ಮುಂಚಿತವಾಗಿಯೇ ನಿಖರ ಫಲಿತಾಂಶದ ಭವಿಷ್ಯ ನುಡಿದಿದ್ದ ಸಮೀಕ್ಷೆ..! : ಆದರೆ ಈಗ ಜೀ ನ್ಯೂಸ್ ನ ಚುನಾವಣೋತ್ತರ ಸಮೀಕ್ಷೆ ಲೋಕಸಭಾ ಚುನಾವಣೆಯಲ್ಲಿ ಜನರ ನಾಡಿ ಮಿಡಿತವನ್ನು ಕಂಡುಕೊಳ್ಳುವುದರ ಮೂಲಕ ತನ್ನ ವಿಶ್ವಾಸಾರ್ಹತೆ ಹಾಗೂ ನಿಖರತೆಯನ್ನು ಸಾಬೀತುಪಡಿಸಿದೆ.ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸಿದ ಸರ್ವೇ ಈಗ ಇಂದಿನ ಫಲಿತಾಂಶಕ್ಕೆ ಹತ್ತಿರ ಇರುವುದು ಸಾಬೀತಾಗಿದೆ. : ನವದೆಹಲಿ:ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಮುಕ್ತಾಯಗೊಂಡ ನಂತರ ಜೂನ್ 4 ರಂದು ಚುನಾವಣೆಯ ಫಲಿತಾಂಶ ಯಾವ ರೀತಿ ಬರಬಹುದು ಎನ್ನುವುದರ ಕುರಿತಾಗಿ ಎಲ್ಲರಿಗೂ ಕುತೂಹಲ ಇತ್ತು, ಇಂತಹ ಸಂದರ್ಭದಲ್ಲಿ ಇಂದು ಪ್ರಕಟವಾಗಿರುವ ಫಲಿತಾಂಶದಲ್ಲಿ ಜೀ ನ್ಯೂಸ್ ನ ಸಮೀಕ್ಷೆಯನ್ನು ಹೊರತುಪಡಿಸಿ ಬಹುತೇಕ ಉಳಿದೆಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ.ಈಗ ಜೀ ನ್ಯೂಸ್ ನ ಚುನಾವಣೋತ್ತರ ಸಮೀಕ್ಷೆಯು ಲೋಕಸಭಾ ಚುನಾವಣೆಯಲ್ಲಿ ಜನರ ನಾಡಿ ಮಿಡಿತವನ್ನು ಕಂಡುಕೊಳ್ಳುವುದರ ಮೂಲಕ ನಿಖರತೆಗೆ ಹತ್ತಿರದ ಫಲಿತಾಂಶದ ಭವಿಷ್ಯ ನುಡಿದಿದ್ದರಿಂದಾಗಿ ಜನರ ವಿಶ್ವಾಸಾರ್ಹತೆಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೆ ಮೊದಲ ಬಾರಿಗೆ ಟಿವಿ ಮಾಧ್ಯಮದ ಇತಿಹಾಸವೊಂದರಲ್ಲಿ ಜೀ ನ್ಯೂಸ್ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದಷ್ಟೇ ಅಲ್ಲದೆ ಈ ಸಮೀಕ್ಷೆಯು ಇಂದಿನ ಫಲಿತಾಂಶಕ್ಕೆ ಹತ್ತಿರ ಇರುವುದಕ್ಕೆ ನೆಟ್ಟಿಗರು ಜೀ ನ್ಯೂಸ್ ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶ್ಲಾಘಿಸುತ್ತಿದ್ದಾರೆ. ಚುನಾವಣೋತ್ತರ ಸಮೀಕ್ಷೆಯ ಘೋಷಣೆ ದಿನದಂದು ಜೀ ನ್ಯೂಸ್ ಎನ್‌ಡಿಎ ಒಕ್ಕೂಟವು 305-315 ಸ್ಥಾನಗಳನ್ನು ಮತ್ತು ಇಂಡಿಯಾ ಒಕ್ಕೂಟವು 180-195 ಸ್ಥಾನಗಳನ್ನು ಪಡೆಯಲಿದೆ ಇದರ ಜೊತೆಗೆ 45 ಸ್ಥಾನಗಳಲ್ಲಿ ಇತರ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ಏಳು ಹಂತದ ಮತದಾನ ಮುಗಿದ ನಂತರ ಸಮೀಕ್ಷೆಯಲ್ಲಿ ಹೇಳಿತ್ತು. ಈ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ಜೀ ನ್ಯೂಸ್ ನ ಆಂಕರ್ ನಿಷ್ಪಕ್ಷವಾಗಿ ವಿಶ್ಲೇಷಣೆ ಮಾಡುವುದರ ಜೊತೆಗೆ ನಿಖರವಾಗಿ ಹೇಳಿದ್ದರು. ಈಗ ಅಧಿಕೃತವಾದ ಫಲಿತಾಂಶ ಪ್ರಕಟವಾಗಿರುವ ಬೆನ್ನಲ್ಲೇ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ಸುರಿಮಳೆಗಳೇ ಬಂದಿವೆ. ಈಗ ಈ ಸಮೀಕ್ಷೆಯು ಸದ್ಯದ ಫಲಿತಾಂಶಗಳಿಗೆ ಹತ್ತಿರದಲ್ಲಿದೆ ಎನ್ನುವುದು ಸಾಬೀತಾಗಿದೆ.