ಈ 3 ಗಣೇಶ ದೇವಾಲಯಗಳಿವೆ ಭೇಟಿ ನೀಡಿದರೆ 100% ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ..! 2024 : ಗಣೇಶ ಚತುರ್ಥಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಇಂದು ನಾಡಿನ ಮನೆ ಮನೆಗಳಲ್ಲಿ ವಿಘ್ನವಿನಾಶಕನ ಪೂಜೆ ನಡೆಯುತ್ತಿದೆ.. ಇದೇ ವೇಳೆ ನಾವು ನಿಮಗೆ ಭಾರತದ 3 ಪ್ರಸಿದ್ಧ ಗಣೇಶ ದೇವಾಲಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಈ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿಕೊಂಡರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.. ಹೆಚ್ಚಿನ ಮಾಹಿತಿ ಈ ಕೆಳಗಿದೆ.. :ಇಂದು ಗಣೇಶ ಚತುರ್ಥಿ, ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಗಣೇಶೋತ್ಸವವು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. 10 ದಿನಗಳ ಕಾಲ ನಡೆಯುವ ಈ ಹಬ್ಬವನ್ನು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಪ್ರತಿ ರಾಜ್ಯದಲ್ಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 17ರವರೆಗೆ ಗಣೇಶ ಉತ್ಸವ ನಡೆಯಲಿದೆ. ಇಂತಹ ಸುಸಂದರ್ಭ ನಾವು ನಿಮಗೆ ಭಾರತದ 3 ಫವರ್‌ ಫುಲ್‌ ಗಣಪತಿ ದೇವಾಲಯಗಳ ಬಗ್ಗೆ ಮಾಹಿತಿ ನೀಡಲಿದ್ದೆವೆ.. ದೇಶದಲ್ಲಿರುವ ಈ ಮೂರು ದೇವಾಲಯಗಳು ಗಣೇಶನಿಗೆ ಸಮರ್ಪಿತವಾಗಿವೆ. ಇಲ್ಲಿಗೆ ಭೇಟಿ ನೀಡಿ, ಪೂಜಿಸುವ ಯಾವುದೇ ಭಕ್ತರು ಬರಿಗೈಯಲ್ಲಿ ಹಿಂತಿರುಗುವುದಿಲ್ಲ. ಈ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತನ ಇಷ್ಟಾರ್ಥಗಳು ಈಡೇರುತ್ತವೆ. ಭಾರತದ ಈ ಮೂರು ದೇವಾಲಯಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿವೆ. ಸಿದ್ಧಿವಿನಾಯಕ ದೇವಸ್ಥಾನ :ಸಿದ್ಧಿವಿನಾಯಕ ದೇವಾಲಯವು ಮಹಾರಾಷ್ಟ್ರದ ಮುಂಬೈನಲ್ಲಿದೆ. ಈ ಗಣಪತಿಯ ದೇವಾಲಯವು ಅತ್ಯಂತ ಪ್ರಸಿದ್ಧವಾಗಿದೆ. ಈ ಪುರಾತನ ದೇವಾಲಯಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡರೆ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ಬಲವಾದ ನಂಬಿಕೆ ಇದೆ. ಖಜ್ರಾದ ಗಣೇಶ ದೇವಸ್ಥಾನ :ಖಜರಾನ್ ಗಣೇಶ ದೇವಸ್ಥಾನವು ಮಧ್ಯಪ್ರದೇಶದ ಇಂದೋರ್‌ನಲ್ಲಿದೆ. ಈ ದೇವಾಲಯವು ಸಾವಿರಾರು ಜನರ ನಂಬಿಕೆಯ ಕೇಂದ್ರವಾಗಿದೆ. ಇಲ್ಲಿ ವರ್ಷವಿಡೀ ಭಕ್ತರ ದಂಡೇ ಕಂಡುಬರುತ್ತದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಭವ್ಯವಾದ ವ್ಯವಸ್ಥೆ ಮಾಡಲಾಗುತ್ತದೆ. ಈ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಎಲ್ಲಾ ಇಷ್ಟಾರ್ಥಗಳು ಕೂಡ ಈಡೇರುತ್ತವೆ. ಮೋತಿ ಡುಂಗ್ರಿ ದೇವಸ್ಥಾನ :ಗಣಪತಿಗೆ ಅರ್ಪಿತವಾಗಿರುವ ಈ ದೇವಾಲಯವು ರಾಜಸ್ಥಾನದ ಜೈಪುರದಲ್ಲಿದೆ. ಮೋತಿ ಡುಂಗ್ರಿ ದೇವಾಲಯವು ದೇಶದ ಅತ್ಯಂತ ಸುಂದರವಾದ ಮತ್ತು ಪುರಾತನವಾದ ಗಣೇಶ ದೇವಾಲಯವಾಗಿದೆ. ಈ ಗಣಪತಿ ಬೇಡಿ ಬರುವ ತನ್ನ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ಬಲವಾದ ನಂಬಿದೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...