ಉತ್ತರಪ್ರದೇಶದ ಉನ್ನಾವೊದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 18 ಬಲಿ. ಮೂವರ ವಿರುದ್ಧ ಎಫ್‌ಐ‌ಆರ್ ದಾಖಲು : ಉತ್ತರ ಪ್ರದೇಶದ ಉನ್ನಾವೋದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ದುರ್ಘಟನೆಯಲ್ಲಿ 18 ಜನರು ಜೀವ ಕಳೆದುಕೊಂಡಿದ್ದಾರೆ. ಅಲ್ಲದೆ, ಹಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. :ಉತ್ತರ ಪ್ರದೇಶದ ಉನ್ನಾವೋದಲ್ಲಿ ಬುಧವಾರ (ಜುಲೈ 10) ಹಾಲಿನ ಟ್ಯಾಂಕರ್​ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 18 ಜನರು ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಮೂವರ ವಿರುದ್ಧ ಎಫ್‌ಐ‌ಆರ್ ದಾಖಲಾಗಿದೆ. ಆಗ್ರಾ-ಲಖನೌ ಎಕ್ಸ್​ಪ್ರೆಸ್​ವೇನಲ್ಲಿ ಅಪಘಾತ:(- ) ಬಿಹಾರದ ಶಿವಗಧದಿಂದ ದೆಹಲಿಗೆ ಹೋಗುತ್ತಿದ್ದ ಬಸ್(ಬಸ್‌ನ ಸಂಖ್ಯೆ ಯುಪಿ 95 ಟಿ 4729) ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಬಸ್ ಹಾಲಿನ ಕಂಟೈನರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ () ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಸಹ ಘೋಷಿಸಲಾಗಿದೆ. ಇದನ್ನೂ ಓದಿ- ಬಸ್ ಮಾಲೀಕರ ಹೆಸರಿನಲ್ಲಿ ಒಟ್ಟು 39 ಬಸ್‌ಗಳು:ಪೊಲೀಸರ ತನಿಕೆ ವೇಳೆ,( ) ಬಸ್‌ನ ಮಾಲೀಕರ ಪುಷ್ಪೇಂದ್ರ ಎಂಬುವವರ ಹೆಸರಿನಲ್ಲಿ ಬರೋಬ್ಬರಿ 39 ಬಸ್‌ಗಳು ನೋಂದಣಿಯಾಗಿರುವುದು ಕಂಡುಬಂದಿದೆ. ವಿಪರ್ಯಾಸವೆಂದರೆ ಈ ಎಲ್ಲಾ ಬಸ್‌ಗಳು ವರ್ಷಗಳಿಂದ ಯಾವುದೇ ಪರವಾನಗಿ ಇಲ್ಲದೇ ಸಂಚರಿಸುತ್ತಿವೆ ಎಂಬುದು ಆಘಾತಕಾರಿಯಾಗಿದೆ. ಇದನ್ನೂ ಓದಿ- ಅಪಘಾತದ ಬಳಿಕ ಟ್ರಾವೆಲ್ ಏಜೆನ್ಸಿಯ ಮಾಲೀಕ-ಗುತ್ತಿಗೆದಾರರ ವಿರುದ್ಧವೂ ಪ್ರಕರಣವನ್ನು ದಾಖಲಿಸಲಾಗಿದೆ. ಇದಲ್ಲದೆ, ಉತ್ತರ ಪ್ರದೇಶದ ಮಹೋಬಾದಿಂದ ದೆಹಲಿ ಮತ್ತು ಬಿಹಾರದವರೆಗೆ ಬಸ್ ಮಾಫಿಯಾಗಳು ಸಿಂಡಿಕೇಟ್ ರಚಿಸಿಕೊಂಡು ಪರ್ಮಿಟ್ ಇಲ್ಲದೇ ರಸ್ತೆಗಳಲ್ಲಿ ಇಂತಹ ಬಸ್ಸುಗಳನ್ನು ಓಡಿಸುತ್ತಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...