ಸದ್ಯ ಬಂದಿರುವ ಫಲಿತಾಂಶದಲ್ಲಿ ಎನ್‌ಡಿಎ 294 ಸ್ಥಾನಗಳನ್ನು ಪಡೆದಿದ್ದು, ಇನ್ನೊಂದೆಡೆಗೆ ಇಂಡಿಯಾ ಒಕ್ಕೂಟ 231 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. का बना , बताए सबसे सटीक आंकड़े — (@) ಇನ್ನೂ ಕರ್ನಾಟಕದ ಮಟ್ಟಿಗೆ ಜೀ ನ್ಯೂಸ್ ನ ಸಮೀಕ್ಷೆಯಲ್ಲಿ ಎನ್‌ಡಿಎ ಒಕ್ಕೂಟವು 10 ರಿಂದ 14 ಸ್ಥಾನಗಳನ್ನು ಗೆಲ್ಲಲಿದೆ, ಇಂಡಿಯಾ ಒಕ್ಕೂಟವು 12 ರಿಂದ 20 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿತ್ತು, ಈ ಚುನಾವಣೋತ್ತರ ಸಮೀಕ್ಷೆಗೆ ಹತ್ತಿರ ಎನ್ನುವಂತೆ ಇಂಡಿಯಾ ಒಕ್ಕೂಟ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಎನ್‌ಡಿಎ ಒಕ್ಕೂಟವು 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಏನಿದು ಸಮೀಕ್ಷೆ? ಭಾನುವಾರದಂದು ಏಳನೇ ಹಾಗೂ ಅಂತಿಮ ಹಂತದ ಚುನಾವಣೆ ಮುಗಿದ ನಂತರ ಜೀ ನ್ಯೂಸ್ ಕೃತಕ ಬುದ್ದಿಮತ್ತೆ ಆಧರಿಸಿದ ಸಮೀಕ್ಷೆಯನ್ನು ಬಿಡುಗಡೆ ಮಾಡಿತು.ವಿಶೇಷವೆಂದರೆ ದೇಶದ ಚುನಾವಣೆಯಲ್ಲಿ ಚಾನೆಲ್ ವೊಂದು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಇದೇ ಮೊದಲ ಬಾರಿಗೆ ಬಳಸಿಕೊಂಡು ಚುನಾವಣೋತ್ತರ ಸಮೀಕ್ಷೆಯನ್ನು ಜೀ ನ್ಯೂಸ್ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಪ್ರಮುಖವಾಗಿ ವಿವಿಧ ರೀತಿಯ ದತ್ತಾಂಶಗಳನ್ನು ಬಳಸಿಕೊಳ್ಳಲಾಯಿತು. ಇದಕ್ಕಾಗಿ ಸುಮಾರು 10 ಕೋಟಿ ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವ ಮೂಲಕ ನಿಖರ ಫಲಿತಾಂಶದ ದಿಕ್ಕನ್ನು ಕಂಡುಕೊಳ್ಳುವಲ್ಲಿ ಜೀ ನ್ಯೂಸ್ ಯಶಸ್ವಿಯಾಗಿತ್ತು, ಈಗ ಈ ಸಮೀಕ್ಷೆಗೆ ಅನುಗುಣವಾಗಿಯೇ ಇಂದಿನ ಚುನಾವಣೆಯ ಅಧಿಕೃತ ಫಲಿತಾಂಶ ಬಂದಿರುವುದು ಜೀ ನ್ಯೂಸ್ ನ ನಿಖರತೆ ಹಾಗೂ ವಿಶ್ವಾಸಾರ್ಹತೆಗೆ ಹಿಡಿದ ಕನ್ನಡಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...