ಶಕ್ತಿಪೀಠ ಉಜ್ಜಯಿನಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ..! ವಿಡಿಯೋ ವೈರಲ್‌ : ಪುಣ್ಯ ಕ್ಷೇತ್ರವಾದ ಉಜ್ಜೈನಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಅಲ್ಲದೆ, ಕಣ್ಣೆದುರೇ ಅಬಲೆಯ ಮೇಲೆ ಅತ್ಯಾಚಾರವಾಗುತ್ತಿದ್ದರೂ ಸುಮ್ಮನಿದ್ದೇಯಾ ಶಿವ.. ಅಂತ ನೆಟ್ಟಿಗರು ಅಸಮಾಧಾನ ಹೊರ ಹಾಕುತ್ತಿದ್ದಾರೆ.. : ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಷ್ಟೇ ಕಾನೂನು ತಂದರೂ ಅಬಲೆಯರ ಮೇಲಿನ ಹಲ್ಲೆಗಳು ನಿಲ್ಲುತ್ತಿಲ್ಲ. ಕೋಲ್ಕತ್ತಾ ಘಟನೆ.. ಒಂದೆಡೆ ದೇಶದಲ್ಲಿ ನಡುಕ ಹುಟ್ಟಿಸುತ್ತದೆ. ಮತ್ತೊಂದೆಡೆ, ಅತ್ಯಾಚಾರ ನಿಂತಿಲ್ಲ. ಆಸ್ಪತ್ರೆಯಲ್ಲಿ ದಾದಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅದಲ್ಲದೆ.. ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಯುವತಿಗೂ ಕಿರುಕುಳ ನೀಡಲಾಗಿತ್ತು. ನಿರ್ಭಯ, ಅಭಯ, ಪೋಕ್ಸೋ ಮುಂತಾದ ಹಲವು ಕಾನೂನುಗಳನ್ನು ತಂದರೂ ತಾಯಿ, ಅಕ್ಕ, ತಂಗಿಯರವ ಮೇಲೆ ದಾಳಿಗಳು ಮುಂದುವರೆಯುತ್ತಲೇ ಇವೆ. ಇದನ್ನೂ ಓದಿ: ಯುವತಿಯರು ಮತ್ತು ಬಾಲಕಿಯರ ಮೇಲಿನ ದಾಳಿ ಪ್ರತಿದಿನವೂ ನಡೆಯುತ್ತಲೇ ಇದೆ. ಕಾಮಾಂದರು.. ಮಗುವಿನಿಂದ ಹಿಡಿದು ವೃದ್ಧೆಯವರೆಗೆ ಯಾರನ್ನೂ ಬಿಡುತ್ತಿಲ್ಲ. ಅಷ್ಟೇ ಅಲ್ಲ ರಕ್ಷಣೆ ಮಾಡಬೇಕಾದ ತಂದೆ, ಸಹೋದರರೇ ಅತ್ಯಾಚಾರ ಎಸಗುತ್ತಿದ್ದಾರೆ. ಸಧ್ಯ ಉಜ್ಜಯಿನಿಯ ಫುಟ್‌ಪಾತ್ ಮೇಲೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಣ್ಯ ಕ್ಷೇತ್ರವಾದ ಉಜ್ಜಯಿನಿಯಲ್ಲಿ ದುಷ್ಕೃತ್ಯ ನಡೆದಿದೆ. ರಸ್ತೆಯ ಬದಿಯಲ್ಲಿ ಮಹಿಳೆಯನ್ನು ಹಿಂಬಾಲಿಸಿದ ಕಾಮಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನನಿಬಿಡ ರಸ್ತೆ ಕೊಯಿಲ ಫಾಟಕ್ ಏರಿಯಾದಲ್ಲಿ ಈ ಘಟನೆ ನಡೆದಿದೆ... ಇದನ್ನೂ ಓದಿ: ಮಹಿಳೆಯನ್ನು ಬಲವಂತವಾಗಿ ರಸ್ತೆ ಬದಿಗೆ ಎಳೆದೊಯ್ದು ಮದ್ಯ ಸೇವಿಸಿ ಅತ್ಯಾಚಾರವೆಸಗಿದ್ದಾನೆ. ವಿಪರ್ಯಾಸ ಅಂದ್ರೆ, ಅಲ್ಲಿದ್ದವರು.. ವಿಡಿಯೋ ತೆಗೆಯುತ್ತಿದ್ದರು.. ಯಾರೂ ತಡೆಯುವ ಪ್ರಯತ್ನ ಮಾಡಲಿಲ್ಲ. ಈ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ಕಾಮುಕನಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...