ರಾಹುಲ್‌ ಗಾಂಧಿ ಜೊತೆ ಡೇಟಿಂಗ್‌ ಮಾಡುವ ಮನಸ್ಸಾಗಿದೆ: ನಟಿ ಕರೀನಾ ಕಪೂರ್‌ ಸೆನ್ಸೇಷನಲ್‌ ಹೇಳಿಕೆ : ರಾಹುಲ್ ಗಾಂಧಿಯೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಿದ್ದೇನೆ ಎಂಬ ಆಕೆಯ ಹೇಳಿಕೆ ವೈರಲ್ ಆಗಿದೆ. ಸಾಮಾನ್ಯವಾಗಿ ನಾಯಕಿಯರು ಸ್ಟಾರ್ ಹೀರೋಗಳೊಂದಿಗೆ ಡೇಟ್ ಮಾಡಲು ಬಯಸುತ್ತಾರೆ. ಆದರೆ ಕರೀನಾ ಕಪೂರ್ ವಿಭಿನ್ನವಾಗಿ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. : ಬಾಲಿವುಡ್ ಬ್ಯೂಟಿ ಕರೀನಾ ಕಪೂರ್... ಒಂದು ಕಾಲದಲ್ಲಿ ಬಾಲಿವುಡ್ ಸ್ಟಾರ್ ಹೀರೋಯಿನ್ ಆಗಿ ಆಳಿದವರು. ಸೈಫ್ ಅಲಿಖಾನ್‌ ಜೊತೆ ಮದುವೆಯಾದ ಕರೀನಾ ಆ ಸಮಯದಲ್ಲಿ ಹಾಟ್ ಟಾಪಿಕ್ ಆಗಿದ್ದರು. ಇನ್ನು ಇತ್ತೀಚೆಗೆ ಕರೀನಾ ಕಪೂರ್ʼಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಟಿ ನೀಡಿರುವ ಹೇಳಿಕೆ ಈಗ ಸದ್ದು ಮಾಡುತ್ತಿದೆ. ಇದನ್ನೂ ಓದಿ: ರಾಹುಲ್ ಗಾಂಧಿಯೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಿದ್ದೇನೆ ಎಂಬ ಆಕೆಯ ಹೇಳಿಕೆ ವೈರಲ್ ಆಗಿದೆ. ಸಾಮಾನ್ಯವಾಗಿ ನಾಯಕಿಯರು ಸ್ಟಾರ್ ಹೀರೋಗಳೊಂದಿಗೆ ಡೇಟ್ ಮಾಡಲು ಬಯಸುತ್ತಾರೆ. ಆದರೆ ಕರೀನಾ ಕಪೂರ್ ವಿಭಿನ್ನವಾಗಿ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಡೇಟಿಂಗ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದು ಇತ್ತೀಚಿನ ಸಂದರ್ಶನವಲ್ಲ. ‘ಜಬ್ ವಿ ಮೆಟ್’ ಸಿನಿಮಾದ ಪ್ರಚಾರದ ವೇಳೆ ಆಕೆ ನೀಡಿದ ಹೇಳಿಕೆ. ಆ ಸಂದರ್ಭದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆ ವಿಡಿಯೋ ಮತ್ತೆ ವೈರಲ್ ಆಗಿದೆ. ಕರೀನಾ ಕಪೂರ್ 'ಜಬ್ ವಿ ಮೆಟ್' ಸಿನಿಮಾದ ಪ್ರಚಾರದಲ್ಲಿ ಭಾಗವಹಿಸಿದ್ದರು. ಸಿಮಿ ಆಯೋಜಿಸಿದ್ದ ಟಾಕ್ ಶೋನಲ್ಲಿ ಮಾತನಾಡಿದ್ದ ಕರೀನಾ ಯಾರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ, ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸಿದ್ದರು. ರಾಹುಲ್ ಗಾಂಧಿ ಹೆಸರು ಹೇಳಿದಾಗ ಕರೀನಾ ಕೊಂಚ ಗೊಂದಲಕ್ಕೆ ಒಳಗಾಗಿದ್ದರು. ಇದನ್ನೂ ಓದಿ: "ಅವರ ಹೆಸರನ್ನು ಹೇಳಿದರೆ ವಿವಾದವಾಗುತ್ತದೆಯೇನೋ... ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡಲು ಬಯಸುತ್ತೇನೆ" ಎಂದು ಹೇಳಿಕೆ ನೀಡಿದ್ದರು. ಈ ವಿಡಿಯೋ ಈಗ ಮತ್ತೊಮ್ಮೆ ವೈರಲ್ ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...