ಆ ಸುದ್ದಿ ಸುಳ್ಳು.. ನಂಬಬೇಡಿ.. ತಿರುಮಲ ಭಕ್ತರಿಗೆ ಟಿಟಿಡಿ ಮನವಿ..! : ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನಕ್ಕೆ ನಿತ್ಯ ಅನೇಕ ಭಕ್ತರು ಭೇಟಿ ನೀಡುತ್ತಾರೆ. ಟಿಟಿಡಿ ಕೂಡ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ.. ವೆಂಕಟೇಶನ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.. ಈ ನಿಟ್ಟಿನಲ್ಲಿ ಇದೀಗ ಸುಳ್ಳು ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದನ್ನ ನಂಬಬೇಡಿ ಅಂತ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.. :ಸಾಮಾಜಿಕ ಮಾಧ್ಯಮಗಳಲ್ಲಿ ವಯೋವೃದ್ಧರ ದರ್ಶನಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಯೊಂದು ಪ್ರಚಾರ ಪಡೆಯುತ್ತಿದ್ದು, ಇದನ್ನು ನಂಬಬೇಡಿ ಎಂದು ಟಿಟಿಡಿ ಆಡಳಿತ ಮಂಡಳಿ ಹೇಳಿಕೆ ನೀಡಿದೆ. ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ಘೋಷಣೆ ಮಾಡಿದ್ದರೂ ಸಹ ಮತ್ತೊಮ್ಮೆ ಟಿಟಿಡಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಕುರಿತು ಮಾಹಿತಿ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಿರುಮಲ ದರ್ಶನದ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.. ಇವುಗಳನ್ನು ಯಾವುದೇ ಕಾರಣಕ್ಕು ನಂಬಬೇಡಿ. ವಿಶೇಷವಾಗಿ ವಯೋವೃದ್ಧರಿಗೆ ವಿಶೇಷ ದರ್ಶನ ನೀಡುವ ಸುದ್ದಿಗಳನ್ನು ನಂಬಬಾರದು ಎಂದು ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ:ಪ್ರತಿ ತಿಂಗಳ 23 ರಂದು ಮೂರು ತಿಂಗಳ ಮುಂಚಿತವಾಗಿ ವೃದ್ಧರು ಮತ್ತು ಅಂಗವಿಕಲರಿಗೆ ಒಂದು ಸಾವಿರ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಮೇಲಾಗಿ ಈ ಆನ್‌ಲೈನ್ ಟಿಕೆಟ್ ದರ್ಶನದ ಜೊತೆಗೆ ಎಲ್ಲರಿಗೂ ರೂ. 50 ಉಚಿತ ಲಡ್ಡೂಗಳನ್ನು ಸಹ ನೀಡಲಾಗುವುದು. ತಿರುಮಲ ತಿರುಪತಿ ದೇವಸ್ಥಾನಕ್ಕೆ ಬರುವ ಹಿರಿಯ ನಾಗರಿಕ/ ಲೈನ್ ಮೂಲಕ ಭೇಟಿ ನೀಡಲು ಅವರಿಗೆ ವಿಶೇಷವಾಗಿ ಅವಕಾಶ ನೀಡಲಾಗುತ್ತದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಭಕ್ತರು ಯಾವುದೇ ಮಾಹಿತಿಗಾಗಿ ಟಿಟಿಡಿಯ ಅಧಿಕೃತ ವೆಬ್‌ಸೈಟ್, ://.. ಅನ್ನು ಸಂಪರ್ಕಿಸುವಂತೆ ಟಿಟಿಡಿ ಆಡಳಿತವು ವಿನಂತಿಸಿದೆ ಮತ್ತು ವಯೋವೃದ್ಧರ ದರ್ಶನದ ಬಗ್ಗೆ ಸುಳ್ಳು ಪ್ರಚಾರಗಳನ್ನು ನಂಬಬೇಡಿ ಎಂದು ಮನವಿ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...