2024: ಖೂಬಾಗೆ ಸೋಲಿನ ರುಚಿ ತೋರಿಸಿದ 26 ವರ್ಷದ ಸಾಗರ್‌ ಖಂಡ್ರೆ! 2024: ಈ ಹಿಂದಿನ ಚುನಾವಣೆಗಳಲ್ಲಿ ಮಾಜಿ ಸಿಎಂ ಎನ್.ಧರಂ ಸಿಂಗ್ ಮತುತ ಈಶ್ವರ ಬಿ.ಖಂಡ್ರೆರನ್ನು ಸೋಲಿಸಿದ್ದ ಭಗವಂತ ಖೂಬಾ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ತಮ್ಮ ತಂದೆಯನ್ನು ಚುನಾವಣೆಯಲ್ಲಿ ಸೋಲಿಸಿದ್ದ ಖೂಬಾರನ್ನು ಈ ಚುನಾವಣೆಯಲ್ಲಿ ಮಣಿಸುವ ಮೂಲಕ ಸಾಗರ್ ಸೇಡು ತೀರಿಸಿಕೊಂಡತಾಗಿದೆ. 2024:ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆಯವರ ಪುತ್ರ ಸಾಗರ್ ಖಂಡ್ರೆ ಜಯ ಗಳಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಈ ಗೆಲುವಿನ ಮೂಲಕ ಸಾಗರ್ ಖಂಡ್ರೆಯವರು ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ. ಪ್ರಸಕ್ತಗೆ ಆಯ್ಕೆಯಾದ ಸಂಸದರಲ್ಲಿ ಅತಿ ಕಿರಿಯ ವಯಸ್ಸಿನ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಸಾಗರ್ ಖಂಡ್ರೆ ಪಾತ್ರರಾಗಲಿದ್ದಾರೆ. ಪದವೀಧರರಾಗಿರುವ ಸಾಗರ್‌ಗೆ ಈಗ ಜಸ್ಟ್‌ 26 ವರ್ಷ ವಯಸ್ಸು. ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ಬಿಜೆಪಿ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾರಿಗೆ ಸೋಲಿನ ರುಚಿ ತೋರಿಸುವ ಮೂಲಕ ಅವರು ಸಂಸತ್ತು ಪ್ರವೇಶಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಈ ಹಿಂದಿನ ಚುನಾವಣೆಗಳಲ್ಲಿ ಮಾಜಿ ಸಿಎಂ ಎನ್.ಧರಂ ಸಿಂಗ್ ಮತುತ ಈಶ್ವರ ಬಿ.ಖಂಡ್ರೆರನ್ನು ಸೋಲಿಸಿದ್ದ ಭಗವಂತ ಖೂಬಾ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ತಮ್ಮ ತಂದೆಯನ್ನು ಚುನಾವಣೆಯಲ್ಲಿ ಸೋಲಿಸಿದ್ದ ಖೂಬಾರನ್ನು ಈ ಚುನಾವಣೆಯಲ್ಲಿ ಮಣಿಸುವ ಮೂಲಕ ಸಾಗರ್ ಸೇಡು ತೀರಿಸಿಕೊಂಡತಾಗಿದೆ. ಪ್ರಧಾನಿ ಮೋದಿಯವರ ಪ್ರಭಾವ ಮತ್ತು ಅತಿಯಾದ ಆತ್ಮವಿಶ್ವಾಸವೇ ಭಗವಂತ ಖೂಬಾರ ಹೀನಾಯ ಸೋಲಿಗೆ ಕಾರಣವೆಂದು ಹೇಳಲಾಗುತ್ತಿದೆ. ಪಕ್ಷದ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪರಿಣಾಮ ಸ್ವಪಕ್ಷೀಯರೇ ಅಭ್ಯರ್ಥಿ ಪರ ಕೆಲಸ ಮಾಡಿಲ್ಲವೆಂದು ಹೇಳಲಾಗಿದೆ. ಹಿಂದಿನ ಎರಡೂ ಚುನಾವಣೆಗಳಲ್ಲಿ ಮೋದಿ ಅಲೆಯಲ್ಲಿ ಗೆದ್ದಿದ್ದ ಖೂಬಾರಿಗೆ ಈ ಬಾರಿ ಮತದಾರ ಕೈಕೊಟ್ಟಿದ್ದಾನೆ. ಇದನ್ನೂ ಓದಿ: ಸದ್ಯದ ಮಾಹಿತಿ ಪ್ರಕರಾ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ6,65,162 ಮತಗಳನ್ನು ಪಡೆದುಕೊಂಡಿದ್ದು, ತಮ್ಮ ಪ್ರತಿಸ್ಪರ್ಧಿಗಿಂತ ಬರೋಬ್ಬರಿ 1,29,396 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಒಟ್ಟು 5,35,766 ಮತಗಳನ್ನು ಪಡೆದಿದ್ದು, 1,29,396 ಮತಳಿಂದ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...