ಹಿಮಾಚಲ ಪ್ರದೇಶದಲ್ಲಿ ವರುಣಾರ್ಭಟ: ಸಮೇಜ್ ಸೇತುವೆ ಬಳಿ ಮೇಘಸ್ಫೋಟದಿಂದ 13 ಮಂದಿ ಸಾವು : ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ವಿಳಂಬವಾಗದಂತೆ ತಡೆಯಲು ಈ ವರ್ಷ ಹಿಮಾಚಲ ಪ್ರದೇಶಕ್ಕೆ ಸುಸಜ್ಜಿತ ಎನ್‌ಡಿ‌ಆರ್‌ಎಫ್ ತಂಡವನ್ನು ಸಿದ್ದಪರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 14 ನೇ ಬೆಟಾಲಿಯನ್ ಕಮಾಂಡೆಂಟ್ ಬಲ್ಜಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ. :ಹಿಮಾಚಲ ಪ್ರದೇಶದ ಶ್ರೀಖಂಡ್ ಬಳಿ ಬುಧವಾರ (ಆಗಸ್ಟ್ 07) ರಾತ್ರಿ ಸಮೇಜ್ ಮತ್ತು ಬಾಗಿ ಸೇತುವೆಗಳ ಬಳಿ ಮೇಘಸ್ಫೋಟ ( ) ಸಂಭವಿಸಿದ್ದು ಈ ದುರಂತ ಘಟನೆಯಲ್ಲಿ ಸುಮಾರು 45 ಜನರು ಕೊಚ್ಚಿ ಹೋಗಿದ್ದಾರೆ. () ಸಂಭವಿಸಿದ ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡದಿಂದ ( ) ರಕ್ಷಣಾ ಕಾರ್ಯ ಮುಂದುವರೆದಿದ್ದು ಇದುವರೆಗೂ 13 ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದು ವರದಿಯಾಗಿದೆ. ಯಲ್ಲಿ ( ) ಯಾವುದೇ ವಿಳಂಬವಾಗದಂತೆ ತಡೆಯಲು ಈ ವರ್ಷ ಹಿಮಾಚಲ ಪ್ರದೇಶಕ್ಕೆ ಸುಸಜ್ಜಿತ ಎನ್‌ಡಿ‌ಆರ್‌ಎಫ್ ತಂಡವನ್ನು ಸಿದ್ದಪರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 14 ನೇ ಬೆಟಾಲಿಯನ್ ಕಮಾಂಡೆಂಟ್ ಬಲ್ಜಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- ಹಿಮಾಚಲ ಪ್ರದೇಶದಲ್ಲಿ ( ) ಸಂಭವಿಸಿರುವ ಮೇಘಸ್ಫೋಟಕ್ಕೆ ಸಂಬಂಧಿಸಿದಂತೆ, ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಬಲ್ಜಿಂದರ್ ಸಿಂಗ್, "ಸಮೇಜ್ ಮೇಘಸ್ಫೋಟವು ದೊಡ್ಡ ದುರಂತವಾಗಿದೆ. ಈ ವರ್ಷ, ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ಎನ್‌ಡಿಆರ್‌ಎಫ್ ತಂಡಗಳನ್ನು ಹಿಮಾಚಲ ಪ್ರದೇಶದ ದೂರದ ಸ್ಥಳಗಳಿಗೆ ನಿಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ. ಇದೇ ವೇಳೆ, ದುರಂತ ಸ್ಥಳದಲ್ಲಿ ಗುರುವಾರ ಮುಂಜಾನೆವರೆಗೆ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೊದಲಿಗೆ ನಾಲ್ಕು ಶವಗಳನ್ನು ಹೊರತೆಗೆಯಲಾಗಿತ್ತು. ಇನ್ನೂ ಹತ್ತು ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 9 ಮೃತದೇಹಗಳು ಪತ್ತೆಯಾಗಿವೆ. ಆದಾಗ್ಯೂ, ಇನ್ನೋರ್ವ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ- ರಾಜ್ಯಾದ್ಯಂತ ರೆಡ್ ಅಲರ್ಟ್:ಗಮನಾರ್ಹವಾಗಿ, ಮೇಘಸ್ಫೋಟ ಸಂಭವಿಸುವ ಮೊದಲು ಆಗಸ್ಟ್ 07ರಂದು ಮಳೆ ಮುನ್ಸೂಚನೆ ನೀಡಿದ್ದ ಭಾರತೀಯ ಹವಾಮಾನ ಇಲಾಖೆ, ಮಂಡಿ ಜಿಲ್ಲೆಯ ಜೋಗಿಂದರ್ ನಗರದಲ್ಲಿ 24 ಗಂಟೆಗಳಲ್ಲಿ ಗರಿಷ್ಠ 110 ಮಿಮೀ ಮಳೆಯಾಗಿದೆ. ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಂಭವವಿದೆ ಎಂದು ಭವಿಷ್ಯ ನುಡಿದಿತ್ತು. ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಕೂಡ ಘೋಷಿಸಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...