: ವಿಶ್ವದ ಶ್ರೇಷ್ಠ ಓಟಗಾರನೆಂಬ ಖ್ಯಾತಿಯನ್ನು ಯಾರು ಹೊಂದಿದ್ದಾರೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗಿದೆ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಪುರಾತನ ಒಲಿಂಪಿಕ್ ಕ್ರೀಡಾಕೂಟವು ಯಾವ ದೇಶದಲ್ಲಿ ಹುಟ್ಟಿಕೊಂಡಿತು? ಉತ್ತರ: ಗ್ರೀಸ್ ಪ್ರಶ್ನೆ 2:ಆಧುನಿಕ ಒಲಿಂಪಿಕ್ ಕ್ರೀಡಾಕೂಟದ ಪಿತಾಮಹ ಎಂದು ಯಾರನ್ನು ಪರಿಗಣಿಸಲಾಗುತ್ತದೆ? ಉತ್ತರ: ಪಿಯರೆ ಡಿ ಕೂಬರ್ಟಿನ್ ಪ್ರಶ್ನೆ 3:ಒಲಿಂಪಿಕ್ ಧ್ವಜದ ಐದು ಉಂಗುರಗಳು ಏನನ್ನು ಪ್ರತಿನಿಧಿಸುತ್ತವೆ? ಉತ್ತರ: ಐದು ಖಂಡಗಳು ಪ್ರಶ್ನೆ 4:ಯಾವ ದೇಶವು ಹೆಚ್ಚು ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಿದೆ? ಉತ್ತರ: ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಪ್ರಶ್ನೆ 5:ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ಯಾವ ವರ್ಷದಲ್ಲಿ ನಡೆಸಲಾಯಿತು? ಉತ್ತರ: 1896 ಇದನ್ನೂ ಓದಿ: ಪ್ರಶ್ನೆ 6:2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಯಾವ ದೇಶವು ಹೆಚ್ಚು ಪದಕಗಳನ್ನು ಗೆದ್ದಿತ್ತು? ಉತ್ತರ: ಯುನೈಟೆಡ್ ಸ್ಟೇಟ್ಸ್ ಆಫ್‌ ಅಮೆರಿಕ ಪ್ರಶ್ನೆ 7:ಒಲಿಂಪಿಕ್ಸ್‌ ಇತಿಹಾಸದಲ್ಲಿ ಅತಿಹೆಚ್ಚು ಪದಕ ಗೆದ್ದ ಕ್ರೀಡಾಪಟು ಯಾರು? ಉತ್ತರ: ಅಮೆರಿಕದ ಈಜುಗಾರ ಮೈಕೆಲ್ ಫೆಲ್ಪ್ಸ್ ಪ್ರಶ್ನೆ 8:2016ರ ಬೇಸಿಗೆ ಒಲಿಂಪಿಕ್ಸ್ ಅನ್ನು ಯಾವ ನಗರ ಆಯೋಜಿಸಲಾಗಿತ್ತು? ಉತ್ತರ: ರಿಯೊ ಡಿ ಜನೈರೊ ಪ್ರಶ್ನೆ 9:ವಿಶ್ವದ ಶ್ರೇಷ್ಠ ಓಟಗಾರನೆಂಬ ಖ್ಯಾತಿಯನ್ನು ಯಾರು ಹೊಂದಿದ್ದಾರೆ? ಉತ್ತರ: ಉಸೇನ್ ಬೋಲ್ಟ್ ಪ್ರಶ್ನೆ 10:ಪ್ರಸ್ತುತ ನಡೆಯುತ್ತಿರುವ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಎಷ್ಟು ಪದಕಗಳನ್ನು ಗೆದ್ದಿದೆ? ಉತ್ತರ: ಇದುವರೆಗೂ ಮೂರು ಕಂಚಿನ ಪದಗಳನ್ನು ಗೆದ್ದಿದೆ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...