ಇದುವೇ ನೋಡಿ ವಿಶ್ವದ ಅತ್ಯಂತ ಸುಂದರವಾದ ಆನೆ...! ಇದರ ಹೇರ್‌ ಸ್ಟೈಲ್‌ʼಗೆ ಇದ್ದಾರೆ ಲಕ್ಷ ಲಕ್ಷ ಫ್ಯಾನ್ಸ್ - : ತಮಿಳುನಾಡಿನ ಆನೆಯೊಂದು ತನ್ನ ಡಿಫರೆಂಟ್‌ ಹೇರ್‌ ಸ್ಟೈಲ್‌ʼನಿಂದಲೇ ಸುದ್ದಿಯಾಗುತ್ತಿರುವುದು ನಿಮಗೆ ತಿಳಿದಿದೆಯೇ? ಈ ಆನೆಯನ್ನು ವಿಶ್ವದ ಅತ್ಯಂತ ಸುಂದರ ಆನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. - :ತಮಿಳುನಾಡಿನ ಆನೆಯೊಂದು ತನ್ನ ಡಿಫರೆಂಟ್‌ ಹೇರ್‌ ಸ್ಟೈಲ್‌ʼನಿಂದಲೇ ಸುದ್ದಿಯಾಗುತ್ತಿರುವುದು ನಿಮಗೆ ತಿಳಿದಿದೆಯೇ? ಈ ಆನೆಯನ್ನು ವಿಶ್ವದ ಅತ್ಯಂತ ಸುಂದರ ಆನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದನ್ನೂ ಓದಿ: ಈ ಆನೆ ಹೆಸರು ಬಾಬ್‌ ಕಟ್‌ ಸೆಂಗಮಲಂ. ಮನ್ನಾರ್ಗುಡಿ ಪಟ್ಟಣದ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿರುವ ಈ ಆನೆಯ ಬಾಬ್ ಕಟ್ ಹೇರ್‌ ಸ್ಟೈಲ್ʼಗೆ ದೇಶಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ. "ಬಾಬ್-ಕಟ್ ಸೆಂಗಮಲಂ" ಎಂದು ಕರೆಯಲ್ಪಡುವ ಆನೆಯ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ತವೆ. ಮನ್ನಾಯ್ ಆನ್‌ಲೈನ್‌ ಪ್ರಕಾರ, 2003 ರಲ್ಲಿ ಕೇರಳದಿಂದ ರಾಜಗೋಪಾಲಸ್ವಾಮಿ ದೇವಸ್ಥಾನಕ್ಕೆ ಸೆಂಗಮಲಮ್ ಆನೆಯನ್ನು ಕರೆತರಲಾಯಿತು. ಇನ್ನು ಈ ಆನೆಯ ಹೇರ್‌ ಸ್ಟೈಲ್‌ ನೋಡಿಕೊಳ್ಳುವುದು ಮಾವುತ ಎಸ್ ರಾಜಗೋಪಾಲ್. ಈ ಹೇರ್‌ ಸ್ಟೈಲ್‌ʼಗೆ ಸಾಕಷ್ಟು ನಿರ್ವಹಣೆ ಮತ್ತು ಕಾಳಜಿಯ ಅಗತ್ಯವಿದೆ ಎಂದು ಮಾವುತ ಹೇಳುತ್ತರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. "- " . , , . . — 🇮🇳 (@) ಇದನ್ನೂ ಓದಿ: ಮಾವುತ ರಾಜಗೋಪಾಲ್ ಹೇಳುವಂತೆ, "ಸೆಂಗಮಲಂ ನನ್ನ ಮಗುವಿನಂತೆ. ಆಕೆ ಇತರ ಆನೆಗಳಿಗಿಂತ ವಿಶೇಷವಾಗಿ ಕಾಣಬೇಕೆಂಬುದು ನನ್ನ ಆಸೆ. ಒಂದೊಮ್ಮೆ ನಾನು ಇಂಟರ್ನೆಟ್‌ʼನಲ್ಲಿ ವಿಡಿಯೋ ನೋಡುವಾಗ ಬಾಬ್‌ ಕಟ್‌ ಮಾಡಿರುವ ಆನೆಯನ್ನು ನೋಡಿದೆ. ಅದಾದ ನಂತರ ಸೆಂಗಮಲಂಗೆ ಕೂಡ ಕೂದಲು ಬೆಳೆಸಿ, ಆ ರೀತಿ ಹೇರ್‌ ಕಟ್‌ ಮಾಡಿಸಿದೆ" 2018 ರಲ್ಲಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...