ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ರಾಹುಲ್- ಅಖಿಲೇಶ್ ಗೇಮ್ ಪ್ಲ್ಯಾನ್ ಹೆಣೆದಿದ್ದು ಹೇಗೆ ಗೊತ್ತೇ? 2024: ಚುನಾವಣೆಯ ಪ್ರಚಾರದುದ್ದಕ್ಕೂ ರಾಹುಲ್ ಗಾಂಧಿ ಜಾತಿ ಗಣತಿ ನಡೆಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಅಷ್ಟೇ ಅಲ್ಲದೆ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಗಳ ಜೊತೆ ಸಂಯೋಜಿಸಿ ಜನರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದರಿಂದಾಗಿ ಬಿಜೆಪಿ ಧರ್ಮಾಧಾರಿತ ರಾಜಕೀಯ ವಿಷಯಕ್ಕೆ ತಡೆಯೊಡ್ದುವಲ್ಲಿ ಯಶಸ್ವಿಯಾಯಿತು. 2024: ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ ಫಲಿತಾಂಶ ಹಲವು ಅಚ್ಚರಿಯ ಸಂಗತಿಗಳಿಗೆ ಕಾರಣವಾಗಿದೆ, ಹೌದು,ಈ ಬಾರಿ ರಾಮಮಂದಿರ ನಿರ್ಮಾಣದ ಯಶಸ್ಸಿನ ಮೇಲೆ ಮತ ಕೇಳಲು ಮುಂದಾಗಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.ಕಾಂಗ್ರೆಸ್ ಹಾಗೂ ಎಸ್ಪಿ 42 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರೆ ಇನ್ನೊಂದೆಡೆಗೆ ಬಿಜೆಪಿ ಕೇವಲ 37 ಸ್ಥಾನಗಳಿಗೆ ತೃಪ್ತಿಪಟ್ಟಿದೆ.ಉತ್ತರ ಪ್ರದೇಶದ ಯಶಸ್ವಿ 'ಇಂಡಿಯಾ' ಬಣದ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಅವರ ತಂತ್ರಗಾರಿಕೆ ಇರುವುದು ಸ್ಪಷ್ಟವಾಗಿದೆ. ಹಾಗಾದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಅಶ್ವಮೇಧಕ್ಕೆ ತಡೆಯೊಡ್ಡಿದ್ದಾದರೂ ಹೇಗೆ ಗೊತ್ತೇ? ಇದನ್ನೂ ಓದಿ: 1. ನಿಖರವಾದ ಚುನಾವಣಾ ಲೆಕ್ಕಾಚಾರ: ಸೀಟು ಹಂಚಿಕೆ ವೇಳೆ ಸಮಾಜವಾದಿ ಪಕ್ಷವು 17 ಸೀಟುಗಳನ್ನು ನೀಡಿದಾಗ ಇದಕ್ಕೆ ಒಪ್ಪಿದ ಕಾಂಗ್ರೆಸ್ ಪಕ್ಷವು ಒಪ್ಪಿದ್ದರಿಂದಾಗಿ ಇದು ಉಭಯ ಪಕ್ಷಗಳು ಬಿಜೆಪಿ ವಿರುದ್ಧ ಸಾಂಘಿಕ ಒಗ್ಗಟ್ಟು ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು 2. ತಳಮಟ್ಟದ ಕಾರ್ಯಕರ್ತರಿಗೆ ಸರಿಯಾದ ಸಂದೇಶ ರವಾನೆ: ಈ ಹಿಂದಿನ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಅತಿ ದೊಡ್ಡ ಸವಾಲೆಂದರೆ ತಳಮಟ್ಟದ ಕಾರ್ಯಕರ್ತರಿಗೆ ಮೈತ್ರಿಯ ಮಹತ್ವವನ್ನು ತಿಳಿಸುವುದಾಗಿತ್ತು, ಇದನ್ನು ತಿಳಿಸುವಲ್ಲಿ ಇಬ್ಬರು ನಾಯಕರು ಯಶಸ್ವಿಯಾಗಿದ್ದರಿಂದಾಗಿ ಇಂಡಿಯಾ ಒಕ್ಕೂಟದ ಯಶಸ್ವಿಯಾಗಿ ಜನರನ್ನು ತಲುಪುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: 3. ಬೃಹತ್ ರ್ಯಾಲಿಗಳು: ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಬಹುತೇಕ ಕಡೆ ಜಂಟಿಯಾಗಿ ಬೃಹತ್ ರ್ಯಾಲಿಗಳನ್ನು ನಡೆಸಲು ಯಶಸ್ವಿಯಾದರು, ಜೊತೆಗೆ ಈ ರ್ಯಾಲಿಯಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರಿಗೆ ಇಬ್ಬರು ನಾಯಕರ ಮಾತುಗಳು ಸ್ಫೂರ್ತಿ ತುಂಬಲು ಸಹಾಯಕವಾದವು. 4. ಸರಿಯಾದ ವಿಷಯಗಳ ಆಯ್ಕೆ: ಚುನಾವಣೆಯ ಪ್ರಚಾರದುದ್ದಕ್ಕೂ ರಾಹುಲ್ ಗಾಂಧಿ ಜಾತಿ ಗಣತಿ ನಡೆಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಅಷ್ಟೇ ಅಲ್ಲದೆ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಗಳ ಜೊತೆ ಸಂಯೋಜಿಸಿ ಜನರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದರಿಂದಾಗಿ ಬಿಜೆಪಿ ಧರ್ಮಾಧಾರಿತ ರಾಜಕೀಯ ವಿಷಯಕ್ಕೆ ತಡೆಯೊಡ್ದುವಲ್ಲಿ ಯಶಸ್ವಿಯಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...