: ಮದುವೆಯಾದವರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ 2.50 ಲಕ್ಷ ರೂ. : ದಲಿತರನ್ನು ಒಳಗೊಂಡ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ʼಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ 2024ʼ ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ನೂತನವಾಗಿ ಅಂತರ್ಜಾತೀಯ ವಿವಾಹವಾಗುವ ಜೋಡಿಗೆ 2.50 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. :ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರವು ಗುಡ್‌ ನ್ಯೂಸ್‌ ನೀಡಿದೆ. ನೂತನ ದಂಪತಿಗೆ 2.50 ಲಕ್ಷ ರೂ. ವಿವಾಹ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಯೋಜನೆ ಯಾವುದು? ಈ ಯೋಜನೆಯ ಲಾಭ ಪಡೆಯಲು ಯಾವ ಅರ್ಹತೆ ಇರಬೇಕು ಮುಂತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ಡಾ.ಅಂಬೇಡ್ಕರ್ ಫೌಂಡೇಶನ್ ಮದುವೆ ಯೋಜನೆ 2024 ದಲಿತರನ್ನು ಒಳಗೊಂಡಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ʼಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ 2024ʼ ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ನೂತನವಾಗಿ ಅಂತರ್ಜಾತೀಯ ವಿವಾಹವಾಗುವ ಜೋಡಿಗೆ 2.50 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಂದರೆ ಮದುವೆಯಾಗುವ ಜೋಡಿಯ ಪೈಕಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದಲಿತರಾಗಿರಬೇಕು. ಅಂದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದನ್ನೂ ಓದಿ: ಇದಲ್ಲದೆಗಳ ವಾರ್ಷಿಕ ಆದಾಯ 5 ಲಕ್ಷ ರೂ.ಕ್ಕಿಂತಲೂ ಕಡಿಮೆ ಇರಬೇಕು. ಇದರಲ್ಲಿ ಅರ್ಹ ದಂಪತಿಗಳು ತಮ್ಮ ಇಬ್ಬರ ಹೆಸರಿಗೂ ಮೊದಲು ಟಿಟಿಯಾಗಿ 1.25 ಲಕ್ಷ ರೂ. ಪಡೆಯುತ್ತಾರೆ. ಉಳಿದ ಮೊತ್ತ 1.25 ಲಕ್ಷ ರೂ.ವನ್ನು 5 ವರ್ಷಗಳ ನಂತರ ಸಿಗುತ್ತದೆ. ನೀವು ಸಹ ಹೊಸದಾಗಿ ಮದುವೆಯಾಗಿ ಈ ಅರ್ಹತೆಗಳನ್ನು ಹೊಂದಿದ್ದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...