲಿದ್ದ ಭಾರತದ ದೇಶೀಯ ವಿಮಾನಯಾನ ಈಗ ಮೂರನೇ ಸ್ಥಾನಕ್ಕೆ ಏರಿದೆ. ಏಪ್ರಿಲ್ 2014 ರಲ್ಲಿ 7.9 ಮಿಲಿಯನ್ ನಿಂದ 2024 ರ ವೇಳೆಗೆ 15.5 ಮಿಲಿಯನ್. ಈ ದಶಕದಲ್ಲಿ ವಾಯುಯಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆ ದ್ವಿಗುಣಗೊಂಡಿದೆ. ಚೀನಾ ಶೇ.6.3, ಅಮೆರಿಕ ಶೇ.2.4, ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡರೆ ಭಾರತ ಮೂರನೇ ಸ್ಥಾನ, ಬ್ರೆಜಿಲ್ ನಾಲ್ಕನೇ ಸ್ಥಾನ ಹಾಗೂ ಇಂಡೋನೇಷ್ಯಾ ಐದನೇ ಸ್ಥಾನದಲ್ಲಿದೆ ಇದನ್ನು ಓದಿ : ಏಪ್ರಿಲ್ 2024 ರ ವೇಳೆಗೆ, ಭಾರತದ ದೇಶೀಯ ವಿಮಾನಯಾನ ಸಾಮರ್ಥ್ಯದ 78.4 ಪ್ರತಿಶತವನ್ನು ಕಡಿಮೆ-ವೆಚ್ಚದ ವಿಮಾನಯಾನ ಕಂಪನಿಗಳು ನಿರ್ವಹಿಸುತ್ತವೆ. ಇಂಡಿಗೋ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ದಶಕದಲ್ಲಿ ಇಂಡಿಗೋದ ಮಾರುಕಟ್ಟೆ ಪಾಲು 32 ಪ್ರತಿಶತದಿಂದ 62 ಪ್ರತಿಶತಕ್ಕೆ ದ್ವಿಗುಣಗೊಂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...