ಮೆಹಂದಿ ಫಂಕ್ಷನ್ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ದುರಂತ ಸಾವು..! ದೆಹಲಿ ಮೂಲದ ಶ್ರೇಯಾರ ಕುಟುಂಬವು ಡೆಹ್ರಾಡೂನ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಐಷಾರಾಮಿ ರೆಸಾರ್ಟ್ ಬುಕ್ ಮಾಡಿತ್ತು. ಮದುವೆಗೆ 2 ದಿನಗಳ ಮೊದಲು ಶ್ರೇಯಾ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಕುಚಿಯಾಟಲ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ಗೆ ಹೋಗಿದ್ದಳು. :ಮೆಹಂದಿ ಫಂಕ್ಷನ್​​ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ದುರಂತ ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಭವಿಷ್ಯದ ಬಗ್ಗೆ ಹಲವಾರು ಕನಸು ಕಂಡಿದ್ದ ಈ ಯುವತಿ ಹೊಸ ಬದುಕಿನ ಕನಸು ಕಾಣುತ್ತ ಸಂಭ್ರಮಿಸುತ್ತಿರುವಾಗಲೇ ಕೊನೆಯುಸಿರೆಳೆದಿದ್ದಾಳೆ. ಮೃತಳನ್ನುಮೂಲದ ಶ್ರೇಯಾ ಜೈನ್ (28) ಎಂದು ಗುರುತಿಸಲಾಗಿದೆ. ಎಂಬಿಎ ಮುಗಿಸಿರುವ ಈಕೆಯನ್ನು ಮದುವೆಯಾಗಬೇಕಿದ್ದ ವರ ಲಕ್ನೋದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿ ಸತಿ-ಪತಿಗಳಾಗಿ ಸುಂದರ ಬದುಕಿನ ಬಗ್ಗೆ ಹಲವಾರು ಕನಸುಗಳನ್ನು ಕಂಡಿತ್ತು. ಆದರೆ ವಧು ದುರಂತವಾಗಿ ಸಾವನ್ನಪ್ಪಿದ್ದು, ಎರಡೂ ಕುಟುಂಬಕ್ಕೆ ದೊಡ್ಡ ಶಾಕ್‌ ಉಂಟಾಗಿದೆ. ಇದನ್ನೂ ಓದಿ: ಅಂದಹಾಗೆ ದೆಹಲಿ ಮೂಲದ ಶ್ರೇಯಾರ ಕುಟುಂಬವು ಡೆಹ್ರಾಡೂನ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಐಷಾರಾಮಿ ರೆಸಾರ್ಟ್ ಬುಕ್ ಮಾಡಿತ್ತು. ಮದುವೆಗೆ 2 ದಿನಗಳ ಮೊದಲು ಶ್ರೇಯಾ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಕುಚಿಯಾಟಲ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ಗೆ ಹೋಗಿದ್ದಳು. ವಿವಾಹದ ಹಿನ್ನೆಲೆ ಅದ್ಧೂರಿ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಗೀತದೊಂದಿಗೆ ಮೆಹೆಂದಿ ಕಾರ್ಯಕ್ರಮ ಸಹ ಆರಂಭವಾಗಿತ್ತು. ಆದರೆ ಮೆಹಂದಿ ಸಂಭ್ರಮದ ಮಧ್ಯೆ ಡ್ಯಾನ್ಸ್ ಮಾಡುವಾಗ ವಧು ಶ್ರೇಯಾ ಇದ್ದಕ್ಕಿದ್ದಂತೆಯೇ ಕುಸಿದು ಬಿದಿದ್ದಾಳೆ. ಇದನ್ನೂ ಓದಿ: ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಯುವತಿ ಸಾವನ್ನಪ್ಪಿದ್ದಾಳೆ ಅಂತಾ ವೈದ್ಯರು ಘೋಷಿಸಿದರು. ಹೃದಯರಕ್ತನಾಳದ ತೊಂದರೆಯಿಂದ ಶ್ರೇಯಾ ಸಾವನ್ನಪ್ಪಿದ್ದಾಳೆಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.ಳ ಹಠಾತ್‌ ಸಾವಿನಿಂದ ಎರಡೂ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...