ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕನಂತೆ! ಲಕ್ಷ ಅಲ್ಲ... 7.5 ಕೋಟಿ ಆಸ್ತಿ ಹೊಂದಿರುವ ಈ ಹೈಫೈ ಬೆಗ್ಗರ್‌ ಭಾರತದವನೇ... : ಮಿಲಿಯನೇರ್ ಭಿಕ್ಷುಕ ಭರತ್ ಜೈನ್. ಈತ ಮುಂಬೈನಲ್ಲಿ ವಾಸಿಸುತ್ತಾನೆ. ವಿಶ್ವದ ಈ ಶ್ರೀಮಂತ ಭಿಕ್ಷುಕ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡುತ್ತಾನೆ. :ಮಧ್ಯಪ್ರದೇಶದ ಇಂದೋರ್‌ʼನ ಲವಕುಶ್ ಛೇದಕ್‌ ಎಂಬಲ್ಲಿ ಓರ್ವ ಮಹಿಳೆ ತನ್ನ ಮಗಳೊಂದಿಗೆ ಪ್ರತಿದಿನ ಭಿಕ್ಷೆ ಬೇಡುತ್ತಾ ದಿನಕ್ಕೆ 5,500 ರೂ. ಸಂಪಾದಿಸುತ್ತಾಳಂತೆ. ಕೇವಲ 45 ದಿನಗಳಲ್ಲಿ ಆಕೆಯ ಬ್ಯಾಂಕ್ ಖಾತೆಗೆ 2.50 ಲಕ್ಷ ರೂಪಾಯಿ ಜಮಾ ಆಗಿದೆ. ಈ ಸುದ್ದಿ ಕೇಳಿ ಜನಸಾಮಾನ್ಯರು ಬೆಚ್ಚಿಬಿದ್ದಿದ್ದಾರೆ. ಇಂದೋರ್‌ʼನ ಈ ಮಹಿಳೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸಂಪಾದಿಸುವ ಭಿಕ್ಷುಕಿ ಮಾತ್ರವಲ್ಲ, ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕರಲ್ಲಿ ಒಬ್ಬಾಕೆ ಎಂದು ಹೆಸರಿಸಲ್ಪಟ್ಟಿದ್ದಾಳೆ. ಇದನ್ನೂ ಓದಿ: ಮತ್ತೋರ್ವ ಮಿಲಿಯನೇರ್ ಭಿಕ್ಷುಕ ಭರತ್ ಜೈನ್. ಈತ ಮುಂಬೈನಲ್ಲಿ ವಾಸಿಸುತ್ತಾನೆ. ವಿಶ್ವದ ಈ ಶ್ರೀಮಂತ ಭಿಕ್ಷುಕ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನದಲ್ಲಿ ಭಿಕ್ಷೆ ಬೇಡುತ್ತಾನೆ. ಅಂದಹಾಗೆ, ಭರತ್ ಜೈನ್ ಮುಂಬೈ ಮತ್ತು ಪುಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮನೆಗಳ ಜೊತೆಗೆ ಅಂಗಡಿಗಳನ್ನು ಕೂಡ ಹೊಂದಿದ್ದಾನೆ. ಅಷ್ಟೇ ಅಲ್ಲ ಭರತ್‌ ಅವರ ಮಕ್ಕಳು ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದಾರೆ. ಮುಂಬೈನಲ್ಲಿ 1.20 ಕೋಟಿ ಮೌಲ್ಯದ ಫ್ಲಾಟ್‌ʼನಲ್ಲಿ ವಾಸಿಸುತ್ತಿರುವ ಈತ, ಭಿಕ್ಷೆ ಬೇಡುವ ಮೂಲಕವೇ ಕೋಟ್ಯಂತರ ರೂಪಾಯಿ ಸಂಪತ್ತು ಕೂಡಿಟ್ಟಿದ್ದಾರೆ. ಭರತ್ ಅವರ ಕುಟುಂಬ‌ ಭಿಕ್ಷೆ ಬೇಡುವುದನ್ನು ನಿಲ್ಲಿಸೆಂದು ಅನೇಕ ಬಾರಿ ಹೇಳಿತ್ತಾದರೂ, ಇವರು ಭಿಕ್ಷೆ ಬೇಡುವುದನ್ನು ಮುಂದುವರೆಸಿದ್ದಾರೆ. ಇನ್ನು ಭರತ್ ಜೈನ್ ಭಿಕ್ಷಾಟನೆಯಿಂದ ಪ್ರತಿ ತಿಂಗಳಿಗೆ 75 ಸಾವಿರ ರೂ.ವರೆಗೆ ಗಳಿಸುತ್ತಾರಂತೆ. ಅಂದರೆ ಅವರ ಸರಾಸರಿ ದೈನಂದಿನ ಆದಾಯ 2,500 ರೂ. ವಾರ್ಷಿಕ ಆದಾಯ 9 ಲಕ್ಷ ರೂ. ಕ್ಕೂ ಹೆಚ್ಚು. ಇದನ್ನೂ ಓದಿ: ಒಂದು ಅಂದಾಜಿನ ಪ್ರಕಾರ, ಭರತ್ ಜೈನ್ ಅವರ ನಿವ್ವಳ ಮೌಲ್ಯ 10 ಲಕ್ಷ ಡಾಲರ್‌ʼಗಳಿಗಿಂತ ಹೆಚ್ಚು ಅಂದರೆ 8.50 ಕೋಟಿ ರೂ. ಭಿಕ್ಷಾಟನೆಯಿಂದ ಬರುವ ಆದಾಯದ ಹೊರತಾಗಿ, ಆತ ಇತರ ವ್ಯವಹಾರದಿಂದ ಆದಾಯ ಗಳಿಸುತ್ತಾನೆ. ಪ್ರತಿ ತಿಂಗಳು 50,000 ರೂ.ವರೆಗೆ ಬಾಡಿಗೆ ಪಡೆಯುವ ಮನೆ, ಸಣ್ಣ ಅಂಗಡಿಗಳನ್ನೂ ಕೂಡ ಭರತ್‌ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...