ನೋಟಾಗೆ ಬಿಟ್ಟು ಒಂದು ಲಕ್ಷಕ್ಕೂ ಅಧಿಕ ಮತ : ಯಾರ ಮೇಲೆ ಮತದಾರರ ಸಿಟ್ಟು ? :ಇಂದೋರ್‌ನ 1 ಲಕ್ಷದ 45 ಸಾವಿರಕ್ಕೂ ಹೆಚ್ಚು ಮತದಾರರು ನೋಟಾ ಬಟನ್ ಒತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಕಾಂತಿ ಬಾಮ್ ತನ್ನ ನಾಮಪತ್ರವನ್ನು ಹಿಂಪಡೆದಿರುವ ಬಗ್ಗೆ ಇಂದೋರ್ ಜನತೆ ಕೋಪಗೊಂಡಿರುವುದು ಇದರಿಂದ ಸ್ಪಷ್ಟ :2024 ರ ಲೋಕಸಭಾ ಚುನಾವಣೆಯ ಟ್ರೆಂಡ್‌ಗಳಲ್ಲಿ,ಎನ್‌ಡಿಎ ಬಹುಮತ ಪಡೆಯುತ್ತಿರುವಂತೆ ತೋರುತ್ತಿದೆ.ಆದರೆ, ಇಂಡಿಯಾ ಮೈತ್ರಿಕೂಟ ಕೂಡ ಕಠಿಣ ಪೈಪೋಟಿ ನೀಡುತ್ತಿದೆ.ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಎನ್‌ಡಿಎ 295 ಸ್ಥಾನಗಳಲ್ಲಿ ಮತ್ತು ಇಂಡಿಯಾ ಮೈತ್ರಿಕೂಟ 225 ಸ್ಥಾನಗಳಲ್ಲಿ ಮುಂದಿದೆ.ಈ ಎಲ್ಲಾ ಟ್ರೆಂಡ್‌ಗಳ ನಡುವೆ ಮಧ್ಯಪ್ರದೇಶದಿಂದ ಶಾಕಿಂಗ್ ನ್ಯೂಸ್ ಹೊರಬೀಳುತ್ತಿದೆ. ವೆಬ್‌ಸೈಟ್ ಪ್ರಕಾರ,ಮಧ್ಯಾಹ್ನ 12:30 ರವರೆಗೆ ಇಂದೋರ್‌ನ 1 ಲಕ್ಷದ 45 ಸಾವಿರಕ್ಕೂ ಹೆಚ್ಚು ಮತದಾರರು ನೋಟಾ ಬಟನ್ ಒತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಕಾಂತಿ ಬಾಮ್ ತನ್ನ ನಾಮಪತ್ರವನ್ನು ಹಿಂಪಡೆದಿರುವ ಬಗ್ಗೆ ಇಂದೋರ್ ಜನತೆ ಕೋಪಗೊಂಡಿರುವುದು ಇದರಿಂದ ಸ್ಪಷ್ಟ. ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ನಾಮಪತ್ರ ಹಿಂಪಡೆದ ಬಳಿಕ ಬಿಜೆಪಿ ಸೇರಿದ್ದರು.ಅಕ್ಷಯ್ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವಾಗ,ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ ಮತ್ತು ಮುಖಂಡ ರಮೇಶ್ ಮೆಂಡೋಲಾ ಸಹ ಅವರೊಂದಿಗೆ ಇದ್ದರು. ಇದನ್ನೂ ಓದಿ : ನೋಟಾಗೆ 1.40 ಸಾವಿರಕ್ಕೂ ಹೆಚ್ಚು ಮತ :ಚುನಾವಣಾ ಆಯೋಗದ ಪ್ರಕಾರ, ಇಂದೋರ್‌ನ ಬಿಜೆಪಿ ಅಭ್ಯರ್ಥಿ6 ಲಕ್ಷ 70 ಸಾವಿರಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.ನೋಟಾ 1 ಲಕ್ಷ 45 ಸಾವಿರಕ್ಕೂ ಹೆಚ್ಚು ಮತ ಪಡೆದು ಎರಡನೇ ಸ್ಥಾನದಲ್ಲಿದೆ. ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಸಂಜಯ್ ಸೋಲಂಕಿ 35 ಸಾವಿರ ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.ಅಖಿಲ ಭಾರತೀಯ ಪರಿವಾರ ಪಕ್ಷದ ಪವನ್ ಕುಮಾರ್ ಇದುವರೆಗೆ 10 ಸಾವಿರ ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...